ಕನ್ನಡ ಹೋರಾಟಕ್ಕೆ ಮರುಜೀವ ನೀಡಲು ಸಮಾಲೋಚನಾ ಸಭೆ 12ರಂದು

ಕಾಸರಗೋಡು: ಅಚ್ಚ ಕನ್ನಡ ಪ್ರದೇಶವಾಗಿದ್ದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳು ನಾಶವಾಗುತ್ತಿರುವಾಗ ಕನ್ನಡಿಗರು ಮೌನ ವಹಿಸಿದರೆ ಮುಂದೆ ಕನ್ನಡ ಹುಡುಕಿ ದರೂ ಸಿಗದ ಸ್ಥಿತಿ ನಿರ್ಮಾಣವಾಗಲಿದೆ ಯೆಂಬ ಪ್ರಜ್ಞೆ ಹಿನ್ನೆಲೆಯಲ್ಲಿ ಹಿರಿಯರು ನಡೆಸುತ್ತಿದ್ದ ಪ್ರತಿಭಟನೆಗೆ ಮರುಜೀವ ನೀಡಲು ತೀರ್ಮಾನಿಸಲಾಗಿದೆ. 1956 ನವಂಬರ್ ಒಂದರಂದು ಭಾಷಾವಾರು ಪ್ರಾಂತ್ಯ ರಚನೆಯಿಂದಾಗಿ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿದ್ದು ಇತಿಹಾಸವಾದರೂ ಆ ಬಳಿಕ ಕನ್ನಡದ ಅವನತಿಗೆ ಆರಂಭವಾಗಿತ್ತು. ಇದರ ವಿರುದ್ಧ ಕೆಲವು ವರ್ಷದ ಹಿಂದೆವರೆಗೆ ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ …

ಬೆಳ್ಳೂರು: ಬಂಟ ಮಹಿಳಾ ಸಂಘದಿಂದ ಅಡುಗೆ ಸ್ಪರ್ಧೆ

ಮುಳ್ಳೇರಿಯ: ಬಂಟ ಮಹಿಳಾ ಸಂಘ ಬೆಳ್ಳೂರು ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ 13ನೇ ಕಾರ್ಯಕ್ರಮವಾದ ಬಂಟ ಅಡುಗೆ ಸ್ಪರ್ಧೆ ಅ. ೧೨ರಂದು ಪಿಂಡಗ ದಿ| ರಾಮ್‌ಮೋಹನ್ ರೈಯವರ ಮನೆಯಲ್ಲಿ ನಡೆಯಲಿದೆ. 10 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಕರ್ನಾಟಕ ಧಾರ್ಮಿಕದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕ್ಕಳ ದೀಪ ಪ್ರಜ್ವಲನೆ ನಡೆಸುವರು. ಬಂಟ ಮಹಿಳಾ ಸಂಘ ಬೆಳ್ಳೂರು ಇದರ ಅಧ್ಯಕ್ಷೆ ಡಾ| ವಿದ್ಯಾ ಮೋಹನ್‌ದಾಸ್ ರೈ ಬೆಳ್ಳೂರು ಅಧ್ಯಕ್ಷತೆ ವಹಿಸುವರು. 11.15ರಿಂದ ಮನರಂಜನಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12ರಿಂದ ಸಭಾ …

ಯುವ ಅಧ್ಯಾಪಿಕೆ, ಪತಿ ವಿಷ ಸೇವಿಸಿ ಸಾವು: ಕಡಂಬಾರ್ ಬಳಿ ದಾರುಣ ಘಟನೆ ; ಮಗುವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದು ವಿಷ ಸೇವಿಸಿದ ದಂಪತಿ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರ್‌ನಲ್ಲಿ ಯುವ ಅಧ್ಯಾಪಿಕೆ ಹಾಗೂ ಪತಿ ವಿಷ ಸೇವಿಸಿ ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಕಡಂಬಾರು ಚೆಂಬುಪದವು ನಿವಾಸಿ ದಿ| ಪುಷ್ಪರಾಜ್ ಎಂಬವರ ಪುತ್ರ ಅಜಿತ್ (35), ಪತ್ನಿ ಶ್ವೇತ (28) ಎಂಬವರು ಮೃತಪಟ್ಟ ದಂಪತಿಯಾಗಿದ್ದಾರೆ. ಅಜಿತ್ ಪೈಂಟಿಂಗ್ ಕಾರ್ಮಿಕನಾಗಿದ್ದಾರೆ. ಶ್ವೇತ ವರ್ಕಾಡಿ ಬೇಕರಿ ಬಳಿಯ ಖಾಸಗಿ ಶಾಲೆಯೊಂದರ ಅಧ್ಯಾಪಿಕೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆ ಈ ದಂಪತಿ ವಿಷ ಸೇವಿಸಿದ್ದಾರೆಂದು ಅಂದಾಜಿಸಲಾಗಿದೆ. ಮನೆಯಲ್ಲಿ ಅಜಿತ್, ಪತ್ನಿ ಶ್ವೇತ, …

ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ಎಸೆಯಲ್ಪಟ್ಟು ಎಂಟರ ಬಾಲಕ ಮೃತ್ಯು

ಕಾಸರಗೋಡು: ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಗು ಮೃತಪಟ್ಟಿದೆ. ಉಳಿಯತ್ತಡ್ಕ ನಿವಾಸಿ ಪ್ರಭಾಕರನ್-ಅನುಷ ದಂಪತಿಯ ಏಕ ಪುತ್ರ ಪಿ. ಪ್ರನೂಶ್ (8) ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ ಶುಕ್ರವಾರ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿತ್ತು. ಬೇಳ ಸೈಂಟ್ ಮೆರೀಸ್ ಹೈಸ್ಕೂಲ್‌ನ ವಿದ್ಯಾರ್ಥಿ ಯಾಗಿದ್ದಾನೆ. ಈ ಶಾಲೆಯಲ್ಲಿ ತಾಯಿ ಅನುಷ ಅಧ್ಯಾಪಿಕೆಯಾಗಿದ್ದಾರೆ. ಶುಕ್ರವಾರ ಸಂಜೆ ಪ್ರಭಾಕರನ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಅನುಷಾ ಹಾಗೂ ಪ್ರನೂಶ್ ಸಹ ಸವಾರರಾಗಿದ್ದರು. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ …

ಸೀತಾಂಗೋಳಿಯಲ್ಲಿ ಬದಿಯಡ್ಕ ನಿವಾಸಿಗೆ ಇರಿದು ಕೊಲೆಗೈಯ್ಯಲೆತ್ನ: ಮುಖ್ಯ ಆರೋಪಿಗಳ ಪೈಕಿ ಓರ್ವ ಸೆರೆ; ಇತರರಿಗಾಗಿ ಶೋಧ

ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ನೀರ್ಚಾಲು ಬೇಳ ಚೌಕಾರು ನಿವಾಸಿ ಅಕ್ಷಯ್ (34) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್, ಎಸ್‌ಐ ಕೆ. ಶ್ರೀಜೇಶ್ ಎಂಬಿವರು ಸೆರೆ ಹಿಡಿದಿದ್ದಾರೆ. ಇತರ 12 ಮಂದಿ ಆರೋಪಿಗಳಿಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ 11.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ. ಬದಿಯಡ್ಕದಲ್ಲಿ ಮೀನು ಮಾರಾಟಗಾ ರನಾದ ಅನಿಲ್ ಕುಮಾರ್‌ರನ್ನು ಇರಿದು ಕೊಲೆಗೈಯ್ಯಲೆತ್ನಿಸಲಾಗಿದೆ. …

ಕಂಚಿಕಟ್ಟೆ ಸೇತುವೆ ಮೂಲಕ ಸಂಚಾರಕ್ಕೆ ತಡೆಯೊಡ್ಡಿ ಕಟ್ಟಿದ ಗೋಡೆ ನಾಶಗೊಳಿಸಿರುವುದು ನಂಬ್ರವಿಲ್ಲದ ಜೆಸಿಬಿ ಎಂಬ ಶಂಕೆ: ತನಿಖೆ ಆರಂಭ

ಕುಂಬಳೆ: ಅಪಾಯಕಾರಿಯಾದ ಕಂಚಿಕಟ್ಟೆ ಸೇತುವೆ ಮೂಲಕ ಘನ ವಾಹನಗಳು ಸಂಚರಿಸುವುದನ್ನು ತಡೆಯಲು ಸ್ಥಾಪಿಸಿದ ಗೋಡೆಯನ್ನು ಕೆಡವಿ ಹಾಕಿರುವುದು ನಂಬರ್ ಪ್ಲೇಟ್ ಇಲ್ಲದೆ ತಲುಪಿದ ಜೆಸಿಬಿಯಾಗಿದೆ ಎಂಬ ಸೂಚನೆಯಿದೆ. ಸೇತುವೆ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಸೇತುವೆ ಮೂಲಕ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿದ್ದರು. ಇದರಂತೆ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಪಂಚಾಯತ್ ಅಧಿಕಾರಿಗಳು ಕಾಂಕ್ರೀಟ್ ಗೋಡೆ ಸ್ಥಾಪಿಸಿದ್ದರು. ಒಂದೂವರೆ ವರ್ಷಗಳಿಂದ ಈ ಮೂಲಕ ವಾಹನ ಸಂಚಾರ ಮೊಟಕುಗೊಂಡಿತ್ತು.  ಕಳೆದ ಶನಿವಾರ ರಾತ್ರಿ ಈ ಗೋಡೆಯನ್ನು ನಾಶಪಡಿಸಲಾಗಿದೆ. ಘಟನೆಯ …

ಅಳಿಯನೊಂದಿಗಿರುವ ವಿರೋಧ: ಕ್ವಾರ್ಟರ್ಸ್‌ಗೆ ನುಗ್ಗಿ ಅತ್ತೆಗೆ ಆಕ್ರಮಣ; ಇಬ್ಬರು ಸೆರೆ

ಕುಂಬಳೆ: ಅಳಿಯನೊಂದಿಗಿರುವ ದ್ವೇಷದಿಂದ  ಪತ್ನಿಯ ತಾಯಿಗೆ ಕ್ವಾರ್ಟರ್ಸ್‌ಗೆ ನುಗ್ಗಿ ಆಕ್ರಮಣಗೈದು ಮನೆಯ ಉಪಕರ ಣಗಳನ್ನು  ನಾಶಗೊಳಿಸಿರುವುದಾಗಿ ದೂರಲಾಗಿದೆ.  ಕೇಸು ದಾಖಲಿಸಿದ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಕೊಯಿಪ್ಪಾಡಿಯ ಸೈಫುದ್ದೀನ್ (32), ಶಾಂತಿಪಳ್ಳ ಲಕ್ಷಂವೀಡು ನಿವಾಸಿ ಮೊಹಮ್ಮದ್ ಶಫೀಕ್ (23) ಎಂಬಿವರನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ.  ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪೆರ್ವಾಡಿನಲ್ಲಿರುವ ಒಂದು ಕ್ವಾರ್ಟರ್ಸ್‌ನಲ್ಲಿ ವಾಸ ಮಾಡುತ್ತಿದ್ದ ಮಹಿಳೆ ಆಕ್ರಮಣಕ್ಕೆ ತುತ್ತಾಗಿದ್ದಾರೆ.

ಮನೆ ಅಂಗಳದಲ್ಲಿದ್ದ ಬೈಕ್ ಉರಿದು ನಾಶ ಕಿಚ್ಚಿರಿಸಿದ ಶಂಕೆ

ಮಂಗಲ್ಪಾಡಿ: ಅಂಗಳದಲ್ಲಿರಿ ಸಿದ ಬೈಕ್ ಉರಿದು ನಾಶಗೊಂ ಡಿದೆ. ಪುಳಿಕುತ್ತಿ ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ನಿವಾಸಿ ಪ್ರವೀಣ್ ಶೆಟ್ಟಿ ಎಂಬವರ ಬೈಕ್ ಉರಿದು ನಾಶಗೊಂಡಿದೆ. ಭಾನುವಾರ ರಾತ್ರಿ 9.30ರ ವೇಳೆ ಮನೆಯ ಅಂಗಳದಲ್ಲಿ ಬೈಕ್‌ನ್ನು ನಿಲ್ಲಿಸಲಾಗಿತ್ತು. ಮಧ್ಯ ರಾತ್ರಿ ಸುಮಾರು 1 ಗಂಟೆ ವೇಳೆ ಎಚ್ಚರಗೊಂಡಾಗ ಕಿಟಿಕಿ ಮೂಲಕ ಅಂಗಳದಿAದ ಬೆಳಕು ಕಂಡು ಬಂದಿದೆ. ಕೂಡಲೇ ಪ್ರವೀಣï ಬಾಗಿಲು ತೆರೆದು ಅಂಗಳಕ್ಕೆ ಹೋ ದಾಗ ಬೈಕ್ ಉರಿಯುತ್ತಿರುವುದು ಕಂಡುಬAದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು …

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡದ ತನಿಖೆ ಶನಿವಾರ ಆರಂಭ; ತನಿಖೆಯ ಮೇಲ್ವಿಚಾರಣೆ ಎ.ಡಿ.ಜಿ.ಪಿ ಎಚ್. ವೆಂಕಟೇಶ್‌ರಿಗೆ

ತಿರುವನಂತಪುರ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಕವಚಗಳ ಚಿನ್ನ ನಾಪತ್ತೆಯಾದ ಪ್ರಕರಣ ತನಿಖೆಗಾಗಿ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಿಂದ ತನಿಖೆ ಆರಂಭಿಸಲಿದೆ.  ಎಡಿಜಿಪಿ ಎಚ್. ವೆಂಕಟೇಶ್‌ರಿಗೆ ತನಿಖೆಯ ಮೇಲ್ವಿಚಾರಣೆ ವಹಿಸಿಕೊಡಲಾಗಿದೆ. ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ಬಗ್ಗೆ ತನಿಖೆ ನಡೆಸಿದ ತಿರುವಿದಾಂಕೂರ್ ಮುಜುರಾಯಿ ಮಂಡಳಿಯ ವಿಜಿಲೆನ್ಸ್ ಆಂಡ್ ಸೆಕ್ಯುರಿಟಿ ಅಧಿಕಾರಿ ಹೈಕೋರ್ಟ್‌ಗೆ ನಿನ್ನೆ ವರದಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎ. ರಾಜಾ ವಿಜಯ್ ರಾಘವನ್ ಮತ್ತು  …

ಕುಂಬಳೆಯಲ್ಲಿ ಶಾಲೆಯೊಳಗೆ ಕಲೋತ್ಸವ, ಹೊರಗೆ ರಾಜಕೀಯ ಪಕ್ಷಗಳ ಘೋಷಣೆ ಸ್ಪರ್ಧೆಗಳು

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದೆಡೆ ಕಲೋತ್ಸವ ನಡೆಯುತ್ತಿದ್ದಂತೆ ಮತ್ತೊಂದೆಡೆ ರಾಜಕೀಯ ಪಕ್ಷದವರು ಘೋಷಣೆ ಮೊಳಗಿಸುತ್ತಾ ಸ್ಪರ್ಧೆಗಿಳಿದಿರುವುದು ನಿನ್ನೆ ಕಂಡು ಬಂದಿದೆ. ಬಿಜೆಪಿ ಏಕಾಂಗಿಯಾಗಿ ಘೋಷಣೆ ಮೊಳಗಿಸುತ್ತಿದ್ದಾಗ ಸಿಪಿಎಂ, ಎಸ್‌ಡಿಪಿಐ ಹಾಗೂ ಮುಸ್ಲಿಂ ಲೀಗ್ ಪಕ್ಷಗಳು ಒಟ್ಟಾಗಿ ಘೋಷಣೆ ಮೊಳಗಿಸಿವೆ. ಈ ಎಲ್ಲಾ ಘೋಷಣೆಗಳ ವಿಷಯ ಕೋಮುವಾದವೇ ಆಗಿತ್ತು. ಕೋಮುವಾದ ವಿರುದ್ಧ ಹೋರಾಟದಂಗವಾಗಿ ನಡೆದ ಘೋಷಣೆ ಒಂದನ್ನೊಂದು ಮೀರಿಸುವಂತದ್ದಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳು ಕಲೋತ್ಸವ ಸ್ಪರ್ಧೆಗಳನ್ನು ವೀಕ್ಷಿಸುತ್ತಿದ್ದರು. ಇದೇ ಸಂದರ್ಭದಲ್ಲಿ  ಶಾಲಾ ಮೈದಾನದ ಹೊರಗೆ ರಾಜಕೀಯ …