ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಮಹೋತ್ಸವ

ಕಾಸರಗೋಡು: ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆಯಂಗವಾಗಿ ಭಜನಾ ಮಹೋತ್ಸವ ಜರಗಿತು. ಗಣಪತಿ ಹೋಮ, ದೀಪ ಪ್ರತಿಷ್ಠೆ ಬಳಿಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಇದೇ ವೇಳೆ ಗುಡ್ಡೆ ಶ್ರೀ ಮಹಾಲಿಂಗೇಶ್ವರ ಸನಾತನ ಧರ್ಮ ಪಾಠ ಶಾಲೆ ಮಕ್ಕಳ ನೃತ್ಯ ಭಜನೆ ಜರಗಿತು. ಕ್ಷೇತ್ರದಲ್ಲಿ ನಾಗತಂಬಿಲ, ಮಹಾಪೂಜೆ, ತುಲಾಭಾರ, ದೀಪಾರಾಧನೆ ನಡೆಯಿತು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರ, ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ಹೊರೆಕಾಣಿಕೆ ಸಮರ್ಪಣೆ ಜರಗಿತು.

ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ

ಕಾಸರಗೋಡು: ಪುಸ್ತಕವೆಂಬ ಜ್ಞಾನದ ಬೆಳಕನ್ನು ಪಸರಿಸುವ ಮೂಲಕವೇ ಉದ್ಘಾಟನೆಗೊಂಡ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ ಎಂದು  ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಸರಗೋಡಿನಲ್ಲಿ ಶುದ್ಧವಾದ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದು ಅವರು ನುಡಿದರು. ಇದೇ ವೇಳೆ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಎನ್. ಚನಿಯಪ್ಪ ನಾಯ್ಕ್‌ರನ್ನು …

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ: ಬ್ರಹ್ಮಕಲಶೋತ್ಸವ ಸಮಿತಿ ಸಭೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲ ಶೋತ್ಸವ ಸಮಿತಿ ಸಭೆ ನಿನ್ನೆ ಕ್ಷೇತ್ರ ಪರಿಸರದಲ್ಲಿ ಜರಗಿತು. ಬ್ರಹ್ಮಕಲಶೊ ತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣನ್ ಚೆನ್ನಿಕ್ಕೆರೆ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಗಣೇಶ್ ಅಮೈ ಮುಂದೆ ನಡೆಯಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷ ರಾಮನ್ ಚೆನ್ನಿಕೆರೆ, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಅರವಿಂದ ನಾಯ್ಕ್, ಶಿಲ್ಪ ವರಪ್ರಸಾದ್ ಮಾತನಾಡಿದರು. ಗುರುಸ್ವಾಮಿಗಳಾದ ಗೋಪಾಲ, ನಾರಾಯಣ, ಮಹಿಳಾ …

ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯ ತೆರವುಗೊಳಿಸಿ ಮಾದರಿಯಾದ ನವೋದಯ ಫ್ರೆಂಡ್ಸ್ ಕ್ಲಬ್

ಕುಂಬಳೆ:  ಶಾಂತಿಪಳ್ಳದಿಂದ ಭಾಸ್ಕರ ನಗರ ವರೆಗೆ ರಸ್ತೆ ಬದಿಗಳಲ್ಲಿ  ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯಗಳನ್ನು  ಭಾಸ್ಕರನಗರದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯ ಕರ್ತರು ತೆರವುಗೊಳಿಸಿ ಶುಚೀಕರಣ ನಡೆಸಿ ಮಾದರಿಯಾಗಿದ್ದಾರೆ. ಶುಚೀ ಕರಣ ಕಾರ್ಯದಲ್ಲಿ ನಾಗರಿಕರೂ ಪಾಲ್ಗೊಂಡರು. ಇದೇ ರೀತಿಯಲ್ಲಿ ನಾಡಿನ ಎಲ್ಲಾ ಕ್ಲಬ್‌ಗಳು  ಶುಚೀ ಕರಣಕ್ಕೆ ಮುಂದಾದರೆ ವಿವಿಧೆಡೆ ಎಸೆಯಲಾದ ತ್ಯಾಜ್ಯಗಳು ಪೂರ್ಣವಾಗಿ ತೆರವುಗೊಂಡು ನಾಡು ನೆಮ್ಮದಿಪಡಲಿ ದೆಯೆಂದು ಕ್ಲಬ್‌ನ ಕಾರ್ಯಕರ್ತರು ತಿಳಿಸಿದ್ದಾರೆ. ಕ್ಲಬ್‌ನ ಕಾರ್ಯಕರ್ತರು ನಡೆಸಿದ ಈ ಮಾದರಿ ಕಾರ್ಯವನ್ನು ಪಂಚಾಯತ್ ಅಧ್ಯಕ್ಷ …

ಪ್ರಯಾಣಿಕರೆಲ್ಲ ಇಳಿದರೂ 10 ತಿಂಗಳ ಹಿಂದೆ ಜೈಲಿನಿಂದ ಹೊರ ಬಂದ ವ್ಯಕ್ತಿ ಮಾತ್ರ ಬಾಕಿ: ಕುಂಡಂಗುಳಿಯಲ್ಲಿ ದುರಂತ ಘಟನೆ

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ವೃದ್ದ ಕುಸಿದು ಬಿದ್ದು ಮೃತಪಟ್ಟರು. ಮೂನಾಡ್ ಪೇತಾಳಂಕಯದಲ್ಲಿ ವಾಸಿಸುವ  ಎಂ.ಕೆ. ರವೀಂದ್ರನ್ (65) ಕುಸಿದು ಬಿದ್ದು ಮೃತಪಟ್ಟವರು. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಪೊಯಿನಾಚಿಯಿಂದ ಕುಂಡಂಗುಳಿಗಿರುವ ಖಾಸಗಿ ಬಸ್‌ನಲ್ಲಿ ಪೆರ್ಲಡ್ಕ ಬಸ್ ನಿಲ್ದಾಣದಿಂದ ರವೀಂದ್ರನ್ ಬಸ್‌ಗೇರಿದ್ದರು. ಕೊನೆಯ ಸ್ಟೋಪ್ ಆದ ಕುಂಡಂಗುಳಿಗೆ ಬಸ್ ತಲುಪಿದಾಗ ಇತರ ಪ್ರಯಾಣಿಕರೆಲ್ಲ ಇಳಿದು ಹೋದರೂ ಇವರು ಮಾತ್ರ ಇಳಿದಿರಲಿಲ್ಲ. ಸೀಟಿನಲ್ಲಿ ಕುಳಿತಿದ್ದ ಇವರನ್ನು ನಿರ್ವಾಹಕ ತಟ್ಟಿ ಕರೆದರು. ಆದರೂ ಮಿಸುಕಾಡಲಿಲ್ಲ. ಶಂಕೆ ತೋರಿ …

ಡ್ರೈವಿಂಗ್ ಟೆಸ್ಟ್‌ಗೆ ಹೋದ ಯುವತಿ ನಾಪತ್ತೆ

ಬದಿಯಡ್ಕ: ಡ್ರೈವಿಂಗ್ ಟೆಸ್ಟ್‌ಗೆಂದು ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾಗಿ ರುವುದಾಗಿ   ಮನೆಯವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆಯ ಪರಿಸರ ನಿವಾಸಿಯಾಗಿರುವ  31ರ ಹರೆಯದ ಯುವತಿ ನಾಪತ್ತೆಯಾಗಿ ರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ವಿದ್ಯಾನಗರದಲ್ಲಿ ಡ್ರೈವಿಂಗ್ ಟೆಸ್ಟ್ ಇದೆಯೆಂದು ತಿಳಿಸಿ ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಯುವತಿ ನಂತರ ಮನೆಗೆ ಹಿಂತಿರುಗಿಲ್ಲವೆಂದು ಪತಿ  ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಾಕ್ಟಿಕಲ್ ಪರೀಕ್ಷೆಗೆಂದು ಮನೆಯಿಂದ ಹೋದ ವಿದ್ಯಾರ್ಥಿನಿ ನಾಪತ್ತೆ

ಬದಿಯಡ್ಕ: ಪ್ರಾಕ್ಟಿಕಲ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೋದ 17 ವರ್ಷದ ಪ್ಲಸ್‌ಟು ವಿದ್ಯಾರ್ಥಿನಿ ನಾಪತ್ತೆಯಾಗಿರು ವುದಾಗಿ ತಾಯಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಗೊಳಪಟ್ಟ ಪ್ರದೇಶ ನಿವಾಸಿ ಹಾಗೂ  ಕಾಸರಗೋಡಿನ ಶಾಲೆ ಯೊಂದರ ಪ್ಲಸ್‌ಟು ವಿದ್ಯಾರ್ಥಿನಿ ನಿನ್ನೆ ಬೆಳಿಗ್ಗೆ 7.45ಕ್ಕೆ ಪ್ರಾಕ್ಟಿಕಲ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೋಗಿದ್ದು, ಅನಂತರ ಮನೆಗೆ ಹಿಂತಿರುಗಿಲ್ಲವೆಂದು ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಬದಿಯಡ್ಕ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬಿದ್ದು ಗಾಯಗೊಂಡಿದ್ದ ಯುವತಿ ಮೃತ್ಯು

ಉಪ್ಪಳ: ಮನೆಯೊಳಗೆ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಬಾಯಾರು ಸಜಂಕಿಲ ಕೋಡಿಯಡ್ಕ ನಿವಾಸಿ ಅನಂತ ಪದ್ಮನಾಭ ಎಂಬವರ ಪತ್ನಿ ಗಂಗ (37) ಮೃತಪಟ್ಟ ಯುವತಿ. ಈ ತಿಂಗಳ 8ರಂದು ಮುಂಜಾನೆ ಇವರು ಮನೆಯೊಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರೆ ನ್ನಲಾಗಿದೆ. ಇದರಿಂದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತರು ಪತಿ, ಪುತ್ರಿ ಧಾತ್ರಿ, ತಾಯಿ ಸಹಿತ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ.

ಖ್ಯಾತ ಜಾದೂಗಾರ ಪ್ರೊ. ಮಾಧವ ನಿಧನ

ಕಾಸರಗೋಡು: ಹಿರಿಯ ಜಾದುಗಾರ ಪ್ರೊ. ಮಾಧವ (73) ನಿನ್ನೆ ನಿಧನ ಹೊಂದಿದರು. ಮೂಲತಃ ಉಬ್ರಂಗಳ ನಿವಾಸಿಯಾಗಿರುವ ಇವರು ಕೂಡ್ಲುನಲ್ಲಿ ವಾಸವಾಗಿದ್ದರು. ನೋರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್‌ನಲ್ಲಿ ಮೆನೇಜರ್ ಆಗಿದ್ದರು. ೧೫ ಕಲಾವಿದರನ್ನೊಳಗೊಂಡ ಮಾಯಾರಂಜಿನಿ ತಂಡವನ್ನು ಕಟ್ಟಿ ಇಲ್ಯೂಶ್ಯನ್ ಜಾದು ಸಾಮಗ್ರಿಗಳನ್ನು ಬಳಸಿ ಕರ್ನಾಟಕ, ಕೇರಳದ ವಿವಿಧೆಡೆ ೫ ದಶಕಗಳ ಕಾಲ ಪ್ರದರ್ಶನ ನೀಡಿದ್ದಾರೆ. ಇವರ ಪುತ್ರ ಮಾಸ್ಟರ್ ಚಿಂತನ್ ಜಾದೂಗಾರನಾಗಿದ್ದು, ರಾಷ್ಟ್ರದ ಗಮನ ಸೆಳೆದಿದ್ದರಾದರೂ ಈ ಹಿಂದೆ …

ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಮೂವರಿಗೆ ತಂಡದಿಂದ ಹಲ್ಲೆ

ಮಂಜೇಶ್ವರ: ಪಾಲಕ್ಕಾಡ್‌ನಿಂದ ಮಂಜೇಶ್ವರ ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಲಾರಿಯಲ್ಲಿದ್ದ ಮೂರು ಮಂದಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದ. ಕಾಸರಗೋಡು ನಿವಾಸಿ ಅಬ್ಬಾಸ್, ಉತ್ತರಪ್ರದೇಶ ನಿವಾಸಿಗಳೂ ಪಾಲಕ್ಕಾಡ್‌ನಲ್ಲಿ ವಾಸಿಸುವ ಫುರ್ಖಾನ್ (47), ದಾವೂದ್ (28) ಎಂಬವರಿಗೆ ಹಲ್ಲೆಗೈಯ್ಯಲಾಗಿದೆ. ಈ ಪೈಕಿ ಫುರ್ಖಾನ್ ಹಾಗೂ ದಾವೂದ್‌ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1.30ರ  ವೇಳೆ ಘಟನೆ ನಡೆದಿದೆ. ಈ ಮೂರು  ಮಂದಿ ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು ಉದ್ಯಾವರಕ್ಕೆ ತಲುಪಿಸಿ ಅವುಗಳನ್ನು ಉದ್ಯಾವರ ಅಂಡರ್ ಪಾಸ್ …