ಅರಣ್ಯ ವಲಯಗಳ ಪ್ರವಾಸಿ ಕೇಂದ್ರಗಳಿಗೆ ಇನ್ನು ಏಕ ಮಂಡಳಿ
ಕಾಸರಗೋಡು: ಅರಣ್ಯ ವಲಯಗಳ ಎಲ್ಲಾ ಪ್ರವಾಸಿ ಕೇಂದ್ರಗಳು ಇನ್ನು ಏಕಮಂಡಳಿ ಆಶ್ರಯದಲ್ಲಿ ಕಾರ್ಯವೆಸಗಲಿವೆ. ಇದಕ್ಕಾಗಿ ರಾಜ್ಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ‘ಕೇರಳ ವನ- ಇಕೋ ಟೂರಿಸಂ ಅಭಿವೃದ್ಧಿ ಮಂಡಳಿ’ಗೆ ರೂಪು ನೀಡಲಾಗುವುದು. ಇದಕ್ಕಾಗಿ ಕರಡು ಮಸೂದೆಗೆ ರೂಪು ನೀಡಲಾಗಿದ್ದು, ಅದು ಈಗ ಸಚಿವಸಂಪುಟದ ಪರಿಶೀಲನೆಯಲ್ಲಿದೆ. ಅರಣ್ಯ ಇಲಾಖೆಯ ಇಕೋ ಟೂರಿಸಂಗೆ ಸಂಬಂಧಪಟ್ಟ ಸಂಘಗಳು, ಹುಲಿ ಸಂರಕ್ಷಣಾ ಫೌಂಡೇಶನ್‌ಗಳು, ಅರಣ್ಯ ಅಭಿವೃದ್ಧಿ ಸಂಸ್ಥೆಗಳು ಮತ್ತು ಇಕೋ ಡೆವಲಪ್‌ಮೆಂಟ್ ಸಮಿತಿಗಳು ಇನ್ನು ಹೊಸ ಮಂಡಳಿಯಡಿ ಕಾರ್ಯವೆಸಗಲಿದೆ. ಆದರೆ ಆರ್ಥಿಕ ನಿಯಂತ್ರಣವಿರುವ …