ಅಟ್ಟಿಯಿರಿಸಿದ ವಿದ್ಯುತ್ ಕಂಬ ಮೈಮೇಲೆ ಬಿದ್ದು ಯುವಕನಿಗೆ ದಾರುಣ ಅಂತ್ಯ

ಪಯ್ಯನ್ನೂರು: ಅಟ್ಟಿಯಿರಿಸಿದ ವಿದ್ಯುತ್ ಕಂಬ ಮೈಮೇಲೆ ಬಿದ್ದು ಯುವಕನಿಗೆ ಧಾರುಣ ಅಂತ್ಯ ಸಂಭವಿಸಿದೆ. ತಳಿಪರಂಬ್ ಕಾಞಿರಂಙಾಟ್ ಚಂದ್ರನ್- ಮಾಧವಿ ದಂಪತಿ ಪುತ್ರ ಅಜೀಶ್ (36) ಮೃತಪಟ್ಟ ಯುವಕ ನಿನ್ನೆ ರಾತ್ರಿ 7 ಗಂಟೆ ವೇಳೆ ದುರಂತ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ಅಟ್ಟಿಯಿರಿಸಿದ್ದ ವಿದ್ಯುತ್ ಕಂಬ ಮಗುಜಿ ಅಜೀಶ್‌ರ ಮೈಮೇಲೆ ಬಿದ್ದಿತ್ತು. ಪರಿಸರ ನಿವಾಸಿಗಳ ನೇತೃತ್ವದಲ್ಲಿ ಕೂಡಲೇ ಅಜೀಶ್‌ನನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದುರಂತದ ಬಗ್ಗೆ ತಳಿಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.

ಶಾಲಾ ಬಸ್ ಅಪಘಾತ: ತಪ್ಪಿದ ದುರಂತ

ಕಾಸರಗೋಡು: ನಿಯಂತ್ರಣ ತಪ್ಪಿದ ಶಾಲಾ ಬಸ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿದ್ದು  ಅದೃಷ್ಟವ ಶಾತ್ ಭಾರೀ ದುರಂತ ತಪ್ಪಿದೆ. ನಿನ್ನೆ ಬೆಳಿಗ್ಗೆ   ನೆಲ್ಲಿಕುಂಜೆ ಬಂಗರಗುಡ್ಡೆ ಯಲ್ಲಿ ಅಪಘಾತವುಂಟಾಗಿದೆ. ನೆಲ್ಲಿಕುಂಜೆ ಅನ್ವಾರುಲ್ ಉಲೂಂ ಎಯುಪಿ ಶಾಲೆಯ ವಿದ್ಯಾರ್ಥಿಗಳನ್ನು ಕೊಂಡೊ ಯ್ಯುತ್ತಿದ್ದ ಬಸ್ ಅಪಘಾತಕ್ಕೀ ಡಾಗಿದೆ.  ಶಾಲೆ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ತಂಙಳ್ ಉಪ್ಪಾಪ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳೂ ಬಸ್‌ನಲ್ಲಿದ್ದರು. ವಿದ್ಯಾರ್ಥಿಗಳು  ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಬಂಗರಗುಡ್ಡೆಯ ರಸ್ತೆ ಹಾನಿಗೀಡಾಗಿ ಹಲವು ತಿಂಗಳುಗಳು ಕಳೆಯಿತು. ಭಾರೀ ಗಾತ್ರದ …

ಬಿಎಂಎಸ್ ಜಿಲ್ಲಾ ಸಮ್ಮೇಳನ ಯಶಸ್ವಿಗೆ 501 ಸದಸ್ಯರ ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಅಕ್ಟೋಬರ್ 24,25ರಂದು ನಡೆಯಲಿರುವ ಬಿಎಂಎಸ್ ಜಿಲ್ಲಾ ಸಮ್ಮೇಳನದ ಯಶಸ್ವಿಗೆ 501 ಸದಸ್ಯರ ಸ್ವಾಗತ ಸಮಿತಿ ರೂಪೀಕರಿಸಲಾಯಿತು. ಪದಾಧಿಕಾರಿಗಳಾಗಿ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ (ಅಧ್ಯಕ್ಷ), ಕೆ.ವಿ. ಬಾಬು (ಪ್ರಧಾನ ಸಂಚಾಲಕ), ಮನೀಸ್ ಬಿ.(ಕೋಶಾಧಿಕಾರಿ) ಸಹಿತ ೫೦೧ ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸಿದರು. ದಕ್ಷಿಣ ವಲಯ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವನ್ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್, …

ಪಾವೂರು ಪೊಯ್ಯೆ ಪ್ರದೇಶಗಳಲ್ಲಿ ಹಂದಿಗಳ ನಿಗೂಢ ಸಾವು: ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳ ಭೇಟಿ

ವರ್ಕಾಡಿ: ಪಂಚಾಯತ್‌ನ ಪಾವೂರು ಪೊಯ್ಯೆ ಎಂಬಲ್ಲಿ ನಿಗೂಢ ರೀತಿಯಲ್ಲಿ ನಿನ್ನೆ ಬೆಳಿಗ್ಗೆ ಕಾಡು ಹಂದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಸ್ಥಳಕ್ಕೆ ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ಅದಿಕಾರಿಗಳು ತಲುಪಿದ್ದಾರೆ. ಸತ್ತು ಬಿದ್ದಿದ್ದ ಹಂದಿಯ ಪರಿಶೋದನೆ ನಡೆಸಲಾಗಿದ್ದು, ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಹಂದಿಯನ್ನು ಕೊಂಡೊ ಯ್ಯಲಾಗಿದೆ.ಕಳೆದ ಎರಡು ವಾರಗಳಿಂದ ಪಾವೂರು ಪೊಯ್ಯೆ ಸಹಿತ ಪರಿಸರ ಪ್ರದೇಶಗಳಲ್ಲಿ ಸುಮಾರು ಹತ್ತರಷ್ಟು ಹಂದಿಗಳು ನಿಗೂಢವಾಗಿ ಸಾವನ್ನ ಪುö್ಪತ್ತಿರುವುದು ಊರವರಲ್ಲಿ ಆತಂಕ ಉಂಟುಮಾಡಿದೆ. ಈ ಪ್ರದೇಶದಲ್ಲಿ ಈಗಾಗಲೇ ಹಲವರಿಗೆ ಹಂದಿ …

ಬಿಜೆಪಿ ಮಂಡಲ ಸಮಿತಿಯಿಂದ ತಿರಂಗ ಯಾತ್ರೆ

ಕಾಸರಗೋಡು: ಬಿಜೆಪಿ ಕಾಸರ ಗೋಡು ಮಂಡಲ ಸಮಿತಿ ಆಶ್ರಯದಲ್ಲಿ ತಿರಂಗ ಯಾತ್ರೆ ಆಯೋಜಿಸಲಾಯಿತು. ಕರಂದಕ್ಕಾಡ್‌ನಿಂದ ಪಿಲಿಕುಂಜೆಯ ಲೆಫ್ಟಿನೆಂಟ್ ಕರ್ನಲ್ ಮುಹಮ್ಮದ್ ಹಾಶಿಮ್ ಯುದ್ಧ ಸ್ಮಾರಕಕ್ಕೆ ನಡೆದ ತಿರಂಗ ಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಪಿ.ಆರ್. ಸುನಿಲ್ ಮಾತನಾಡಿದರು. ಬಳಿಕ ಮುಹಮ್ಮದ್ ಹಾಶಿಮ್ ಸ್ಮಾರಕದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸೆಕ್ರೆಟರಿ ದಿವ್ಯಾ, ಪುರುಷೋತ್ತಮನ್, ಶ್ರೀಧರ, ಪ್ರಸನ್ನ ಕಾರಂತ್, ವರಪ್ರಸಾದ್ …

ಬದಿಯಡ್ಕದಲ್ಲಿ ರಾಷ್ಟ್ರ ಸ್ವಾಭಿಮಾನಿ ಸಮಿತಿಯಿಂದ ತಿರಂಗ ಯಾತ್ರೆ

ಬದಿಯಡ್ಕ: ರಾಷ್ಟ್ರ ಸ್ವಾಭಿಮಾನಿ ಸಮಿತಿ ಬದಿಯಡ್ಕ ಮಂಡಲ ಇದರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದಂಗ ವಾಗಿ ನಿನ್ನೆ ತಿರಂಗ ಯಾತ್ರೆ ನಡೆಯಿತು. ಬೋಳುಕಟ್ಟೆಯಿಂದ ಬದಿಯಡ್ಕ ಪೇಟೆ ವರೆಗೆ ನಡೆದ ಯಾತ್ರೆಯನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂ ಡೋಳುಮೂಲೆ ಇವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಪಂಚಾಯತ್ ಅಧ್ಯಕ್ಷರಾದ ಶಂಕರ ಡಿ., ಯಶೋಧ, ಮಾಲಿನಿ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ.ಎಂ, ರಾಜ್ಯ ಸಮಿತಿ ಸದಸ್ಯ …

ಜ್ವರಕ್ಕೆ ಚಿಕಿತ್ಸೆಗೆ ತಲುಪಿದ ಯುವಕ  ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು

ಕಣ್ಣೂರು: ಜ್ವರ ತಗಲಿ   ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಯುವಕ ಕುಸಿದು ಬಿದ್ದು ಮೃತಪಟ್ಟರು. ಚಪ್ಪಾರಪಡವ್ ಇ.ಸಿ. ಅಬ್ದುಲ್ಲರ ಪುತ್ರ ಮರ್ಷಾದ್ (25) ನಿನ್ನೆ ಮಧ್ಯಾಹ್ನ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಂದೆಯ ಜೊತೆ ಚಪ್ಪಾರಪಡವ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿದ ಮರ್ಷಾದ್ ವೈದ್ಯರನ್ನು ಕಾಣಲೆಂದು ನಿಂತಿದ್ದ ಮಧ್ಯೆ ಕುಸಿದು ಬಿದ್ದಿದ್ದರು. ಕೂಡಲೇ ಕಣ್ಣೂರಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಆ ವೇಳೆಗೆ ಮೃತಪಟ್ಟರು.  ಮೃತರು ತಂದೆ, ತಾಯಿ ಫಾತ್ವಿಮ, ಸಹೋದರ- ಸಹೋದರಿ ಯಾದ ಉಮೈರ್, ಮರ್ಜಾನ ಹಾಗೂ …

ಲಕ್ಷ್ಮಿ  ನಿಧನ

ಪೆರ್ಲ: ಬಜಕೂಡ್ಲು ನಿವಾಸಿ ದಿ| ಕೊಗ್ಗು ಪೂಜಾರಿಯವರ ಪತ್ನಿ ಲಕ್ಷ್ಮಿ (75) ನಿಧನ ಹೊಂದಿದರು. ಮೃತರು ಸಹೋದರರಾದ ಕರಿಯಪ್ಪ ಪೂಜಾರಿ, ಕೊರಗಪ್ಪ ಪೂಜಾರಿ, ಬಾಬು ಪೂಜಾರಿ, ಸಂಕಪ್ಪ ಪೂಜಾರಿ, ಬಾಲಕೃಷ್ಣ ಪೂಜಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಖ್ಯಾತ ಕಳವು ಆರೋಪಿ ನೆಲ್ಲಿಕಟ್ಟೆಯ ಉಮ್ಮರ್ ಫಾರೂಕ್ ಬಂಧನ

ಕುಂಬಳೆ: ಕುಖ್ಯಾತ ಕಳವು ಆರೋಪಿಯಾದ ನೆಲ್ಲಿಕಟ್ಟೆ ನಿವಾಸಿ ಉಮ್ಮರ್ ಫಾರೂಕ್ (46)  ಸೆರೆಗೀಡಾಗಿದ್ದಾನೆ. ಈತ ಕಾಸರಗೋಡು, ದ.ಕ ಜಿಲ್ಲೆ ಸಹಿತ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವುಗೈಯ್ಯುವ ತಂಡದ ಮುಖ್ಯ ಸೂತ್ರಧಾರನಾಗಿದ್ದಾನೆ.  ಕಳೆದ ತಿಂಗಳ 29ರಂದು ಮಾವಿನಕಟ್ಟೆಯ ಕ್ಷೇತ್ರದಿಂದ ಕಾಣಿಕೆ ಹುಂಡಿಗಳನ್ನು ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಹಲವು ತಿಂಗಳಿಂದ ಕರ್ನಾಟಕ ಪೊಲೀಸರು ಹಾಗೂ ಕೇರಳ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.  ಹಗಲು ಹೊತ್ತಿನಲ್ಲಿ ಎಲ್ಲಾದರೂ ಅಡಗಿ ಕುಳಿತು ರಾತ್ರಿ ವೇಳೆ  ಹೊರಗಿಳಿದು …

ಬ್ಯಾಂಕ್ ಉದ್ಯೋಗಿಗಳಾದ ಭಾವೀ ವಧು-ವರ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಮದುವೆಗೆ ಇನ್ನು  ಮೂರು ತಿಂಗಳು ಮಾತ್ರವೇ ಬಾಕಿಯಿರುವಂತೆ ಬ್ಯಾಂಕ್ ಉದ್ಯೋಗಿಗಳಾದ ಯುವತಿ ಹಾಗೂ ಯುವಕ  ಎರಡು ಕಡೆಗಳಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆ ಸಂಭವಿಸಿದೆ.  ಪೂಚಕ್ಕಾಡ್ ಕಿಳಕ್ಕೇಕರದ  ಕೆ. ಚಂದ್ರನ್ ಎಂಬವರ ಪುತ್ರಿ  ಅನುಶ್ರೀ (25) ಹಾಗೂ ಕಣ್ಣೂರು ಅಂಬಲತ್ತಟ್ಟ್ ನಿವಾಸಿ ಸುಧಾಕರನ್ ಎಂಬವರ ಪುತ್ರ ವಿ. ಅಮಲ್ (26) ಎಂಬಿವರು ಸಾವಿಗೀಡಾದವರಾ ಗಿದ್ದಾರೆ. ಅನುಶ್ರೀ  ಕರ್ನಾಟಕದ ಹುಣಸೂರಿನಲ್ಲಿರುವ ಎಸ್‌ಬಿಐ ಶಾಖೆಯ ಉದ್ಯೋಗಿಯಾಗಿದ್ದಳು. ಅಮಲ್ ಎಸ್‌ಬಿಐ ಎರ್ನಾಕುಳಂ ಎಂ.ಜಿ ರೋಡ್ ಶಾಖೆಯ  ಮೆನೇಜರ್ ಆಗಿದ್ದರು. ಅನುಶ್ರೀ ನಿನ್ನೆ …