ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವು: ಗಲ್ಫ್‌ಗೆ ಪರಾರಿಯಾದ ಆರೋಪಿ ಕಣ್ಣೂರಿನಿಂದ ಸೆರೆ
ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವುಗೈದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಯುವಕನನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ಸೆರೆ ಹಿಡಿಯಲಾಗಿದೆ. ಮೇಲ್ಪರಂಬ ನಿವಾಸಿ ರಿಸ್ವಾನ್ (23) ಎಂಬಾತ ಬಂಧಿತ ಆರೋಪಿಯಾಗಿ ದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜುಲೈ 13ರಂದು ಕುಂಬಳೆ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ರಿಸ್ವಾನ್ ಹಾಗೂ ಕುಂಬಳೆ ನೀರೋಳಿಯ ರುಮೈಸ್ ಎಂಬವರು ಪೆಟ್ರೋಲ್ ಕಳವುಗೈದಿದ್ದರು. ಕಳವುಗೈಯ್ಯುತ್ತಿರು ವುದನ್ನು ತಿಳಿದ ವಾಹನ ಪಾರ್ಕಿಂಗ್ ಸ್ಥಳದ ಕಾವಲುಗಾರ ಪೊಲೀಸರಿಗೆ ಮಾಹಿತಿ …