ಹೃದಯಾಘಾತದಿಂದ ನಿಧನ

ಮಂಜೇಶ್ವರ: ಸುಂಕದಕಟ್ಟೆ ಸಮೀಪದ ನೀರಳಿಕೆ ನಿವಾಸಿ ಚಿದಾನಂದ ಭಟ್ (65) ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದರು.  ಪುರೋಹಿತ ರಾಗಿದ್ದ ಇವರು ಕೈರಂಗಳ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದರು. ಮೃತರು ಪತ್ನಿ ಪುಷ್ಪಲತಾ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಪ್ ಬಳಗ, ಕಾಸರಗೋಡಿನ ಕನ್ನಡಿಗರು ವಾಟ್ಸಪ್ ಬಳಗ ಸಂತಾಪ ಸೂಚಿಸಿದೆ.

ಪ್ರತಾಪನಗರ ಶ್ರೀ ಗಣೇಶೋತ್ಸವಕ್ಕೆ ಸಂಭ್ರಮದ ಸಮಾಪ್ತಿ

ಉಪ್ಪಳ: ಪ್ರತಾಪನಗರದ ಶಿವಶಕ್ತಿ ಮೈದಾನದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ 42ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ನಿನ್ನೆ ಸಮಾಪ್ತಿ ಗೊಂಡಿತು. ಕಳೆದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂಜಿಸಿದ ಗಣಪತಿಯ ಶೋಭಾಯಾತ್ರೆ ನಿನ್ನೆ ಸಂಜೆ ಉತ್ಸವಾಂಗಣದಿಂದ ಹೊರಟು ಸೋಂಕಾಲು, ಕೈಕಂಬ, ಐಲ ಮಹಾದ್ವಾರ, ಪಾರಕಟ್ಟೆ ದಾರಿಯಾಗಿ ಐಲ ಶಿವಾಜಿನಗರದ ಸಿಂಧೂ ಮಹಾಸಾಗರದಲ್ಲಿ ವಿಗ್ರಹ ಜಲ ಸ್ತಂಭನ ನಡೆಯಿತು. ಸ್ತಬ್ದ ಚಿತ್ರ, ಕುಣಿತ ಭಜನೆ ಮೊದಲಾದ ಸಾಂಸ್ಕೃತಿಕ ವೈಭವಗಳು …

ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕ ಗಣೇಶೋತ್ಸವ

ಮೀಂಜ :ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ ಕ್ಲಬ್ ತಿಲಕ್ ನಗರ ಎಲಿಯಾಣ ಇದರ ವತಿಯಿಂದ 4ನೇ ವರ್ಷದ ಶ್ರೀ ಗಣೇಶೋತ್ಸವ ಜರಗಿತು. ಬೆಳಗ್ಗೆ ಗಣಪತಿ ಪ್ರತಿಷ್ಠೆ ಗಣಪತಿ ಹವನ ಶ್ರೀ ಶಾಸ್ತ ಭಜನಾ ಮಂದಿರ ಚಿನಾಲದ ವತಿಯಿಂದ ಭಜನಾ ಸೇವೆ ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉತ್ತಮ ಕೃಷಿ ಕಾರ್ಮಿಕರಿಗೆ ನೀಡುವ ಈ ವರ್ಷದ ‘ ಸ್ಪಂದನ ಗ್ರಾಮೀಣ ಪ್ರಶಸ್ತಿ’ಯನ್ನು ಕುಂಞÂ ಪೂಜಾರಿ ಹಾಗೂ ಭಾಗಿ ದಂಪತಿಗೆ ನೀಡಲಾಯಿತು.ನಂತರ ಗ್ರಾಮದ …

ತಲಪಾಡಿ ಅಪಘಾತ: ಶಾಸಕ ಎಕೆಎಂ ಅಶ್ರಫ್ ಸಂತಾಪ

ತಲಪಾಡಿ: ತಲಪಾಡಿಯಲ್ಲಿ ಸಂಭವಿಸಿದ ವಾಹನ ಅಪಘಾತ ಅತ್ಯಂತ ದುಃಖಕರವಾಗಿದೆ ಎಂದು ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದಾಗಿ ಶಾಸಕ ಎಕೆಎಂ ಅಶ್ರಫ್ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಪೂರ್ತಿಯಾಗುವುದರೊಂದಿಗೆ ದುರಂತಗಳು ಹೆಚ್ಚುತ್ತಿದೆ. ಅಪರಿಮಿತ ವೇಗ ಹಾಗೂ ಭಾರೀ ಮಳೆ ಅಪಘಾ ತಗಳಿಗೆ ಕಾರಣವಾಗುತ್ತಿದ್ದು, ಸರ್ವೀಸ್ ರಸ್ತೆಯನ್ನು ಮಾತ್ರ ಉಪಯೋಗಿ ಸಬೇಕಾದ ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಲವೊಮ್ಮೆ ಪ್ರಧಾನ ರಸ್ತೆಯ ಮೂಲಕ ಸಂಚರಿಸುತ್ತಿರುವುದು, ಸರ್ವೀಸ್ ರಸ್ತೆ, ಪ್ರಧಾನರಸ್ತೆಗಳಲ್ಲಿ ಸ್ಪರ್ಧಾತ್ಮಕ ಓಟದ ಮಧ್ಯೆ ಕೆಲವು ಚಾಲಕರು ಹೆಡ್‌ಸೆಟ್ ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಈ …

ಕೇಂದ್ರ ಹಿಂದಿ ಸಲಹಾ ಸಮಿತಿ ಸದಸ್ಯರಾಗಿ ಸವಿತಾ ಟೀಚರ್ ನೇಮಕ

ಕಾಸರಗೋಡು: ಬಿಜೆಪಿಯ ಹಿರಿಯ ನಾಯಕಿ ಹಾಗೂ ಕಾಸರಗೋಡು ನಗರಸಭಾ ಕೌನ್ಸಿಲರ್ ಸವಿತಾ ಟೀಚರ್‌ರನ್ನು ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ  ತಂತ್ರಜ್ಞಾನ ಸಚಿವಾಲಯದ ಹಿಂದಿ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಇದಕ್ಕಾಗಿ ಸವಿತಾ ಟೀಚರ್‌ಗೆ ಎಲ್ಲೆಡೆಗಳಿಂದ ಅಭಿನಂದನೆಗಳ ಮಹಾಪೂರಗಳೇ ಹರಿದುಬರತೊಡಗಿವೆ.

ಜಿಲ್ಲೆಯಲ್ಲಿ ತೀವ್ರ ಮಳೆ: ಬೇವಿಂಜೆ, ವೀರಮಲಕುನ್ನ್ ಮೂಲಕ ಹೆದ್ದಾರಿಯಲ್ಲಿ ವಾಹನಗಳಿಗೆ ನಿಷೇಧ

ಕಾಸರಗೋಡು: ಜಿಲ್ಲೆಯಲ್ಲಿ ತೀವ್ರ ರೀತಿಯಲ್ಲಿ ಮಳೆ ಮುಂದುವರಿ ಯುತ್ತಿರುವ ಸನ್ನಿವೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಪ್ರದೇಶಗಳಲ್ಲಿ ಗುಡ್ಡೆ ಕುಸಿತ ಭೀತಿ ಎದುರಾಗಿರುವ ರಸ್ತೆಗಳಲ್ಲಿ ಸಂಚಾರ ನಿಷೇಧ ಹೇರಲಾಗಿದೆ. ವೀರಮಲಕುನ್ನ್, ಬೇವಿಂಜೆ ಪ್ರದೇಶಗಳ ಮೂಲಕ ಪ್ಯಾಸೆಂಜರ್ ವಾಹನಗಳಿಗೆ  ಸಂಚಾರ ಇನ್ನೊಂದು ಸೂಚನೆ ನೀಡುವವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದೊಡ್ಡ ವಾಹನಗಳು, ಆಂಬುಲೆನ್ಸ್, ಫಯರ್ ಟ್ರಕ್ ಮೊದಲಾದ ತುರ್ತು ವಾಹನಗಳಿಗೆ ಮಾತ್ರವೇ ಈ ದಾರಿಯಾಗಿ ಸಂಚರಿಸಲು ಅನುಮತಿ ನೀಡುವುದಾಗಿ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರದ ಅಧ್ಯಕ್ಷನಾಗಿರುವ ಜಿಲ್ಲಾಧಿಕಾರಿ …

ಪುತ್ರ ವಿದೇಶದಿಂದ ತಲುಪುವ ಗಂಟೆಗಳ ಮೊದಲು ತಂದೆ, ತಾಯಿಯರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಇಲ್ಲಿಗೆ ಸಮೀಪದ ಅಲವಿಲಿಲ್ ಎಂಬಲ್ಲಿ ದಂಪತಿ ಬೆಂಕಿ ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಲ್ಲಾಳತ್ತಿಲ್ ಪ್ರೇಮರಾಜನ್, ಎ.ಕೆ. ಶ್ರೀಲೇಖ ಎಂಬಿವರು ಮೃತಪಟ್ಟವರು. ಸಚಿವ ಎ.ಕೆ. ಶಶೀಂದ್ರನ್‌ರ ಸಹೋದರಿಯಾಗಿದ್ದಾರೆ ಇವರು. ಮನೆಯ ಮಲಗುವ ಕೊಠಡಿಯಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಘಟನೆ ತಿಳಿದು ಬಂದಿದೆ. ಚಾಲಕ ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪುತ್ರ ವಿದೇಶದಿಂದ ತಲುಪುವುದಕ್ಕೆ ಗಂಟೆಗಳ ಮುಂಚಿತ ಇವರಿಬ್ಬರ ಮೃತದೇಹ …

ಕೋ-ಓಪರೇಟಿವ್ ಎಂಪ್ಲೋಯೀಸ್ ಯೂನಿಯನ್ ಜಿಲ್ಲಾ ಸಮ್ಮೇಳನ ನಾಳೆಯಿಂದ

ಕಾಸರಗೋಡು: ಕೇರಳ ಕೋ-ಆಪರೇಟಿವ್ ಎಂಪ್ಲೋಯೀಸ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮ್ಮೇಳನ ನಾಳೆ ಹಾಗೂ ಆದಿತ್ಯವಾರ ಮುನ್ನಾಡ್‌ನಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಸಿಐಟಿಯು ರಾಜ್ಯ ಸಮಿತಿ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿ ಸುವರು. ಇದರಂಗವಾಗಿ ನಡೆಯುವ ಸಹಕಾರಿ ಸಮ್ಮೇಳನವನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸುವರು. ಸೇವೆಯಿಂದ ನಿವೃತ್ತರಾದವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಸಹಕಾರಿ ಠೇವಣಿ ಗ್ಯಾರಂಟಿ ಫಂಡ್ ಬೋರ್ಡ್ ಉಪಾಧ್ಯಕ್ಷ ಕೆ.ಪಿ. ಸತೀಶ್ಚಂದ್ರನ್ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸುವರು.  ಸಹಕಾರಿ ವಲಯವನ್ನು ನಾಶಪಡಿಸಲಿರುವ ಕೇಂದ್ರ ಸರಕಾರದ ನೀತಿ ವಿರುದ್ಧ …

ಗುತ್ತಿಗೆದಾರನ ಮನೆ ಕಳವಿಗೆತ್ನ: ಕುಖ್ಯಾತ ಆರೋಪಿ ಸೆರೆ

ಕಾಸರಗೋಡು: ಕುಖ್ಯಾತ ಕಳವು ಆರೋಪಿಯನ್ನು ಗುತ್ತಿಗೆದಾರನ ಮನೆ ಕಳವು ಯತ್ನ ವೇಳೆ ಸೆರೆ ಹಿಡಿಯ ಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಖಾಯಂ ವಾಸಿಸುವ ಮೂವಾಟುಪುಳ ನಿವಾಸಿ ನೌಫಲ್ ಎಂಬಾತನನ್ನು ಇಂದು ಮುಂಜಾನೆ ನರಿಮಾಳದಲ್ಲಿ  ಸೆರೆಹಿಡಿಯಲಾಗಿದೆ.  ನೀಲೇಶ್ವರ ಚಾಯೋಂನ ನರಿಮಾಳ ಎಂಬಲ್ಲಿನ ಗುತ್ತಿಗೆದಾರ ಸುರೇಶ್ ಪೆರಿಂಗುಳ ಎಂಬವರ ಮನೆಯಲ್ಲಿ ಕಳವಿಗೆತ್ನಿಸಿದ ವೇಳೆ ಈತನನ್ನು ಬಂಧಿಸಲಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಶಬ್ದ ಕೇಳಿ ಮನೆಯವರು ಎಚ್ಚೆತ್ತಾಗ ವ್ಯಕ್ತಿಯೋರ್ವ ಕಳವಿಗೆತ್ನಿಸಿ ಕಳ್ಳ ಪರಾರಿ ಯಾಗಿರುವುದು ಕಂಡು ಬಂದಿದೆ. ಮನೆಯ ಹಿಂಬದಿಯ …

ಒಂದೇ ಕುಟುಂಬದ ಮೂರು ಮಂದಿ ಆಸಿಡ್ ಸೇವಿಸಿ ಸಾವು: ಒಬ್ಬನ ಸ್ಥಿತಿ ಗಂಭೀರ

ಕಾಸರಗೋಡು: ಒಂದೇ ಕುಟುಂಬದ ಮೂರು ಮಂದಿ ಆಸಿಡ್ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಬ್ಬರ ಸ್ಥಿತಿ ಅತೀ ಗಂಭೀರವಾಗಿದೆ ಎಂದು ಮಾಹಿತಿಯಿದೆ. ಅಂಬಲತ್ತರ ಪರಕ್ಕಳಾಯಿ ಒಂಡಂಪುಳಿಕ್ಕಾಲ್ ನಿವಾಸಿ ಗೋಪಿ (60), ಪತ್ನಿ ಇಂದಿರ (57), ಪುತ್ರ ರಾಜೇಶ್ (22) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಇನ್ನೋರ್ವ ಪುತ್ರ ರಾಕೇಶ್‌ನನ್ನು ಗಂಭೀರ ಸ್ಥಿತಿಯಲ್ಲಿ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 4 ಗಂಟೆ ವೇಳೆಗೆ ಈ …