ಕೊಯಿಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರ: ತಡೆಗೋಡೆ ಬಹುತೇಕ ನಾಶ; ನಾಗರಿಕರಲ್ಲಿ ಹೆಚ್ಚಿದ ಆತಂಕ

ಕುಂಬಳೆ: ಇಲ್ಲಿನ ಕೊಯಿಪ್ಪಾಡಿಯಲ್ಲಿ ಸಮುದ್ರಕ್ಕೆ ನಿರ್ಮಿಸಲಾದ ತಡೆಗೋಡೆ ಸಮುದ್ರಪಾಲಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಸಮುದ್ರ ತಡೆಗೋಡೆ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಮುದ್ರಪಾ ಲಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಕಡಲ್ಕೊರೆತ ತಡೆಯಲೆಂದು ತಂದು ಹಾಕಲಾದ ಕಗ್ಗಲ್ಲುಗಳೆಲ್ಲ ಸಮುದ್ರಪಾಲಾಗುವು ದರೊಂದಿಗೆ ಇಲ್ಲಿನ ಜನರಲ್ಲಿ ಆತಂಕ ಇನ್ನಷ್ಟು ತೀವ್ರಗೊಂಡಿದೆ.  ಸಮುದ್ರಬ ದಿಯಲ್ಲಿರುವ ತೆಂಗಿನ ಮರಗಳು ಯಾವುದೇ ಕ್ಷಣದಲ್ಲಿ ಕುಸಿದುಬೀಳುವ ಸಾಧ್ಯತೆಯಿದೆ. ಕೊಯಿಪ್ಪಾಡಿ ಯಿಂದ ಪೆರ್ವಾಡ್ ಕಡಪ್ಪುರವರೆಗೆ ಕಡಲ್ಕೊರೆತ ತೀವ್ರಗೊಂಡಿರುವುದಾಗಿ ಹೇಳಲಾಗುತ್ತಿದೆ.  ಕೊಯಿಪ್ಪಾಡಿ ಹಾಗೂ ಪರಿಸರ ಪ್ರದೇಶಗಳಲ್ಲಿ ನೂರರಷ್ಟು ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆಯೂ …

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ನಿಧನ

ಕುಂಬಳೆ: ಕಾನ ಪೊಟ್ನೋಟ ನಿವಾಸಿ, ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಸುಬ್ರಹ್ಮಣ್ಯ ಭಟ್ (87) ಶನಿವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಜನಸಂಘದ ಕಾಲದಿಂದಲೇ ಸಂಘ ಪರಿವಾರದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು. ಮೃತರು ಪತ್ನಿ ಲಕ್ಷಿ ಭಟ್, ಮಕ್ಕಳಾದ ಹರಿಪ್ರಸಾದ್, ಶಾಂತ, ರಾಜಶ್ರೀ, ಸೊಸೆ ದೀಪ, ಅಳಿಯಂದಿ ರಾದ ಸುರೇಶ್ ಭಟ್, ಗೋವಿಂದ ರಾಜ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು, ವಿವಿಧ ರಾಜಕೀಯ ನೇತಾರರ ಸಹಿತ ಹಲವಾರು …

ಎನ್‌ಆರ್‌ಜಿ ವರ್ಕರ್ಸ್ ಯೂನಿಯನ್‌ನಿಂದ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್

ಪೈವಳಿಕೆ: ಕೇಂದ್ರ ಸರಕಾರ ಉದ್ಯೋಗ ಖಾತರಿ ಯೋಜನೆ ಯನ್ನು ಬುಡಮೇಲುಗೊಳಿಸುತ್ತಿದೆ ಎಂದು ಆರೋಪಿಸಿ ಎನ್‌ಆರ್‌ಜಿ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಯಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಸಾಕ್ ಚಿಪ್ಪಾರ್ ಉದ್ಘಾಟಿಸಿದರು. ಸರಸ್ವತಿ ಎಲಿಯಾಣ ಅಧ್ಯಕ್ಷತೆ ವಹಿಸಿದರು. ಸಂಘಟನೆಯ ಏರಿಯಾ ಸಮಿತಿ ಕಾರ್ಯದರ್ಶಿ ಅಬ್ದುಲ್ಲ ಪೈವಳಿಕೆ ಸ್ವಾಗತಿಸಿದರು. ನೇತಾರರಾದ ಐರಿನ್ ಜೋಸ್ಫಿನ್, ಅಶೋಕ ಭಂಡಾರಿ, ಚಂದ್ರ ನಾಯ್ಕ್, ಮಾತನಾಡಿದರು.

ಮೊಂಬತ್ತಿ, ಚಿಮಿಣಿ ದೀಪದ ಬೆಳಕಿನಲ್ಲಿ ಅಧ್ಯಯನ, ಬದುಕು: ವಿದ್ಯುತ್ ಕ್ರಾಂತಿಯ ಊರಿನಲ್ಲಿ ಈ ದುರವಸ್ಥೆ

ಕಾಸರಗೋಡು: ೨೬ ವರ್ಷ ದಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಬದುಕುತ್ತಿದ್ದ ಮೂರು ಕುಟುಂಬಗಳ ದುರವಸ್ಥೆ ಕೆಲವೇ ದಿನಗಳಲ್ಲಿ ಬದಲಾಗಲಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಮಂಡಲಕ್ಕೊಳಪಟ್ಟ ಕುಂಬಳೆ ಪಂಚಾಯತ್‌ನ ಕುಂಟಂಗೇರಡ್ಕ ಶಾಂತಿನಗರ ಎಸ್.ಸಿ ಉನ್ನತಿಯ ಅಭಿಮಾನ್‌ರ ಮನೆಗೆ ವಿದ್ಯುತ್ ಸಂಪರ್ಕ ಲಭಿಸಲಿದೆ. ಅಭಿಮಾನ್ ಹಾಗೂ ಪತ್ನಿ ಪಾರ್ವತಿ ಮತ್ತು  ಮಕ್ಕಳಾದ  ಕುಂಬಳೆ ಜಿಎಸ್‌ಬಿಎಸ್ ಶಾಲೆಯ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರ ಮುಖದಲ್ಲಿ ಚಿಮಿಣಿ ದೀಪದ ಬದಲಿಗೆ ಇನ್ನು ವಿದ್ಯುತ್ ಬಲ್ಬ್ ಮಿನುಗಲಿದೆ. ನಮಗೂ ವಿದ್ಯುತ್ …

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯತ್ನ: 70ರ ವೃದ್ದ ಸೆರೆ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಮನೆಗೆ ಕರೆದು ದೌರ್ಜನ್ಯಗೈಯಲೆತ್ನಿಸಿದ 70ರ ಹರೆಯದ ವೃದ್ದ ಸೆರೆಯಾಗಿ ದ್ದಾನೆ. ಪಡನ್ನ ಗಣೇಶ್‌ಮುಖ್ ನಿವಾಸಿ ಎ.ಸಿ. ಅಬೂಬಕ್ಕರ್‌ನನ್ನು ಚಂದೇರ ಪೊಲೀ ಸರು ಬಂಧಿಸಿದ್ದಾರೆ. ಸ್ಟೇಷನ್ ವ್ಯಾಪ್ತಿಯ ೧೪ರ ಹರೆಯದ ಬಾಲಕಿಯನ್ನು ಈತ ದೌರ್ಜನ್ಯ ಗೈಯ್ಯಲೆತ್ನಿಸಿದ್ದನು. ಗುರುವಾರ ಸಂಜೆ 3.30ರ ವೇಳೆಗೆ ಮನೆಗೆ ತಲುಪಿದ ಬಾಲಕಿಗೆ  ವೃದ್ದ ಉಪಟಳ ನೀಡಲು ಆರಂಭಿಸಿದ್ದನು. ಇದನ್ನು ವಿರೋಧಿ ಸಿದರೂ ಮತ್ತೆಯೂ ಉಪಟಳ ನೀಡಿದ್ದು, ಬಳಿಕ ಅಲ್ಲಿಂದ ಪರಾರಿ ಯಾದ ಬಾಲಕಿ ಸಂಬಂಧಿಕರಲ್ಲಿ ಮಾಹಿತಿ ನೀಡಿದ್ದಾಳೆ. ಈ …

ಕುಂಬಳೆ ಮಾಟಂಗುಳಿಯಲ್ಲಿ ಗ್ಯಾಸ್ ಸ್ಫೋಟದಿಂದ ಕ್ವಾರ್ಟರ್ಸ್‌ಗೆ ಬೆಂಕಿ: ಕೊಠಡಿ ನಾಶ

ಕುಂಬಳೆ: ಕ್ವಾರ್ಟರ್ಸ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸ್ಫೋಟದಿಂದ ಕಟ್ಟಡ ಬೆಂಕಿಗಾಹುತಿಯಾಗಿದೆ. ಮಾಟಂಗುಳಿಯಲ್ಲಿ ಹಲವಾರು ಮಂದಿ ವಾಸ ಮಾಡುವ ಕ್ವಾರ್ಟರ್ಸ್‌ನಲ್ಲಿ ಘಟನೆ ಸಂಭವಿಸಿದೆ. ಕ್ವಾರ್ಟರ್ಸ್‌ನ ಒಂದು ಕುಟುಂಬದ ವಾಸಕೊಠಡಿ ಸಂಪೂರ್ಣವಾಗಿ ಉರಿದಿದ್ದು, ಉಳಿದ ಕಡೆ ಬೆಂಕಿ ಹರಡುವುದನ್ನು ಅಗ್ನಿಶಾಮಕದಳ ಹಾಗೂ ಪೊಲೀಸರು, ಸ್ಥಳೀಯರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತಡೆಯಲಾಗಿದೆ. ಚರ್ಮುರಿ ವ್ಯಾಪಾರಿ,  ಶೊರ್ನೂರು ನಿವಾಸಿ ಕೃಷ್ಣ ಹಾಗೂ ಕುಟುಂಬ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿತ್ತು. ಇವರು ಕಳೆದ ಸೋಮವಾರ ಊರಿಗೆ ತೆರಳಿದ್ದರು. ಇಂದು ಬೆಳಿಗ್ಗೆ ಗ್ಯಾಸ್ ಸ್ಫೋಟಗೊಂಡು ಬೆಂಕಿ ಅನಾಹುತ …

ಪಿಟ್ ಎನ್‌ಡಿಪಿಎಸ್ ಆಕ್ಟ್: ಇನ್ನೋರ್ವ ಸೆರೆ

ಕಾಸರಗೋಡು: ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಇನ್ನೋರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಚೆಂಗಳ ನಾಲ್ಕನೇ ಮೈಲಿನ ಕರೋಡಿ ವೀಟಿಲ್ ಮುಹಮ್ಮದ್ ಅಬೂಬಕರ್ (26) ಬಂಧಿತ ಆರೋಪಿ. ವಿದ್ಯಾನಗರ, ಮೇಲ್ಪರಂಬ ಮತ್ತು ಆದೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಮಾದಕದ್ರವ್ಯ ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಮಾದಕದ್ರವ್ಯ ಪ್ರಕರಣಗಳ ಆರೋಪಿಗಳನ್ನು ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಬಂಧಿಸಿ ವಿಚಾರಣೆ ರಹಿತವಾಗಿ ಜೈಲಿಗಟ್ಟಲಾಗುತ್ತಿದೆ. ಮಾದಕದ್ರವ್ಯ ವ್ಯವಹಾರ, ಮಾರಾಟ ಮತ್ತು ವಿತರಿಸುವುದನ್ನು ತಡೆಗಟ್ಟಲು ಪೊಲೀಸರು ಇಂತಹ ಕ್ರಮ ಕೈಗೊಳ್ಳುತ್ತಿದ್ದಾರೆ.ಈತ …

ಸಂಪೂರ್ಣ ಹದಗೆಟ್ಟ ಕಾಸರಗೋಡು ಸ್ಪೆಷಲ್ ಜೈಲಿನ ಹಿಂದಿನ ಪಳ್ಳಂ ರಸ್ತೆ: ಕಟ್ಟಡ ಕುಸಿತ ಭೀತಿಯಲ್ಲಿ

ಕಾಸರಗೋಡು: ಕಾಸರಗೋಡು ಸ್ಪೆಷಲ್ ಸಬ್ ಜೈಲಿನ ಹಿಂದಿನ  ಭಾಗದ ಪಳ್ಳಂ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಾತ್ರವಲ್ಲ ಅಲ್ಲೇ ಪಕ್ಕದಲ್ಲಿರುವ ಹಳೆ ಕಟ್ಟಡವೊಂದು ಯಾವುದೇ ನಿಮಿಷದಲ್ಲಿ ಕುಸಿದುಬೀಳುವ ಸ್ಥಿತಿಯಲ್ಲಿದೆ. ಟೌನ್ ಯುಪಿ ಶಾಲೆ ಮತ್ತು ಶಿಕ್ಷಣ ಉಪಜಿಲ್ಲಾ ಕಚೇರಿಯತ್ತ ಸಾಗುವ   ಹಾಗೂ ವ್ಯಾಪಾರ ಸಂಸ್ಥೆಗಳಿಗೆ ಸಾಗುವ ಜನನಿಬಿಡ ರಸ್ತೆಯೂ ಇದಾಗಿದೆ. ಐದು ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣ ನಡೆಸಲಾಗಿದೆ. ನಂತರದ ವರ್ಷಗಳಲ್ಲಿ ಕನಿಷ್ಠ ಇದರ ದುರಸ್ತಿ ಕೆಲಸಗ ಳನ್ನಾದರೂ ನಡೆಸಲಾಗಿಲ್ಲವೆಂದು ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ. ಹದಗೆಟ್ಟಿರುವುದರಿಂದಾಗಿ ಈ …

ರಾಜ್ಯದ 161 ಡಿವೈಎಸ್‌ಪಿಗಳಿಗೆ ವರ್ಗಾವಣೆ

ತಿರುವನಂತಪುರ: ರಾಜ್ಯದ ಪೊಲೀಸ್ ಇಲಾಖೆಯ 161 ಡಿವೈಎಸ್‌ಪಿಗಳನ್ನು ಅತ್ತಿತ್ತ ಬದಲಾಯಿಸಿ ರಾಜ್ಯ ಸರಕಾರ ಆದೇಶ ಜ್ಯಾರಿಗೊಳಿಸಿದೆ. ಇದರಂತೆ ಬೇಕಲ ಡಿವೈಎಸ್‌ಪಿಯಾಗಿ ವಿ.ಕೆ. ವಿಶ್ವಂಭರನ್ ನಾಯರ್, ಹೊಸದುರ್ಗ ಡಿವೈಎಸ್‌ಪಿ ಯಾಗಿ ಎಂ.ಪಿ. ಅನಿಲ್ ಕುಮಾರ್ ಮತ್ತು ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿಯಾಗಿ ಮೂಸಾ ವಳ್ಳಿಕಾಡನ್‌ರನ್ನು  ನೇಮಿಸಲಾಗಿದೆ. ಅನಿಲ್ ಕುಮಾರ್ ಕಾಞಂಗಾಡ್ ಪುದುಕೈ ನಿವಾಸಿ, ವಿ.ಕೆ. ವಿಶ್ವಂಭರನ್ ಕುಂಡಂಕುಳಿ ನಿವಾಸಿಯಾಗಿದ್ದಾರೆ.

ಚವರ್ಕಾಡ್‌ನಲ್ಲಿ ಅಂಚೆ ಕಚೇರಿ  ಆರಂಭಿಸಲು ಅಧಿಕಾರಿಗಳಿಗೆ ಮನವಿ

ಕಾಸರಗೋಡು: ಕೇರಳ- ಕರ್ನಾಟಕ ಗಡಿ ಗ್ರಾಮವಾದ ಚವರ್ಕಾಡ್‌ನಲ್ಲಿ ಹೊಸ ಅಂಚೆ ಕಚೇರಿ ಮಂಜೂರು ಮಾಡಬೇಕೆಂಬ ಬೇಡಿಕೆ ಮೂಡಿಬಂದಿದೆ. ಎಣ್ಮಕಜೆ ಪಂಚಾಯತ್‌ನ 1,2 ವಾರ್ಡ್‌ಗಳು ಒಳಗೊಂಡ ಈ ಪ್ರದೇಶದಲ್ಲಿ ಸುಮಾರು 4೦೦೦ಕ್ಕೂ ಅಧಿಕ ವಿಳಾಸಗಳ ಜನರು ವಾಸವಾಗುತ್ತಿದ್ದು, ಇದುವರೆಗೆ ಇಲ್ಲಿ ಅಂಚೆ ಕಚೇರಿ ಜ್ಯಾರಿಯಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಅಂಚೆ ಕಚೇರಿ ಇಲ್ಲದ ಕಾರಣ ಪತ್ರಗಳು ಹಾಗೂ ಸರಕಾರಿ ಸೂಚನೆಗಳು, ಆಧಾರ್‌ಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ದಾಖಲೆ ಗಳು, ಪಾಸ್‌ಪೋರ್ಟ್ ಸಂಬಂಧ ವಾದ ದಾಖಲೆಗಳು, ಇತರ ಅಂಚೆ ಸೇವೆಗಳು ಸಮಯಾನುಸಾರ …