ಸ್ಥಳೀಯಾಡಳಿತ ಚುನಾವಣೆ: ಮೀಸಲು ವಾರ್ಡ್‌ಗಳನ್ನು ಗುರುತಿಸಲು ಆಪ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮೀಸಲಾತಿ ವಾರ್ಡ್‌ಗಳನ್ನು ಗುರುತಿಸಲು ಹೊಸ ಆಪ್‌ಗೆ ರೂಪು ನೀಡಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಇನ್‌ಫರ್ಮೇಷನ್ ಕೇರಳ ಮಿಷನ್ ಆಪ್‌ನ್ನು ಈಗಾಗಲೇ ಅಭಿವೃದ್ಧಿ ಪಡಿಸಿದೆ. ಅದರ ಸಹಾಯದೊಂದಿಗೆ ಮೀಸಲಾತಿ ವಾರ್ಡ್‌ಗಳನ್ನು ಗುರುತಿಸಲಾಗುವುದು. ವಾರ್ಡ್‌ಗಳ ಜನಸಂಖ್ಯೆ ಮತ್ತು ಮೀಸಲಾತಿ ವಿಭಾಗದವರ ಜನಸಂಖ್ಯೆಯನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಮೀಸಲಾತಿ ವಾರ್ಡ್‌ಗಳನ್ನು ಆರಿಸಲಾಗುವುದು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಂದಿನ ತಿಂಗಳ ಕೊನೆಯ ವಾರದಲ್ಲಿ  ಚೀಟಿ ಎತ್ತುವ ಮೂಲಕ ಮೀಸಲಾತಿ ವಾರ್ಡ್‌ಗಳನ್ನು ನಿರ್ಧರಿಸಲಾಗುವುದು. ಸ್ಥಳೀಯಾಡಳಿತ …

ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮ್ಮೇಳನ

ಮಂಜೇಶ್ವರ: ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮಿತಿಯ ವಾರ್ಷಿಕ ಸಮ್ಮೇಳನ ಬಾಯಾರು ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ತಿರುಮಲೇಶ್ವರ ಭಟ್ ಉದ್ಘಾಟಿಸಿದರು. ಸಹಕಾರ ಭಾರತಿ ಪ್ರಾಂತ್ಯ ಅಧ್ಯಕ್ಷ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಪ್ರಾಂತ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಅಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬಾಯಾರು ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೂವೆತ್ತೋಡಿ, ಜಿಲ್ಲಾ ಸಂಘಟನಾ ಪ್ರಮುಖ್ ಅಶೋಕ್ ಬಾಡೂರು ಮಾತನಾಡಿದರು. ತಾಲೂಕು …

ಬಾಂಬ್ ನಿರ್ಮಾಣ ವೇಳೆ ಉಗ್ರ ಸ್ಫೋಟ ಮಾನವ ಶರೀರ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಬಾಂಬ್ ನಿರ್ಮಾ ಣದ ವೇಳೆ ಉಗ್ರ ಸ್ಫೋಟ ಉಂಟಾಗಿ ಮನೆಯೊಳಗಿದ್ದ ವ್ಯಕ್ತಿಯೋರ್ವನ ದೇಹ ಛಿದ್ರಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರು ಬಳಿ ನಡೆದಿದೆ. ಕಣ್ಣೂರಿಗೆ ಸಮೀಪದ ಕಣ್ಣಪುರ ಕಿರಳಯಿಲ್‌ನ ಬಾಡಿಗೆ ಮನೆಯೊಂ ದರಲ್ಲಿ ಇಂದು ಮುಂಜಾನೆ ೧.೫೧ರ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟ ದಿಂದ  ಮನೆ ಸಿಡಿದು ಪೂರ್ಣವಾಗಿ ಕುಸಿದುಬಿದ್ದಿದೆ.  ಅದರೊಳಗಿದ್ದ ವ್ಯಕ್ತಿಯ ದೇಹ  ಛಿದ್ರಗೊಂಡು ಅವಯವಗಳು ಎಲ್ಲೆಡೆಗಳಲ್ಲಿ  ಚೆಲ್ಲಾಪಿಲ್ಲಿಯಾಗಿ  ಬಿದ್ದುಕೊಂಡಿದೆ.  ಸ್ಫೋಟ ಅದೆಷ್ಟು ಉಗ್ರವಾಗಿತ್ತೆಂದರೆ ಸಮೀಪದ ಮನೆಗಳ ಗೋಡೆಗಳೂ ಬಿರುಕುಬಿಟ್ಟಿವೆ. ಇದರಲ್ಲಿ ಕೆಲವು ಮನೆಗಳ …

ಸ್ಕೂಟರ್ ಹೆದ್ದಾರಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಕುಂಬಳೆ: ರಸ್ತೆಯ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಕುಂಬಳೆ ಬಳಿಯ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಪಚ್ಚಂಬಳ ದೀನಾರ್ ನಗರದ ಮುಹಮ್ಮದ್ ಎಂಬವರ ಪುತ್ರ ಈಚು ಯಾನೆ ಯೂಸಫ್ (18) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಶಿರಿಯ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿಯಾಗಿದ್ದಾನೆ. ಶಾಲೆಯಲ್ಲಿ ನಿನ್ನೆ ನಡೆದ ಓಣಂ ಕಾರ್ಯಕ್ರಮದ ಬಳಿಕ ಸ್ನೇಹಿತನನ್ನು ಸ್ಕೂಟರ್‌ನಲ್ಲಿ ಮೊಗ್ರಾಲ್‌ನ ಮನೆಗೆ ತಲುಪಿಸಿದ ಯೂಸಫ್ ಪಚ್ಚಂಬಳಕ್ಕೆ ಮರಳುತ್ತಿದ್ದ ವೇಳೆ ರಾತ್ರಿ ೮.೩೦ಕ್ಕೆ …

ಸಮಾಂತರ ಲಾಟರಿ: ಕುಂಬಳೆಯಲ್ಲಿ ಇಬ್ಬರು ಸೆರೆ

ಕುಂಬಳೆ: ಪೇಟೆ ಕೇಂದ್ರೀಕರಿಸಿ  ತತ್ಸಮಾನ ಲಾಟರಿ ನಡೆಸುವ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಅನಂತಪುರದ ಸತೀಶನ್ (75) ನಾರಾಯಣಮಂಗಲದ ರಾಜೇಶ್ (32) ಎಂಬಿವರನ್ನು ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಸೆರೆಹಿಡಿದ ಪೊಲೀಸ್ ತಂಡದಲ್ಲಿ ಎಸ್‌ಐ ಬಾಬು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚಂದ್ರನ್, ಸಿವಿಲ್ ಪೊಲೀಸ್ ಆಫೀಸರ್ ಸುಧೀಶ್ ಸೇರಿದ್ದರು. ಕುಂಬಳೆ ಹಾಗೂ ಪರಿಸರಗಳಲ್ಲಿ ತತ್ಸಮಾನ ಲಾಟರಿ ವ್ಯವಹಾರ ವ್ಯಾಪಕವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಜಿಜೀಶ್‌ರ …

ಉಸಿರಾಟ ತೊಂದರೆ ಯುವಕ ಮೃತ್ಯು

ಕುಂಬಳೆ: ಉಸಿರಾಟ ತೊಂ ದರೆಯಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕರ್ನಾಟಕದ ಮಂಡ್ಯ ನಿವಾಸಿಯೂ ಕಳೆದ ಹಲವು ವರ್ಷಗಳಿಂದ ಕೂಡ್ಲು ಕಾಂತಿಕೆರೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಿವಣ್ಣ-ಪುಷ್ಪ ದಂಪತಿಯ ಏಕೈಕ ಪುತ್ರ ಸತೀಶ (28) ಮೃತಪಟ್ಟ ಯುವಕ. ಇವರು ಕೂಲಿ ಕಾರ್ಮಿ ಕನಾಗಿದ್ದರು. ಹಲವು ಕಾಲದಿಂದ ಇವರಿಗೆ ಉಸಿರಾಟ ತೊಂದರೆ ಕಾಣಿಸುತ್ತಿತ್ತೆನ್ನಲಾಗಿದೆ. ನಿನ್ನೆ ರಾತ್ರಿ ಅಸೌಖ್ಯ ಉಲ್ಭಣಗೊಂಡಿದ್ದು, ಕೂಡಲೇ ಜನರಲ್ ಆಸತ್ರೆಗೆ ತಲುಪಿಸಿದರೂ ಜೀವರಕ್ಷಿಸ ಲಾಗಲಿಲ್ಲ. ಮೃತರು ತಂದೆ,ತಾಯಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಿನ್ನದ ಬೆಲೆ ಪವನ್‌ಗೆ 77,000 ದತ್ತ

ಕಾಸರಗೋಡು: ಚಿನ್ನದ ಬೆಲೆ ದಾಖಲೆಯ ಏರಿಕೆ ಮತ್ತೆ ಮುಂದುವರಿದಿದೆ. ನಿನ್ನೆಗಿಂತ ಇಂದು ಒಂದು ಪವನ್ ಚಿನ್ನಕ್ಕೆ ಏಕಾಏಕಿ 1200 ರೂ. ಹೆಚ್ಚಳವುಂಟಾಗಿದೆ. ಈ ಮೂಲಕ ಇಂದು ಒಂದು ಪವನ್‌ಗೆ 76,960 ರೂ.ಗೇರಿದೆ. ಗ್ರಾಂಗೆ 9620 ರೂ. ನಿನ್ನೆ ಒಂದು ಪವನ್ ಚಿನ್ನಕ್ಕೆ 75,760 ರೂಪಾಯಿಗಳಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಮೌಲ್ಯ ಏರಿಕೆಯೇ ಭಾರತದಲ್ಲೂ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆಯೆನ್ನಲಾಗುತ್ತಿದೆ. ಇದು ಗ್ರಾಹಕರಿಗೆ ತೀವ್ರ ಹೊಡೆತವುಂಟುಮಾಡಿದೆ.

25.92 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ಕರಂದ ಕ್ಕಾಡ್‌ನಲ್ಲಿ ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಸೂರಜ್ ಎನ್.ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 25.92 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೂಡ್ಲು ಉಜಿರೆಕೆರೆ ಬೆದ್ರಡ್ಕ ಹೌಸ್‌ನ ಮನೋಜ್ ಕುಮಾರ್ ವಿ.ಎನ್.(40) ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾ ಗಿದೆ. ಆರೋಪಿಯನ್ನು  ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ವಿನೋದನ್ ಕೆ.ವಿ. ಪ್ರಿವೆಂಟಿವ್ ಆಫೀಸರ್ ಉಣ್ಣಿಕೃಷ್ಣನ್ ಕೆ, ಸಿವಿಲ್ …

ಅಪ್ರಾಪ್ತನಿಂದ ಕಾರು ಚಲಾವಣೆ ಮಾಲಕಿ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತ ಚಲಾಯಿಸುತ್ತಿದ್ದ ಕಾರನ್ನು ಪೊಲೀ ಸರು ವಶಕ್ಕೆ ತೆಗೆದು ಆರ್.ಸಿ ಮಾಲಕಿ ಮಹಿಳೆಯ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಬೇಕೂರು ಶಾಲಾ ಬಳಿಯಲ್ಲಿ ಅಪ್ರಾಪ್ತ ಕಾರು ಚಲಾಯಿಸುತ್ತಿರುವ ಬಗ್ಗೆ ತಿಳಿದು ತಲುಪಿದ ಪೊಲೀಸರು ಕಾರನ್ನು ಚಲಾಯಿಸುತ್ತಿರುವ ಬಾಲಕನ ಬಳಿ ಲೈಸನ್ಸ್ ಕೇಳಿದಾಗ ಲೈಸನ್ಸ್ ಹೊಂದಿರಲಿಲ್ಲ ಹಾಗೂ 17 ವರ್ಷ ಪ್ರಾಯವಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ವಶಪಡಿಸಿ ಕೇಸು ದಾಖಲಿಸಿದ್ದಾರೆ.

ತಲಪಾಡಿಯಲ್ಲಿ ಆರು ಮಂದಿ ಸಾವಿಗೆ ಕಾರಣವಾದ ಬಸ್ ಚಾಲಕ ಸೆರೆ

ಮಂಜೇಶ್ವರ: ತಲಪ್ಪಾಡಿಯಲ್ಲಿ ಮೊನ್ನೆ ಮಧ್ಯಾಹ್ನ ಆರು ಮಂದಿಯ ಸಾವಿಗೆ ಕಾರಣವಾದ ಭೀಕರ ಬಸ್ ಅಪಘಾತಕ್ಕೆ ಸಂಬಂಧಿಸಿ ಅದರ ಚಾಲಕನನ್ನು ಮಂಜೇಶ್ವರ ಪೊಲೀ ಸರು ಬಂಧಿಸಿದ್ದಾರೆ. ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಾಗಲಕೋಟೆ  ಅಂಬೇಡ್ಕರ್ ನಗರದ  ನಿಜಲಿಂಗಪ್ಪ ಛಲವಾದಿ (47) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.ಈತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು ಈ ವೇಳೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಮೊನ್ನೆ ಮಧ್ಯಾಹ್ನ 1.45ರ ವೇಳೆ ತಲಪಾಡಿಯಲ್ಲಿ ಅಪಘಾತ ಸಂಭವಿಸಿತ್ತು. ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ …