ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಮನೆಯೊಳಗೆ ಜೀರ್ಣಾವಸ್ಥೆಯಲ್ಲಿ ಪತ್ತೆ

ಕುಂಬಳೆ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತದೇಹ ಜೀರ್ಣಾವಸ್ಥೆಯಲ್ಲಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರಬ ಹುದೆಂದು ಅಂದಾಜಿಸಲಾಗಿದೆ. ಕುಬಣೂರು ಮೀನಾರ್‌ಪಂಜ ಎಂಬಲ್ಲಿನ ಈಶ್ವರ ಮೂಲ್ಯ (50) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಇವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರೆನ್ನ ಲಾಗಿದೆ. ಕೂಲಿ ಕಾರ್ಮಿಕನಾಗಿದ್ದರು. ಟಿವಿ ಕೇಬಲ್ ಸಂಪರ್ಕ ನೀಡುವ ವ್ಯಕ್ತಿ ಈಶ್ವರ ಮೂಲ್ಯರನ್ನು ಕೆಲಸಕ್ಕೆ ಕರೆಯಲೆಂದು ನಿನ್ನೆ ಅಲ್ಲಿಗೆ ತೆರಳಿದಾಗ ಮನೆಯ ಬಾಗಿಲು ತೆರೆದಿಟ್ಟಿತ್ತು. ಕರೆದರೂ ಯಾವುದೇ ಪ್ರತಿಕ್ರಿಯೆ ಉಂ …

ವಿದ್ಯಾರ್ಥಿನಿಗೆ ದೌರ್ಜನ್ಯ ಬಂದ್ಯೋಡು ನಿವಾಸಿ ವಿರುದ್ಧ ಪೋಕ್ಸೋ ಕೇಸು ದಾಖಲು

ಬಂದ್ಯೋಡು: 17 ವರ್ಷದ ಒಟಿಟಿ ವಿದ್ಯಾರ್ಥಿನಿಯನ್ನು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಖಾಸಗಿ ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನ ನೌಕರನ ವಿರುದ್ಧ ಚಂದೇರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಬಂದ್ಯೋಡು ನಿವಾಸಿಯಾದ ಮೊಹಮ್ಮದ್ ಸಾದಿಕ್ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಚಂದೇರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿ ಬಾಲಕಿ ಮೊಹಮ್ಮದ್ ಸಾದಿಕ್ ಕೆಲಸ ಮಾಡುವ ಖಾಸಗಿ ಆಸ್ಪತ್ರೆಯ ಒಟಿಟಿ ವಿದ್ಯಾರ್ಥಿನಿಯಾಗಿದ್ದಾಳೆ. ಘಟನೆ ನಡೆದದ್ದು ಮಂಜೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಾದ ಕಾರಣ ಚಂದೇರ ಪೊಲೀಸರು ಈ ಕೇಸನ್ನು ಮಂಜೇಶ್ವರ ಠಾಣೆಗೆ ಹಸ್ತಾಂತರಿಸಿದ್ದಾರೆ.

ಏಜೆಂಟ್‌ರ ಮೂಲಕ ಹಣ ಸಂಗ್ರಹ: ಮೋಟಾರು ವಾಹನ ಇಲಾಖೆಯ ಜಿಲ್ಲೆಯ ನಾಲ್ವರು ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ಟ್ರಿಬ್ಯೂನಲ್ ತನಿಖೆ

ಕಾಸರಗೋಡು:  ಡ್ರೈವಿಂಗ್ ಟೆಸ್ಟ್ ಗ್ರಾಂಡ್‌ನ ಏಜೆಂಟರ ಮೂಲಕ ಹಣ ಸಂಗ್ರಹ ಮಾಡಿರುವುದಾಗಿ ವಿಜಿಲೆನ್ಸ್ ಆಂಡ್ ಆಂಟಿ ಕರೆಕ್ಷನ್ ಬ್ಯೂರೋ ನಡೆಸಿದ ತನಿಖೆಯಲ್ಲಿ  ಪತ್ತೆಯಾದ ಹಿನ್ನೆಲೆಯಲ್ಲಿ  ಅದರ ಮುಂದಿನ ತನಿಖೆ ಎಂಬಂತೆ ಹೊಸದುರ್ಗ ಸಬ್ ಆರ್‌ಟಿಒ ಕಚೇರಿಯ  ಮೋಟಾರು ವೆಹಿಕಲ್ ಇನ್‌ಸ್ಪೆಕ್ಟರ್ ಕೆ.ವಿ. ಜಯನ್, ಅಸಿ ಸ್ಟೆಂಟ್ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್‌ಗಳಾದ ಶಾಜಿಲ್ ಕೆ. ರಾಜ್,  ಎಂ.ಜೆ. ಸುಧೀಶ್ ಮತ್ತು ವಿ.ಜೆ. ಶಾಜು ಎಂಬವರ ವಿರುದ್ಧ ಈ ತನಿಖೆ ಆರಂಭಿಸಲಾಗಿದೆ. ಈ ಪೈಕಿ ಶಾಜಿಲ್ ಕೆ ರಾಜ್ ಸರಕಾರಿ …

ವಾಷಿಂಗ್ ಮೆಶಿನ್‌ನಿಂದ ಬೆಂಕಿ ಎದ್ದು ಮನೆಗೆ ಭಾರೀ ನಷ್ಟ

ಕಾಸರಗೋಡು: ವಾಷಿಂಗ್ ಮೆಶಿನ್‌ನಿಂದ ಬೆಂಕಿ ಎದ್ದು ಮನೆಗೆ ಅಪಾರ ನಷ್ಟವುಂಟಾದ ಘಟನೆ ನಡೆದಿದೆ.  ಪೆರುಂಬಳ ಸಮೀಪದ ಕಕ್ಕಡಂ-ಬೇನೂರು ರಸ್ತೆ ಬಳಿ ನಿವಾಸಿ ಬೆಳ್ಳೂರು ಪಂಚಾಯತ್ ಸಿಬ್ಬಂದಿ ಅಬ್ದುಲ್ ವಾಜಿದ್ ಎಂಬವರ ಮನೆಯಲ್ಲಿ ಈ ಅನಾಹುತ ಸಂಭವಿಸಿದೆ. ಅಬ್ದುಲ್ ವಾಜೀದ್‌ರ ಪತ್ನಿ ಶಬಾನಾ ಮನೆಯ ವಾಷಿಂಗ್ ಮೆಶಿನ್‌ನಲ್ಲಿ  ಬಟ್ಟೆ ಹಾಕಿದ ಬಳಿಕ ಮನೆಯ ಕೆಳ ಅಂತಸ್ತಿನಲ್ಲಿರುವ ಅಡುಗೆ ಕೊಠಡಿಯಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಪ್ಲಾಸ್ಟಿಕ್ ಉರಿಯುವ ವಾಸನೆ ಉಂಟಾದಾಗ ಅದರಿಂದ ಸಂಶಯಗೊಂಡು ಅವರು ವಾಷಿಂಗ್ ಮೆಶಿನ್ …

ಹಿರಿಯ ಖಾಸಗಿ ಬಸ್ ನಿರ್ವಾಹಕ ನಿಧನ

ಮುಳ್ಳೇರಿಯ: ಖಾಸಗಿ ಬಸ್‌ನ ಹಿರಿಯ ನಿರ್ವಾಹಕನಾಗಿದ್ದ ಮುಳ್ಳೇರಿಯ ನಿವಾಸಿ ಶೇಖ್ ಎಂ.ಎಸ್. ಆದಂ (75) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹಿರಿಯ ಸಿಪಿಎಂ ಕಾರ್ಯಕರ್ತನಾಗಿದ್ದಾರೆ. ಮೃತರು ಪತ್ನಿ ರಸಿಯಬಾನು, ಮಕ್ಕಳಾದ ಶಮೀರ್, ರಶೀದ್, ಫೌಸಿಯಾಬಾನು, ನಿಲೋಫರ್, ಅಳಿಯ- ಸೊಸೆಯಂದಿರಾದ ಮೈನಾಸ್, ಶಿಬಾ, ಖಲೀಲ್, ಮಜೀದ್, ಸಹೋದರಿ ಶಕೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಬಳೆ ಸಿಎಚ್‌ಸಿ ರಸ್ತೆಯಿಂದ ಗಾಂಜಾ ಸಹಿತ ಯುವಕ ಸೆರೆ

ಕುಂಬಳೆ: ಇಲ್ಲಿನ ಸಿಎಚ್‌ಸಿ ರಸ್ತೆಯಲ್ಲಿ ಗಾಂಜಾ ಸಹಿತ ಯುವಕ ಸೆರೆಯಾಗಿದ್ದಾನೆ. ಕೊಪಾಡಿ ನಿವಾಸಿ ಸಿ.ಕೆ. ಚೇತನ್ (26)ನನ್ನು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದೆ. ವಿದ್ಯಾರ್ಥಿಗಳು ಸಹಿತದವರಿಗೆ ಗಾಂಜಾ ವಿತರಿಸುವ ವ್ಯಕ್ತಿಯಾಗಿದ್ದಾನೆ ಸೆರೆಯಾದವ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿವೆಂಟಿವ್ ಆಫೀಸರ್ ಕೆ.ವಿ. ಮನಾಸ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಇ. ರಾಹುಲ್, ಪ್ರವೀಣ್ ಕುಮಾರ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಎಂ.ವಿ. ಕೃಷ್ಣಪ್ರಿಯ ದಾಳಿಯಲ್ಲಿ …

ಭಾರತದ ವಿರುದ್ದ ಟ್ರಂಪ್ ತೆರಿಗೆ ಆನೆಗೆ ಇಲಿ ಹೊಡೆದಂತೆ-ಅಮೆರಿಕ ತಜ್ಞರು

ಹೊಸದಿಲ್ಲಿ: ಪ್ರಪಂಚದ ಅತ್ಯಂತ ಬಲಿಷ್ಠ ಆರ್ಥಿಕತೆಯಲ್ಲಿ ಒಂದಾಗಿರುವ ಭಾರತದ ಮೇಲೆ  ತೆರಿಗೆಯುದ್ಧಕ್ಕಿಳಿದಿ ರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿ ವಿರುದ್ಧ ಅಮೆರಿಕದ ಆರ್ಥಿಕ ತಜ್ಞರೇ ಈಗ ರಂಗಕ್ಕಿಳಿದಿ ದ್ದಾರೆ. ಭಾರತದ ವಿರುದ್ಧ ಅಮೆರಿಕ ಸಾರಿರುವ ಆರ್ಥಿಕ ಸಮರ ಆನೆಯ ಮೇಲೆ ಇಲಿ ಹೊಡೆದಂತಾಗಲಿದೆ. ತೆರಿಗೆ ಸಮರ ಮೂಲಕ  ತನ್ನ ಕಾಲಿಗೆ ತಾನೇ ಗುಂಡು ಹೊಡೆದಂತೆ ಎಂದು ಅಮೆರಿಕದ ಖ್ಯಾತ ಆರ್ಥಿಕ ತಜ್ಞ ರಿಚಾರ್ಜ್ ಊಲ್ಫ್ ಹೇಳಿದ್ದಾರೆ. ವಿಶ್ವಸಂಸ್ಥೆ ಲೆಕ್ಕಾಚಾರ ಪ್ರಕಾರ ಭಾರತ ಭೂಮಿಯ ಮೇಲೆ ಅತೀ …

ಮಾಹಿ ನಿರ್ಮಿತ ಮದ್ಯದೊಂದಿಗೆ ಕರ್ನಾಟಕದ ಮೂವರ ಸೆರೆ

ಕಾಸರಗೋಡು: ಮಾಹಿ ನಿರ್ಮಿತ ಮದ್ಯದೊಂದಿಗೆ ಮೂವರನ್ನು ಕಾರು ಸಹಿತ ಪೊಲೀಸರು ಬಂಧಿಸಿದ್ದಾರೆ.  25 ಲೀಟರ್ ಮಾಹಿ ಮದ್ಯವನ್ನು  ವಶಪಡಿಸಲಾಗಿದೆ. ಕರ್ನಾಟಕ ಮಡ್ಯ ನಿವಾಸಿಗಳದ ನವೀನ್ (31),ಸುರೇಶ್ (30) ಮತ್ತು ಜಯಕುಮಾರ್ (25) ಎಂಬವರು ಬಂಧಿತರಾದವರು.  ಚಿತ್ತಾರಿಕ್ಕಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ರಂಜಿತ್ ರವೀಂದ್ರನ್ ಮತ್ತು ಎಎಸ್‌ಐ ಸುನಿಲ್ ಅಬ್ರಹಾಂ ನೇತೃತ್ವದ ಪೊಲೀಸರ ತಂಡ ನಿನ್ನೆ ಕುನ್ನಂಗೈಯಿಂದ ಮಾಲು ಸಹಿತ ಬಂಧಿಸಿದೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಓಣಂ ಔತಣ ಸುಡಲಿದೆ: ಹೆಚ್ಚುತ್ತಿರುವ ತರಕಾರಿ ಬೆಲೆ

ಕಾಸರಗೋಡು: ಓಣಂ ಹಬ್ಬ ಸನಿಹದಲ್ಲಿರುವಂತೆ ತರಕಾರಿಗಳ ಬೆಲೆ ಗಗನದತ್ತ ಮುಖ ಮಾಡಿದೆ. ಲಿಂಬೆಹುಳಿ ಹೊರತುಪಡಿಸಿ ಇತರ ಎಲ್ಲಾ ತರಕಾರಿ ಸಾಮಗ್ರಿಗಳಿಗೆ ಬೆಲೆ 100ರ ಗಡಿ ದಾಟದಿದ್ದರೂ ದಿನ ದಿಂದ ದಿನಕ್ಕೆ ದರ ಹೆಚ್ಚಳವುಂಟಾಗು ತ್ತಿರುವುದು ಓಣಂ ಔತಣದ ಬಗ್ಗೆ ಕುಟುಂ ಬಗಳಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಓಣಂ ಹಬ್ಬದ ಸಮಯವಾಗುವಾಗ ವ್ಯಾಪಾರಿಗಳು ತರಕಾರಿ ಬೆಲೆ ಹೆಚ್ಚಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಜನರು ನುಡಿಯುತ್ತಾರೆ. ಆದರೆ ಮಾರುಕಟ್ಟೆ ಅನುಸಾರವಾಗಿ ಬೆಲೆ ಹೆಚ್ಚಳವಾಗುತ್ತಿರುವುದಾಗಿ ವ್ಯಾಪಾರಿಗಳು ತಿಳಿಸುತ್ತಾರೆ. ತಮಿಳು ನಾಡಿನಿಂದ ಪ್ರಧಾನವಾಗಿ ಕಾಸg ಗೋಡು …

ಖಾಝಿ ಸಿ.ಎಂ. ಅಬ್ದುಲ್ಲ ಮೌಲವಿ ನಿಗೂಢ ಸಾವು: ತನಿಖೆ ಕಣ್ಣೂರು ರೇಂಜ್ ಡಿಐಜಿಗೆ

ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಖಾಝಿ ಸಿ.ಎಂ. ಅಬ್ದುಲ್ಲ ಮೌಲವಿಯವರ ೧೫ ವರ್ಷ ಹಳೆಯದಾಗಿರುವ ನಿಗೂಢ ಮರಣಕ್ಕೆ ಸಂಬಂಧಿಸಿ ತನಿಖೆ ಇನ್ನು ಕಣ್ಣೂರು ರೇಂಜ್ ಡಿಐಜಿಯವರ ಮೇಲ್ನೋಟದಲ್ಲಿ ನಡೆಯಲಿದೆ. ನಿಗೂಢ ಸನ್ನಿವೇಶದಲ್ಲಿ ಅಬ್ದುಲ್ಲ ಮೌಲವಿಯವರ ಮರಣದಲ್ಲಿ ಕೊಲೆ ಕೃತ್ಯ ಸಾಧ್ಯತೆ ಇದೆ ಎಂದು ಸೂಚಿಸಿ ಖಾಝಿ ಆಕ್ಷನ್ ಸಮಿತಿ ಉಪಾಧ್ಯಕ್ಷ ಉಬೈಲುಲ್ಲ ಕಡವತ್, ಚೆಂಬರಿಕ ಜುಮಾ ಮಸೀದಿ ಸಮಿತಿ ಸದಸ್ಯ ಸರ್ದಾರ್ ಮುಸ್ತಫ ಎಂಬಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ನೀಡಿದ ಮನವಿ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. …