ಆಪರೇಶನ್ ಪಿ. ಹಂಟ್: ಐದು : ಮೊಬೈಲ್ ಫೋನ್ ವಶ

ಕಾಸರಗೋಡು: ಆಪರೇಶನ್ ‘ಪಿ-ಹಂಟ್’ ನಂತೆ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಇಂಟರ್‌ನೆಟ್ ಮೂಲಕ ಮಕ್ಕಳ ನಗ್ನ ಚಿತ್ರ ಹಾಗೂ ವೀಡಿಯೋಗಳನ್ನು ವೀಕ್ಷಿಸುವಿಕೆ ಹಾಗೂ ಅದನ್ನು ಇತರರಿಗೆ ಹಸ್ತಾಂತರಿಸುವಿಕೆ ನಡೆಸಿದುದಕ್ಕೆ ಸಂಬಂಧಿಸಿ ಪೊಲೀಸರು ಇಂತಹ ಕ್ರಮ ಕೈಗೊಂಡಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಯತ್ನಗಳು ಇತ್ತೀಚೆಗಿನಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಆಪರೇಶನ್ ಪಿ ಹಂಟ್ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್‌ಭರತ್ ರೆಡ್ಡಿಯವರ …

ಪೆರಿಯಾದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಕಾಸರಗೋಡು: ಪೆರಿಯಾದಲ್ಲಿ ರುವ  ಕೇರಳ ಕೇಂದ್ರ ವಿಶ್ವವಿದ್ಯಾ ಲಯ ಕ್ಯಾಂಪಸ್‌ನಲ್ಲಿ ಚಿರತೆ ಮತ್ತೊಮ್ಮೆ ಕಾಣಿಸಿಕೊಂ ಡಿರುವುದಾಗಿ ವರದಿಯಾಗಿದೆ. ಇದೀಗ ಮತ್ತೆ ಚಿರತೆ ಕಂಡುಬಂ ದಿರುವುದಾಗಿ ವಿದ್ಯಾರ್ಥಿ ಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ಚಿರತೆ ಕಂಡುಬಂದಿಲ್ಲ. ಪದೇ ಪದೇ ಚಿರತೆ ಕಂಡುಬರುತ್ತಿರುವುದರಿಂದ ವಿ.ವಿ. ಕ್ಯಾಂಪಸ್‌ನಲ್ಲಿ ಬೋನು ಇರಿಸುವ ಬಗ್ಗೆ ಅರಣ್ಯಾಧಿಕಾರಿಗಳು ಆಲೋ ಚಿಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ಚಿರತೆ ಕಂಡುಬಂದ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ಅದರಲ್ಲಿ …

ಶಾಲಾ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಸಾವು

ಕಾಸರಗೋಡು: ಶಾಲಾ ವಿದ್ಯಾರ್ಥಿಯೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಚೆರ್ಕಳ ಬಳಿಯ ಪಾಡಿಯಲ್ಲಿ ಸಂಭವಿಸಿದೆ. ಮುಟ್ಟತ್ತೋಡಿ ವಿಲ್ಲೇಜ್‌ನ ಕಲ್ಲಕಟ್ಟ ಬೆಳ್ಳೂರಡ್ಕದ ಹಸೈನಾರ್‌ರ ಪುತ್ರ ಮಿಥ್‌ಲಾಜ್ (11) ಮೃತಪಟ್ಟ ದುರ್ದೈವಿ. ಈತ ಆಲಂಪಾಡಿ ಶಾಲೆಯ ೬ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮೊನ್ನೆ ಸಂಜೆ ಸ್ನೇಹಿತರೊಂದಿಗೆ ತೋಡಿನಲ್ಲಿ ಸ್ನಾನಕ್ಕೆಂದು ತೆರಳಿದ್ದಾನೆನ್ನಲಾಗಿದೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಅಗ್ನಿಶಾಮದಳ, ವಿದ್ಯಾನಗರ ಪೊಲೀಸ್ ಹಾಗೂ ನಾಗರಿಕರು ಸೇರಿ ನಡೆಸಿದ ಶೋಧ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ …

ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾನವ ಹಕ್ಕು ಕಾರ್ಯಕರ್ತನಿಂದ ದೂರು

ಕುಂಬಳೆ: ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಲು, ಔಷಧಿಗಳನ್ನು ಖರೀದಿಸಲು ಬರುವವರ ವಾಹನಗಳಲ್ಲಿ ದಂಡ ನೋಟೀಸ್ ಲಗತ್ತಿಸುತ್ತಾರೆ. ಟ್ರಾಫಿಕ್ ಪರಿಷ್ಕಾರ ದಂಗವಾಗಿ ಕುಂಬಳೆ ಪೇಟೆಯಲ್ಲಿ ಅಧಿಕಾರಿಗಳು ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಸ್ಥಾಪಿಸಿಲ್ಲ.  ಅಂಗಡಿಗಳ ಮುಂದೆ ವಾಹನಗಳನ್ನು ನಿಲುಗಡೆಗೊಳಿಸುವು ದರಿಂದಾಗಿ ಯಾವುದೇ ರೀತಿಯ ಸಾರಿಗೆ ತಡೆ ಉಂಟಾಗುತ್ತಿರುವುದಾಗಿ ವ್ಯಾಪಾರಿಗಳು ಕೂಡಾ ದೂರು ನೀಡಿಲ್ಲ. …

ಪ್ಲಸ್‌ಟು ವಿದ್ಯಾರ್ಥಿ ಅಪಘಾತದಲ್ಲಿ ಸಾವಿಗೀಡಾದ ಪ್ರಕರಣ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ತೀವ್ರ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಮಾವಿನಕಟ್ಟೆಯಲ್ಲಿ ಇತ್ತೀಚೆಗೆ ಪ್ಲಸ್‌ಟು ವಿದ್ಯಾರ್ಥಿ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ  ಅಪಘಾತ ಗಳನ್ನು ತಡೆಗಟ್ಟುವ ಅಂಗವಾಗಿ ವಾಹನ ತಪಾಸಣೆ ತೀವ್ರಗೊಳಿಸುವಂತೆ ಇನ್‌ಸ್ಪೆಕ್ಟರ್ ಕೆ.ಪಿ. ಜಿಜೀಶ್ ನಿರ್ದೇಶ ನೀಡಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನಗಳಲ್ಲಿ ಸಂಚಾರ, ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವುದು, ಲೈಸನ್ಸ್ ಇಲ್ಲದೆ ವಾಹನ ಚಲಾಯಿ ಸುವುದು, ಪ್ರಾಯಪೂರ್ತಿಯಾಗದ ಮಕ್ಕಳು ವಾಹನ ಚಲಾಯಿಸುವುದು, ಅಪರಿಚಿತ ವೇಗದಲ್ಲಿ ಸಂಚಾರ ಮೊದಲಾದ ಕಾನೂನು ಉಲ್ಲಂಘನೆಗಳ ವಿರುದ್ಧ ಇಂದಿನಿಂದ …

ಸನಾತನ ಧರ್ಮದ ಬೆನ್ನೆಲುಬು ಆಗಿ ಮಕ್ಕಳು ಬೆಳೆಯಬೇಕು-ಕೆ.ಪಿ. ಶಶಿಕಲಾ ಟೀಚರ್

ಕಾಸರಗೋಡು: ಮಕ್ಕಳು ಸನಾತನ ಧರ್ಮದ ಬೆನ್ನೆಲುಬಾಗಿ ಬೆಳೆಯಬೇ ಕೆಂದು ಹಿಂದೂ ಐಕ್ಯವೇದಿ ರಾಜ್ಯ ರಕ್ಷಾಧಿಕಾರಿ ಕೆ.ಪಿ. ಶಶಿಕಲಾ ಟೀಚರ್ ಕರೆನೀಡಿದ್ದಾರೆ. ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗವಾಗಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸನಾತನ ಧರ್ಮವನ್ನು ಇತಿಶ್ರೀಗೊಳಿಸುವ ರೀತಿಯ ಯತ್ನಗಳು ಕೇರಳದಲ್ಲಿ ಹಲವು ವರ್ಷಗಳಿಂದಲೇ ಆರಂಭಗೊಂಡಿದೆ. ವಿವಾದಗಳನ್ನು ಸೃಷ್ಟಿಸಿ ಸನಾತನ ಧರ್ಮ ಇಲ್ಲದಾಗಿಸುವ ಯತ್ನ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀ ಗುರುವಾಯೂರು ಕ್ಷೇತ್ರದ ವಿಷಯದಲ್ಲಿ ಈ ರೀತಿಯ …

ಕೇರಳ ಬೆಲೆಯೇರಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ- ಎಂ.ಎಲ್. ಅಶ್ವಿನಿ ಆರೋಪ

ಕುಂಬ್ಡಾಜೆ: ಕೇರಳ ಅಭಿವೃದ್ಧಿಯಲ್ಲಿ ಅಲ್ಲ ಬೆಲೆಯೇರಿಕೆಯಲ್ಲಿ ಒಂದನೇ ಸ್ಥಾನದಲ್ಲಿದೆ ಎಂದು, ೧೦ ವರ್ಷದ ಆಡಳಿತದಲ್ಲಿ ಕೇರಳವನ್ನು ಭಾರೀ ಸಾಲದ ಕೂಪಕ್ಕೆ ತಳ್ಳಿದುದಾಗಿದೆ ಪಿಣರಾಯಿ ವಿಜಯನ್‌ರ ಕೊಡುಗೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕುಂಬ್ಡಾಜೆ ಪಂಚಾ ಯತ್ ನಾಲ್ಕನೇ ವಾರ್ಡ್ ಸಮ್ಮೇಳನ ಏತಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತೆಂಗಿನ ಮರಗಳು ತುಂಬಿ ತುಳುಕುವ ಕೇರಳದಲ್ಲಿ ತೆಂಗಿನಕಾಯಿಯ ಬೆಲೆ ಜನಸಾಮಾ ನ್ಯರಿಗೆ ಸಹಿಸಿಕೊಳ್ಳುವು ದಕ್ಕಿಂತಲೂ ಹೆಚ್ಚಾಯಿತು. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳೀಯರು ಸಂಕಷ್ಟಕ್ಕೀ …

ಬಿ.ವಿ. ನಾರಾಯಣ ಭಟ್ ಕುಂಚಿನಡ್ಕ ನಿಧನ

ಪೆರ್ಲ: ಕಾಟುಕುಕ್ಕೆ ಸಮೀಪ ಕುಂಚಿನಡ್ಕ ನಿವಾಸಿ ಬಿ.ವಿ. ನಾರಾಯಣ ಭಟ್ (77) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಮ್ಮ ನಿವಾಸದಲ್ಲೇ ನಿರಂತರವಾಗಿ 350ಕ್ಕೂ ಹೆಚ್ಚು ರಾಮಾಯಣ ಪಾರಾಯಣ ಮಾಡಿದ್ದ ಇವರಿಗೆ ಶ್ರೀರಾಮ ಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ರಾಮಾಯಣ ಸಿದ್ಧ ಎಂಬ ಬಿರುದು ನೀಡಿ ಗೌರವಿಸಿದ್ದರು. 300ಕ್ಕೂ ಹೆಚ್ಚು ಭಾಗವತ ರಾಮಾಯಣ ಮಾಡಿರುತ್ತಾರೆ. ಅಳಿಕೆ ಶ್ರೀ ಸತ್ಯಸಾಯಿ ವಿಹಾರ ಕಾಲೇಜಿನ ನಿವೃತ್ತ ಉದ್ಯೋಗಿ ಎಣ್ಮಕಜೆ ಹವ್ಯಕ …

ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾನವ ಹಕ್ಕು ಕಾರ್ಯಕರ್ತನಿಂದ ದೂರು

ಕುಂಬಳೆ: ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಲು, ಔಷಧಿಗಳನ್ನು ಖರೀದಿಸಲು ಬರುವವರ ವಾಹನಗಳಲ್ಲಿ ದಂಡ ನೋಟೀಸ್ ಲಗತ್ತಿಸುತ್ತಾರೆ. ಟ್ರಾಫಿಕ್ ಪರಿಷ್ಕಾರ ದಂಗವಾಗಿ ಕುಂಬಳೆ ಪೇಟೆಯಲ್ಲಿ ಅಧಿಕಾರಿಗಳು ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಸ್ಥಾಪಿಸಿಲ್ಲ.  ಅಂಗಡಿಗಳ ಮುಂದೆ ವಾಹನಗಳನ್ನು ನಿಲುಗಡೆಗೊಳಿಸುವು ದರಿಂದಾಗಿ ಯಾವುದೇ ರೀತಿಯ ಸಾರಿಗೆ ತಡೆ ಉಂಟಾಗುತ್ತಿರುವುದಾಗಿ ವ್ಯಾಪಾರಿಗಳು ಕೂಡಾ ದೂರು ನೀಡಿಲ್ಲ. …

ನಗರದ ಟ್ರಾಫಿಕ್ ಸಿಗ್ನಲ್ ಆಧುನಿಕ ರೀತಿಯಲ್ಲಿ ಅಭಿವೃದ್ಧಿಗೆ ಕ್ರಮ

ಕಾಸರಗೋಡು: ನಗರದ ಹಳೆಯ ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಸಿಗ್ನಲ್ ಆಧುನಿಕ ರೀತಿಯಲ್ಲಿ ಪರಿಷ್ಕರಿಸುವುದಾಗಿ ನಗರಸಭಾ ಚೆಯರ್‌ಮೆನ್ ಅಬ್ಬಾಸ್ ಬೀಗಂ ತಿಳಿಸಿದ್ದಾರೆ. ಎ.ಐ. ಕ್ಯಾಮರಾಗಳ ಸಹಿತ ನೂತನ ತಾಂತ್ರಿಕ ವಿದ್ಯೆಗಳನ್ನು ಬಳಸಿಕೊಂಡು ಆಟೋಮ್ಯಾಟಿಕ್ ಸಿಗ್ನಲ್ ಸಿಸ್ಟಂ ಏರ್ಪಡಿಸಲಾಗುವುದು. ಪ್ರಸ್ತುತ ರಸ್ತೆಯ ಮಧ್ಯದಲ್ಲಿರುವ ಸಿಗ್ನಲ್ ಪೋಸ್ಟ್ ತೆರವುಗೊಳಿಸಲಾಗುವುದು. ಮೈಂಟನೆನ್ಸ್ ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದೆ. ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕೆಲಸವನ್ನು ಕೆಲ್ಟ್ರೋನ್ ವಹಿಸಿಕೊಂಡಿದೆ ಎಂದು ಅಬ್ಬಾಸ್ ಬೀಗಂ ತಿಳಿಸಿದ್ದಾರೆ.