ಇಂಡಿಯ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದ ಎಸ್‌ಎಫ್‌ಐ ನೇತಾರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿ ಗಿನ್ನೆಸ್ ರೆಕಾರ್ಡ್‌ಗೆ ಕಾಯುತ್ತಿದ್ದ ಎಸ್‌ಎಫ್‌ಐ ನೇತಾರ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಡನ್ನಕ್ಕಾಡ್ ಕರುವಳದ ಪವಿತ್ರನ್ ಎಂಬವರ ಪುತ್ರ ಶ್ರೀಹರಿ (21) ಮೃತ ಯುವಕ. ಪಡನ್ನಕ್ಕಾಡ್‌ನ ನೆಹರೂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿರುವ ಶ್ರೀಹರಿ ಎಸ್‌ಎಫ್‌ಐ ಕಾಲೇಜು ಘಟಕದ ಉಪಾಧ್ಯಕ್ಷನೂ ಆಗಿದ್ದರು. ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ ೮ ಗಂಟೆ ಮಧ್ಯೆ ಮನೆಯಲ್ಲಿ ಬೇರ‍್ಯಾರೂ ಇಲ್ಲದ ಸಂದರ್ಭದಲ್ಲಿ ಶ್ರೀಹರಿ ನೇಣು …