ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯ ಸಾಗಾಟ: ಮೊಗ್ರಾಲ್ ನಿವಾಸಿ ಸೆರೆ

ಮಂಜೇಶ್ವರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯವನ್ನು ಅಬಕಾರಿ ತಂಡ ವಶಪಡಿಸಿ ಓರ್ವನನ್ನು ಬಂಧಿಸಿದೆ. ಮೊಗ್ರಾಲ್ ನೀರೋಳ್ ನಿವಾಸಿ ಬಿ. ಶಿವಪ್ರಸಾದ್ (26) ಎಂಬಾತ ಬಂಧಿತ ವ್ಯಕ್ತಿ. ಈತನ ಬ್ಯಾಗ್‌ನಿಂದ 9 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಿನ್ನೆ ಮಧ್ಯಾಹ್ನ 12 ಗಂಟೆಗೆ  ಅಬಕಾರಿ ತಂಡ ಬಸ್‌ನಲ್ಲಿ ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್ ಜಿನು ಜೇಮ್ಸ್ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ ಪಿ.ಕೆ. ಬಾಬು …

ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳವು

ಬಂದಡ್ಕ:  ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳವುಗೈಯ್ಯಲಾ ಗಿದೆ ಎಂದು ದೂರಲಾಗಿದೆ. ಕಯಮುರುಕನ್‌ಕಯದ ಜಿ. ಶಿವಪ್ರಸಾದ್‌ರ ಬೈಕ್ ಕಳವುಗೈ ದಿರುವುದಾಗಿ ದೂರಲಾಗಿದೆ. ಇವರು ನೀಡಿದ ದೂರಿನಂತೆ ಬೇಡಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ವೇಳೆ ಬಂದಡ್ಕ- ಮಾಣಿಮೂಲೆ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಬೈಕ್ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು, ಶಿವಪ್ರಸಾದ್ ಆಗಲೇ ದೂರು ನೀಡಿದ್ದಾರೆ.

ತಾಯಿಗೆ ಖರ್ಚಿಗೆ ಹಣ ನೀಡದ ಮಗನ ಸೆರೆ, ಜೈಲು

ಕಾಸರಗೋಡು: ತಾಯಿಗೆ ಖರ್ಚಿಗೆ ಹಣ ನೀಡದ ಹೆಸರಲ್ಲಿ ಆರ್‌ಡಿಒ ನ್ಯಾಯಾಲಯ ಹೊರಡಿಸಿದ ವಾರಂಟಿನನ್ವಯ ಮಗನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಮಡಿಕೈ ಮಲಪ್ಪಚ್ಚೇರಿ ವಡುತ್ತಲ ಕುಳಿಯಿಲ್ ಪ್ರತೀಶ್ (46) ಎಂಬವರನ್ನು ಈ ರೀತಿ ಬಂಧಿಸಲಾಗಿದೆ.  ಮಗ ತನಗೆ ಖರ್ಚಿಗೆ ಹಣ ನೀಡುವುದಿಲ್ಲವೆಂದು ದೂರಿ ಪ್ರತೀಶ್‌ನ ತಾಯಿ ಎಲಿಯಮ್ಮ ಜೋಸೆಫ್ (68) ಹೊಸದುರ್ಗ ಸಬ್ ಡಿವಿಶನಲ್ ಮೆಜಿಸ್ಟ್ರೇಟ್ (ಆರ್‌ಡಿಒ) ನ್ಯಾಯಾಲಯಕ್ಕೆ ಈ ಹಿಂದೆ ದೂರು ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಹೆತ್ತವರು ಮತ್ತು ಹಿರಿಯನಾಗರಿಕರಿಗೆ ಕಾನೂನು ಸಂರಕ್ಷಣಾ ನಿಯಮದ ಪ್ರಕಾರ ತಾಯಿಗೆ …

ಶವರ್ಮ ಸೇವಿಸಿ 14 ಮಕ್ಕಳು ಅಸ್ವಸ್ಥ: ಹೋಟೆಲ್‌ಗೆ ಬೀಗ

ಕಾಸರಗೋಡು: ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡಿನ ಹೋಟೆಲೊಂದರಿಂದ ತರಿಸಲಾಗಿದ್ದ ಶವರ್ಮ ಸೇವಿಸಿದ 14 ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. ವಿಷಾಹಾರ ಸೇವಿಸಿ ಅಸ್ವಸ್ಥರಾದ ಮಕ್ಕಳೆಲ್ಲಾ 8ರಿಂದ 16ರ ಮಧ್ಯೆ ಪ್ರಾಯದವರಾಗಿದ್ದಾರೆ. ಇವರಿಗೆ ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಪಳ್ಳಿಕ್ಕೆರೆಯಲ್ಲಿ ನಡೆದ ನಬಿ ದಿನ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಭಾಗವಹಿಸಿದ ಮಕ್ಕಳಿಗೆ ನಬಿ ದಿನ ಸಂಘಟಕರು ಆಹಾರ ಪೂರೈಸಲು ತರಿಸಲಾಗಿದ್ದ ಆಹಾರ ಸಾಕಾಗದಿದ್ದಾಗ ಸಮೀಪದ ಹೋಟೆಲೊಂದರಿಂದ ಶವರ್ಮ ಖರೀದಿಸಿ ವಿತರಿಸಿದ್ದರು. ಅದನ್ನು ಸೇವಿಸಿದ …

ವಿದ್ಯಾರ್ಥಿನಿಗೆ ಕಿರುಕುಳ: ಯುವಕ ಸೆರೆ

ಪುತ್ತೂರು: ಕಾಣಿಯೂರು ಸಮೀಪದ ಪುಂಚತ್ತಾರು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಯುವಕನನ್ನು  ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಯುವಕ ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಆಧಾರದಲ್ಲಿ ಸಿಸಿ ಟಿವಿ ಆಧರಿಸಿ ನಡೆಸಿದ ತನಿಖೆಯಲ್ಲಿ ಬೈಕ್ ನಂಬ್ರ ಪತ್ತೆಹಚ್ಚಲಾಗಿದ್ದು, ಅದರ ಮಾಲಕ ಪೆರ್ಲಂಪಾಡಿ ನಿವಾಸಿ ಉದಯ ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಈತನೇ ಕಿರುಕುಳ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಮತ ಸೋರಿಕೆಯಾಗಿರುವುದಾಗಿ ಕಾಂಗ್ರೆಸ್ ಆರೋಪ

ಹೊಸದಿಲ್ಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಒಕ್ಕೂ ಟದಿಂದ ಮತ ಸೋರಿಕೆ ಯಾಗಿದೆ ಯೆಂದು ಕಾಂಗ್ರೆಸ್ ಆರೋಪಿಸಿದೆ. ಮಹಾರಾಷ್ಟ್ರ ಸಹಿತ ವಿವಿಧೆಡೆ ಮತ ಸೋರಿಕೆ ಯಾಗಿದೆ. ಕೆಲವು ಸಣ್ಣ ಪಕ್ಷ ಗಳನ್ನು ಸರಕಾರ ಸ್ವಾಧೀನಿಸಿದೆ ಯೆಂದೂ ಕಾಂಗ್ರೆಸ್ ಆರೋಪಿ ಸಿದೆ. ಕೆಲವು ಸಂಸದರು ಬ್ಯಾಲೆಟ್ ಪೇಪರ್ ಉದ್ದೇಶಪೂರ್ವಕ ಅಸಿಂಧುಗೊಳಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಕೆಲವು ಸಂಸದರು ಪಕ್ಷದ ನಿರ್ದೇಶವನ್ನು ಉಲ್ಲಂಘಿಸಿದ್ದಾರೆAದು ಕಾಂಗ್ರೆಸ್ ತಿಳಿಸುತ್ತಿದೆ. ಸುಪ್ರೀಂಕೋರ್ಟ್ನ ನಿವೃತ್ತ ಜಸ್ಟೀಸ್ ಬಿ. ಸುದರ್ಶನ್ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ …

ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ವಂಚನೆ: ಇ.ಡಿ ಪ್ರಕರಣದಲ್ಲಿ ಮಾಜಿ ಶಾಸಕ ಖಮರುದ್ದೀನ್ ಸಹಿತ ಇಬ್ಬರಿಗೆ ಜಾಮೀನು ಮಂಜೂರು

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಮಂಜೇಶ್ವರದ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್ ಮತ್ತು ಟಿ.ಪಿ. ಪೂಕೋಯ ತಂಙಳ್ ರಿಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 50,000 ರೂ.ಗಳ ಬಾಂಡ್ ಹಾಗೂ ತಲಾ ಇಬ್ಬರ  ಜಾಮೀನಿನ ಮೇಲೆ  ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಬೆಚ್ಚು ಕುರ‍್ಯನ್ ಈ ಇಬ್ಬರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳು ಕಳೆದ …

ಆರಿಕ್ಕಾಡಿ ಟೋಲ್ ಪ್ಲಾಜಾ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ: 14ರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಕುಂಬಳೆ: ಆರಿಕ್ಕಾಡಿ ಕಡವತ್ ರಾಷ್ಟ್ರೀಯ ಹೆದ್ದಾರಿಯಲ್ಲಿ  ಟೋಲ್ ಪ್ಲಾಜಾ ನಿರ್ಮಿಸುವುದರ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ನಿನ್ನೆ ಕುಂಬಳೆಯಲ್ಲಿ ನಡೆದ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಟೋಲ್ ಪ್ಲಾಜಾ ನಿರ್ಮಾಣ ವಿರುದ್ಧ ಈ ತಿಂಗಳ 14ರಿಂದ ಆರಿಕ್ಕಾಡಿಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಟೋಲ್ ಪ್ಲಾಜಾ ನಿರ್ಮಾಣವನ್ನು ಯಾವುದೇ ಬೆಲೆ ತೆತ್ತಾದರೂ ತಡೆಯುವುದಾಗಿಯೂ ಅದಕ್ಕೆ  ಸಾರ್ವಜನಿಕರು ಸಹಕಾರ ನೀಡಬೇಕೆಂದೂ ಸಂಬಂಧಪಟ್ಟವರು ತಿಳಿಸಿದ್ದಾರೆ. ಕುಂಬಳೆಯ ಹೋಟೆಲ್‌ವೊಂದರಲ್ಲಿ ನಿನ್ನೆ ನಡೆದ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್, ಪಂಚಾಯತ್ ಅಧ್ಯಕ್ಷೆ …

ಪುದುಕೋಳಿ ರುದ್ರಭೂಮಿಯಲ್ಲಿ ಕಟ್ಟಡ ನಿರ್ಮಾಣ, ತ್ಯಾಜ್ಯ ಸಂಗ್ರಹ: ಪ್ರತಿಭಟನಾನಿರತರಿಗೆ ಅಧಿಕಾರಿಗಳಿಂದ ಪರಿಹಾರ ಭರವಸೆ

ಬದಿಯಡ್ಕ: ಮನುಷ್ಯರ ಮರಣ ಬಳಿಕ ನಡೆಸುವ ಅಂತ್ಯ ಕಾರ್ಯಗಳಿಗೂ ಪುದುಕೋಳಿ ನಿವಾಸಿಗಳು ಹೋರಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿರುವ ಹಿಂದೂ ರುದ್ರಭೂಮಿಯನ್ನು ಕಬಳಿಸುವ ಯತ್ನ ಆರಂಭಗೊಂಡಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬದಿಯಡ್ಕ ಪಂ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ ರುದ್ರಭೂಮಿ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬದಿಯಡ್ಕ ಪಂ. ವ್ಯಾಪ್ತಿಯ ಮಾನ್ಯ, ನೀರ್ಚಾಲು, ಪೆರಡಾಲ, ಕಾರ್ಮಾರು, ಬೇಳ, ಕನ್ನೆಪ್ಪಾಡಿ, ತಲ್ಪಣಾಜೆ, …

ಪ್ರಗತಿಪರ ಕೃಷಿಕ ನಿಧನ

ಪೆರ್ಲ: ಬೇಂಗಪದವು ಸಮೀಪದ ಕಲ್ಲರೋಡಿ ನಿವಾಸಿ, ಪ್ರಗತಿಪರ ಕೃಷಿಕ ಲೂವಿಸ್ ಡಿಸೋಜಾ (76) ನಿನ್ನೆ ನಿಧನ ಹೊಂದಿದರು. ಬೆಳಿಗ್ಗೆ ಅಸ್ವಸ್ಥಗೊಂಡಿದ್ದ ಇವರನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮೃತರು ಪತ್ನಿ ಸಿಸಿಲಿಯಾ ಡಿಸೋಜಾ, ಮಕ್ಕಳಾದ ಮ್ಯಾಕ್ಸಿಮ್, ಫಾದರ್ ಮೆಲ್ವಿನ್ (ಪಂಜ ಚರ್ಚ್‌ನ ಧರ್ಮಗುರು), ಮಿಲ್ಟನ್ ಪೀಟರ್, ಸೊಸೆಯಂದಿರಾದ ಲವೀನಾ, ಪ್ರೀತಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಣಿಯಂಪಾರೆ ಸೈಂಟ್‌ಲಾರೆನ್ಸ್ ಚರ್ಚ್‌ನಲ್ಲಿ ಇಂದು ಅಂತ್ಯ ಸಂಸ್ಕಾರ ಜರಗಿತು.