ಕುಂಬಳೆ ಟೋಲ್ ಬೂತ್‌ಗೆ ಹಾನಿ: ರಿಮಾಂಡ್‌ನಲ್ಲಿದ್ದ ಇಬ್ಬರಿಗೆ ಜಾಮೀನು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಬೂತ್‌ಗೆ ಹಾನಿಗೈದು 10 ಲಕ್ಷ ರೂಪಾಯಿಯ ನಷ್ಟ ಉಂಟಾಯಿ ತೆಂಬ ಪ್ರಕರಣದಲ್ಲಿ ರಿಮಾಂಡ್ ನಲ್ಲಿರುವ ಇಬ್ಬರನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಕೊಡ್ಯಮ್ಮೆ ಊಜಾರಿನ ಫೈಸಲ್ ಅಬ್ದುಲ್ ರಹಿಮಾನ್ (28), ಮಂಜೇಶ್ವರ ವಾಮಂಜೂರಿನ ಟಿ.ಅಬ್ದುಲ್ ನಾಸರ್ (46) ಎಂಬಿವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಲಭಿಸಿದ ಇವರನ್ನು ಕಾಸರಗೋಡು ಸಬ್  ಜೈಲು ಪರಿಸರದಿಂದ ಮುಷ್ಕರ ಸಮಿತಿ ಪದಾಧಿಕಾರಿಗಳು ಶಾಲು ಹೊದಿಸಿ ಸ್ವಾಗತಿಸಿದರು.

ಲಾಡ್ಜ್‌ನಲ್ಲಿ ಯುವಕ-ಯುವತಿಯ ನಗ್ನ ಚಿತ್ರ ತೆಗೆದು ಬೆದರಿಕೆ : ಓರ್ವ ಸೆರೆ

ಉಪ್ಪಳ: ಹೊಸಂಗಡಿಯ ಲಾಡ್ಜ್‌ನ ಕೊಠಡಿಗೆ ಅತಿಕ್ರಮಿಸಿ ನುಗ್ಗಿ ಯುವಕ ಮತ್ತು ಯುವತಿಯನ್ನು ಜೊತೆಗೆ ನಿಲ್ಲಿಸಿ ನಗ್ನ ಚಿತ್ರ ತೆಗೆದು ಬೆದರಿಕೆಯೊಡ್ಡಿ ಹಣ ಹಾಗೂ ಫೋನ್ ಅಪಹರಿಸಿದ ಪ್ರಕರಣದಲ್ಲಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇ ಶ್ವರ ಪಿರಾರಮೂಲೆ ನಿವಾಸಿಯೂ ಕಡಂಬಾರಿನಲ್ಲಿ ವಾಸಿಸುವ ಆರಿಸ್ (40) ಬಂಧಿತ ಆರೋಪಿಯಾಗಿ ದ್ದಾನೆ. ಈತನನ್ನು ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಮಂಗಳೂರಿನಿಂದ ಬಂಧಿಸಲಾಗಿದೆ. ಕಳೆದ ಬುಧವಾರ ಮಧ್ಯಾಹ್ನ ಉಳ್ಳಾಲ ಮೋಂಟುಗೋಳಿಯ ಮೊಹಮ್ಮದ್ ಹನೀಫ(40) ಹಾಗೂ ಯುವತಿ ಹೊಸಂಗಡಿಯ  ಲಾಡ್ಜ್‌ನಲ್ಲಿ ಕೊಠಡಿ …

ಬಸ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಉಪ್ಪಳ: ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಸಾಗಿಸುತ್ತಿದ್ದ 6.12 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದ ಎಂ. ಸಂತೋಷ್ (38) ಎಂಬಾತನನ್ನು ಮಂಜೇಶ್ವರ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿ.ಆದರ್ಶ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಸಂಜೆ 5.30ರ ವೇಳೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್  ನಿಂದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗಳಾದ ಶ್ರೀನಿವಾಸನ್ ಪತ್ತಿಲ್, ವಿ. ಪ್ರಮೋದ್ ಕುಮಾರ್, ಪ್ರವೆಂಟೀವ್ ಆಫೀಸರ್‌ಗಳಾದ …

ಕುಂಬಳೆ ಭಾಸ್ಕರನಗರದಲ್ಲಿ ವಿಕಲ ಚೇತನ ವ್ಯಕ್ತಿಯ ಗೂಡಂಗಡಿಯಿಂದ ಕಳವು

ಕುಂಬಳೆ: ಇಲ್ಲಿನ ಭಾಸ್ಕರ ನಗರದಲ್ಲಿ ವಿಕಲ ಚೇತನ ವ್ಯಕ್ತಿಯ ಗೂಡಂಗಡಿ ಯಿಂದ  ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿ ಸಿದ್ದಾರೆ. ಕಳೆದ ಶನಿವಾರ ರಾತ್ರಿ ಅಂಗಡಿಯ ಬೀಗ ಮುರಿದು ಸಿಗರೇಟ್, ಮೊಟ್ಟೆ ಮೊದಲಾದವು ಗಳನ್ನು  ಕಳವು ನಡೆಸಲಾಗಿದೆ.  ಹರೀಶ ಎಂಬವರ ಮಾಲಕತ್ವದ ಅಂಗಡಿಯಿಂದ ಈ ಕಳವು ನಡೆಸಲಾಗಿದೆ. ನಿನ್ನೆ ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಸುಮಾರು ಒಂದು ಸಾವಿರ ರೂಪಾಯಿಗಳ ಸಿಗರೇಟ್ ಹಾಗೂ ಎರಡು ಟ್ರೇ ಮೊಟ್ಟೆಗಳು …

ಬೇಕರಿಯಲ್ಲಿ ಬೆಂಕಿ ಅನಾಹುತ, ಲಕ್ಷಾಂತರ ರೂ. ನಷ್ಟ

ಕಾಸರಗೋಡು: ನಗರದ ಹಳೇ ಬಸ್ ನಿಲ್ದಾಣ ಪರಿಸರದಲ್ಲಿರುವ ರಾಮ್‌ದೇವ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯವೆಸಗುತ್ತಿರುವ ಲೂಮ್ಸ್ ಬೇಕರಿ ಆಂಡ್ ಕೂಲ್ ಬಾರ್‌ಗೆ ಮೊನ್ನೆ ರಾತ್ರಿ ಬೆಂಕಿ ತಗಲಿ ಅದರೊಳಗಿದ್ದ ಹೆಚ್ಚುಕಡಿಮೆ ಎಲ್ಲಾ ಸಾಮಗ್ರಿಗಳು ಬೆಂಕಿ ಗಾಹುತಿಯಾಗಿದೆ. ಮೀಟರ್ ಬೋಕ್ಸ್, ಪ್ರೀಜರ್‌ಗಳು, ಅಡುಗೆಕೊಠಡಿಯ ಸಾಮಗ್ರಿಗಳೂ ಸೇರಿದಂತೆ ಎಲ್ಲಾ ಸಾಮಗ್ರಿಗಳೂ ಬೆಂಕಿಗಾಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಬೆಂಕಿ ತಗಲಲು ಕಾರಣವೆನ್ನಲಾಗಿದೆ. ಅಗ್ನಿಶಾಮಕದಳ ಸಕಾಲಿಕ ರಕ್ಷಣಾ ಕಾರ್ಯಾಚರಣೆಯಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಹೋಗಿದೆ. ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಆರ್. ವಿನೋದ್ ಕುಮಾರ್, ಸೀನಿಯರ್ …

ಯುವಮೋರ್ಛಾ ಜಿಲ್ಲಾ ಸಮಿತಿಯಿಂದ ಯುವ ಸಂಗಮ

ಕಾಸರಗೋಡು: ಯುವ ಮೋರ್ಛಾ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಯುವ ಸಂಗಮ ನಡೆಸಲಾಯಿತು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್ ಉದ್ಘಾಟಿಸಿದರು. ಯುವಜನಾಂಗಕ್ಕೆ ಆತ್ಮವಿಶ್ವಾಸ ನೀಡುವಂತ ಆಡಳಿತ ವಾಗಿದೆ ನರೇಂದ್ರ ಮೋದಿಯವ ರದ್ದೆಂದು ಅವರು ನುಡಿದರು. ಉನ್ನತ ಶಿಕ್ಷಣ ಪಡೆದ ಯುವಕರು ಹೆಚ್ಚಾಗಿ ಕೃಷಿಗೆ ಸಂಬಂಧಿಸಿದ ವಲಯಗಳಲ್ಲಿ ತೊಡಗಿಸಿ ಕೊಳ್ಳುವುದು ಶುಭ ಸೂಚಕವಾಗಿದೆ ಎಂದು ಮಹೇಶ್ ಗೋಪಾಲ್ ನುಡಿದರು. ಯುವಮೋರ್ಚ ಜಿಲ್ಲಾಧ್ಯಕ್ಷ ಅಶ್ವಿನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ …

ಮನೆಗೆ ನುಗ್ಗಿ ದಂಪತಿಯನ್ನು ಇರಿದು ಕೊಲೆ: ಸಂಬಂಧಿಕ ಕಸ್ಟಡಿಯಲ್ಲಿ

ಪಾಲಕ್ಕಾಡ್: ಒಟ್ಟಪ್ಪಾಲಂ ತೋಟಕ್ಕರದಲ್ಲಿ ಅವಳಿಕೊಲೆ ನಡೆದಿದೆ. ದಂಪತಿಯನ್ನು ಮನೆಯೊಳಗೆ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತೋಟಕ್ಕರ ನಾಲಗತ್ ನಸೀರ್ (63), ಪತ್ನಿ ಸುಹರಾ (60) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ಸಾಕು ಪುತ್ರಿಯಾದ ಸುಲ್ಫಿಯತ್‌ಳ ೪ ವರ್ಷದ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ನಿನ್ನೆ ರಾತ್ರಿ 12 ಗಂಟೆಗೆ ನಾಡನ್ನೇ ನಡುಗಿಸಿದ ಘಟನೆ ಸಂಭವಿಸಿದೆ. ಯುವತಿ ೪ ವರ್ಷದ ಮಗುವನ್ನು ಕರೆದುಕೊಂಡು ಮನೆಯಿಂದ ಹೊರಗೆ ಓಡಿದಾಗ ಸ್ಥಳೀಯರು ಈ ಬಗ್ಗೆ ತಿಳಿದಿದ್ದು, ಪೊಲೀಸರಿಗೆ ಮಾಹಿತಿ …

ಪುತ್ತಿಗೆಯಲ್ಲಿ ಹಿಂದು ಏಕತಾ ಸಮ್ಮೇಳನ: ಸ್ವಾಗತ ಸಮಿತಿ ರೂಪೀಕರಣ

ಸೀತಾಂಗೋಳಿ : ಸವಾಲುಗಳನ್ನು ಮೆಟ್ಟಿನಿಂತು ಇತಿಹಾಸ ಬರೆದ ಚರಿತ್ರೆ ಹಿಂದುವಿನದು ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಭಿಪ್ರಾಯಪಟ್ಟಿದ್ದಾರೆ. ಸೀತಾಂಗೋಳಿ ಶ್ರೀ ದೇವಿ ಭಜನಾಮಂದಿರದಲ್ಲಿ ನಿನ್ನೆ ನಡೆದ ಪುತ್ತಿಗೆ ಪಂಚಾಯತ್ ಹಿಂದೂ ಏಕತಾ ಸಮ್ಮೇಳನದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ರಾಮಜನ್ಮಭೂಮಿಗಾಗಿ ನಡೆದ ಹೋರಾಟವನ್ನು ವಿರೋಧಿಸಿದ ವರು, ಹತ್ತಿಕ್ಕಲು ನೋಡಿದವರೂ ಈಗ ರಾಮ ಮಂದಿರ ನೋಡಲು ಹಾತೊರೆಯುತ್ತಿದ್ದಾರೆ ಎಂದವರು ಬೊಟ್ಟು ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಹಲವು ಸವಾಲುಗಳನ್ನು, ಸಂಘರ್ಷಗಳನ್ನು …

ಟೋಲ್ ಪ್ರತಿಭಟನೆ: ತಂಡದ ವಿರುದ್ಧ ಕೇಸು; ಇಬ್ಬರು ಸೆರೆ

ಕುಂಬಳೆ: ಆರಿಕ್ಕಾಡಿಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಸಂಗ್ರಹಿಸಲಾ ಗುತ್ತಿರುವ ಟೋಲ್ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಹೆದ್ದಾರಿ ಪ್ರಾಧಿಕಾರದ ಸಾಮಗ್ರಿಗಳಿಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ದಾಖಲಿಸಿದ ಪ್ರಕರಣದಲ್ಲಿ ಇಬ್ಬರನ್ನು ಸೆರೆ ಹಿಡಿದು ಓರ್ವನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ನೀಡಿದ ದೂರಿನಂತೆ ಸಂಘರ್ಷ ವೇಳೆ 10 ಲಕ್ಷ ರೂ.ಗಳ ನಾಶನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ. ಇದರಲ್ಲಿ ಉಜಾರು ಕೊಡ್ಯಮ್ಮೆ ನಿವಾಸಿ ಫೈಸಲ್ ಅಬ್ದುಲ್ ರಹ್ಮಾನ್ (28), ವಾಮಂಜೂರು ಚೆಕ್‌ಪೋಸ್ಟ್ ನಿವಾಸಿ …

ಕುಂಬ್ಡಾಜೆ ಕೊಲೆ ಪ್ರಕರಣದಲ್ಲಿ ಸಾವಿಗೀಡಾದ ಮಹಿಳೆಯ ಕರಿಮಣಿ ಸರ ಪತ್ತೆ: ತಪ್ಪೊಪ್ಪಿದ ಆರೋಪಿ

ಕುಂಬ್ಡಾಜೆ: ಕುಂಬ್ಡಾಜೆ ಮವ್ವಾರು ಅಜಿಲದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಿ| ವೆಂಕಪ್ಪ ಶೆಟ್ಟಿಯವರ ಪತ್ನಿ ಪುಷ್ಪಲತಾ ವಿ ಶೆಟ್ಟಿ (72) ರ ಸಾವು ಕೊಲೆಯಾಗಿದೆ ಯೆಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸ ಲಾದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಪಷ್ಟಗೊಂಡಿದೆ. ಇದಕ್ಕೆ ಸಂಬಂಧಿಸಿ ಪೆರಡಾಲ ನಿವಾಸಿ  ಪರಮೇಶ್ವರ  (47) ಎಂಬಾತನನ್ನು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಬದಿಯಡ್ಕ ಪೊಲೀಸ್ ಎ. ಸಂತೋಷ್ ಕುಮಾರ್, ಎಸ್.ಐ ಎಂ. ಸವ್ಯಸಾಚಿ ಎಂಬವರನ್ನೊ ಳಗೊಂಡ ಪೊಲೀಸರ ತಂಡ ಬಂಧಿ ಸಿದೆ. …