ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣ: ವಿಧಾನಸಭೆಯಲ್ಲಿ ಭುಗಿಲೆದ್ದ ಆಕ್ರೋಶ: ಮುಜರಾಯಿ ಸಚಿವರ ರಾಜೀನಾಮೆಗೆ ವಿಪಕ್ಷೀಯರ ಪಟ್ಟು
ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರ ಪಾಲಕ ಮೂರ್ತಿಯ ಚಿನ್ನ ನಾಪತ್ತೆಯಾದ ಪ್ರಕರಣದ ಕಾವು ವಿಧಾನಸಭೆಯನ್ನು ಇಂದು ಅಲ್ಲೋಲ ಕಲ್ಲೋಲಗೊಳಿಸಿದೆ. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನಃ ಆರಂಭಗೊಂಡು ಪ್ರಶ್ನೋತ್ತರ ವೇಳೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ಮಾತನಾಡು ತ್ತಿರುವಂತೆಯೇ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಎದ್ದು ನಿಂತು ಪ್ರಶ್ನೋತ್ತರ ವೇಳೆಯನ್ನು ಬದಿಗಿರಿಸಿ ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರಹಪಟ್ಟರು. ಆದರೆ ಅದಕ್ಕೆ ಕಿವಿಗೊಡದ ವಿಧಾನಸಭಾಧ್ಯಕ್ಷ ಎ.ಎನ್. ಶಂಸೀರ್ ಪ್ರಶ್ನೋತ್ತರ ವೇಳೆಯನ್ನು ಮುಂದುವರಿಸಿದರು. …