‘ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿಯನ್ನು ಹೊರತುಪಡಿಸಬೇಕು’- ಸುಪ್ರೀಂಕೋರ್ಟ್ ಸಮೀಪಿಸಿದ ರಾಜ್ಯಪಾಲ
ತಿರುವನಂತಪುರ: ಕೇರಳದ ಎರಡು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿ ಯನ್ನು ಹೊರತುಪಡಿಸಬೇಕೆಂದು ಆಗ್ರಹಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಡಿಜಿಟಲ್ ವಿಶ್ವವಿದ್ಯಾಲಯಗಳ ಉಪಕುಲಪ ತಿಗಳ ನೇಮಕಾತಿಗಾಗಿರುವ ಸರ್ಜ್ ಸಮಿತಿ ಹಾಗೂ ನೇಮಕಾತಿ ಪ್ರಕ್ರಿಯೆಗಳಿಂದ ಮುಖ್ಯಮಂ ತ್ರಿಯನ್ನು ಹೊರತು ಪಡಿಸಬೇಕೆಂಬ ಪ್ರಧಾನ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಯಲ್ಲಿ ರಾಜ್ಯಪಾಲರು ಮುಂದಿರಿಸಿದ್ದಾರೆ. ಉಪಕುಲಪತಿಗಳ ನೇಮಕಾತಿಗಾಗಿ ಸರ್ಜ್ ಸಮಿತಿ ತಯಾರಿಸುವ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕೆಂಬ ನಿರ್ದೇಶವನ್ನು ಈ ಹಿಂದೆ …