ಸಯ್ಯದ್ ಎಪಿಎಸ್ ಆಟಕೋಯ ತಂಙಳ್ ನಿಧನ

ಕುಂಬಳೆ: ಕುಂಬೋಲ್ ಸಯ್ಯದ್ ಕುಂಞಿಕೋಯ ತಂಙಳ್‌ರ ಸಹೋದರಿ ಪುತ್ರಿಯ ಪತಿ ಸಯ್ಯದ್ ಎಪಿಎಸ್ ಆಟಕೋಯ ತಂಙಳ್ (65) ನಿಧನಹೊಂದಿದರು. ಆದೂರು ಸಯ್ಯದ್ ಮುತ್ತುಕೋಯ ತಂಙಳ್‌ರಪುತ್ರನಾದ ಮೃತರು ಪತ್ನಿ ಖದೀಜಬೀವಿ, ಮಕ್ಕಳಾದ  ರೈಹಾ ನತ್ ಬೀವಿ, ಬುಸ್ರಾ ಬೀವಿ,ಸಯ್ಯದ್ ಅಶ್ರಫ್ ತಂಙಳ್, ಸಾಜಿದ ಬೀವಿ, ಅಳಿಯಂದಿರಾದ ಸಯ್ಯದ್ ಜಲೀಲ್ ತಂಙಳ್ ಕಾರೆಕ್ಕಾಡ್, ಸಯ್ಯದ್ ಜಾಫರ್ ಶಿಹಾಬ್ ತಂಙಳ್ ಕಾಞಂಗಾಡ್, ರವುಲ್ಲಾಬೀವಿ ವಳಪಟ್ಟಣಂ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

ಜನರಲ್ ಆಸ್ಪತ್ರೆ ಅವಗಣನೆ: ಡಿಫಿಯಿಂದ ನಗರಸಭೆಗೆ ಮಾರ್ಚ್

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯನ್ನು ನಗರಸಭೆ ಅವಗಣಿಸುತ್ತಿದೆ ಎಂದು ಆರೋಪಿಸಿ, ಜನರಲ್ ಆಸ್ಪತ್ರೆಯ ರೋಗಿಗಳಿಗೆ ನೀಡುತ್ತಿದ್ದ ಹಾಲು ವಿತರಣೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಕಾಸರಗೋಡು ಬ್ಲೋಕ್ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮಾರ್ಚ್ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಡ್ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ವಿ. ಮಿಥುನ್‌ರಾಜ್ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಪ್ರವೀಣ್ ಪಾಡಿ, ಅಜಿತ್ ಪಾರೆಕಟ್ಟೆ, ವಿನಯನ್ ಚಾತಪ್ಪಾಡಿ, ಸಬೀನ್ ಬಟ್ಟಂಪಾರೆ, ಮಾರ್ಟಿನ್ ಇ., ಅಶ್ವತಿ ಮಾತನಾಡಿ ದರು. ಬ್ಲೋಕ್ ಕಾರ್ಯದರ್ಶಿ ಸುಭಾಶ್ ಪಾಡಿ ಸ್ವಾಗತಿಸಿದರು.

ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ಪೆರ್ಣೆಯಲ್ಲಿ ನಾಳೆ

ಸೀತಾಂಗೋಳಿ: ಯಕ್ಷಗಾನದಲ್ಲಿ ಬಣ್ಣದ ವೇಷದಲ್ಲಿ 7 ದಶಕಗಳ ಕಾಲ ಮಿಂಚಿದ ಬಣ್ಣದ ಮಹಾಲಿಂಗ ಸಂಪಾಜೆ ಯವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ನಾಳೆ ಬೆಳಿಗ್ಗೆ 10ರಿಂದ ಪೆರ್ಣೆ ಶ್ರೀ ಸಾಯಿತನ್ವಿ ನಿವಾಸದಲ್ಲಿ ಜರಗಲಿದೆ. 10ಗಂಟೆಗೆ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಉದ್ಯಮಿ, ಪ್ರಾಯೋಜಕರಾದ ಶಿವಶಂಕರ ನೆಕ್ರಾಜೆ ದಂಪತಿ ಕಾರ್ಯಕ್ರಮ ಉದ್ಘಾಟಿಸು ವರು. ಯಕ್ಷಗಾನ ಕಲಾವಿದ ಜಯಾ ನಂದ ಸಂಪಾಜೆ ಸಂಸ್ಮರಣೆ ನಡೆಸುವರು. ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ, ಕರ್ನಾಟಕ ಯಕ್ಷಗಾನ ಅಕಾಡೆಮಿ …

ಐಎಚ್‌ಆರ್‌ಡಿ ಕುಂಬಳೆ: 4ನೇ ಬಾರಿ ಎಬಿವಿಪಿ ಗೆಲುವು

ಕುಂಬಳೆ: ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ಮಂಜೇಶ್ವರ, ಕುಂಬಳೆ ಐಎಚ್ ಆರ್‌ಡಿ ಕಾಲೇಜು ಯೂನಿಯನ್ ಚುನಾವಣೆಯಲ್ಲಿ ಎಬಿವಿಪಿಯ ಅಭ್ಯರ್ಥಿಗಳು ಸ್ಪರ್ಧಿಸಿದ 6 ಮೇಜರ್, 5 ಮೈನರ್ ಸೀಟಿನಲ್ಲಿ ವಿಜಯಿಸಿದ್ದು, ನಾಲ್ಕನೇ ಬಾರಿ ಯೂನಿಯನ್ ಪಡೆಯುವಲ್ಲಿ ಎಬಿವಿಪಿ ಸಫಲವಾಗಿದೆ. ಎಬಿವಿಪಿಯ ಯೂನಿಯನ್ ಅಧ್ಯಕ್ಷೆ ಸ್ಥಾನದಲ್ಲಿ ಸ್ಪರ್ಧಿಸಿದ ಮನೀಶಾ ಕೆ, ಉಪಾಧ್ಯಕ್ಷೆ ಸಂಚಿತ ಕೆ. ಎಸ್., ಸಹ ಕಾರ್ಯದರ್ಶಿ ಲೀಲಾ, ಯುಯುಸಿ ರಾಜೇಶ್, ಸ್ಪೋರ್ಟ್ಸ್ ಕ್ಯಾಪ್ಟನ್ ನಿಶಾಂತ್, ಮ್ಯಾಗಜಿನ್ ಎಡಿಟರ್ ಶರತ್ ಕುಮಾರ್ ವಿಜಯಿಸಿದ್ದು, ಎಸ್‌ಎಫ್‌ಐಗೆ ಎರಡು ಮೇಜರ್ ಸೀಟು …

ಪ್ರತಾಪನಗರ: ವಿಗ್ರಹ ಶೋಭಾಯಾತ್ರೆ ನಾಳೆ

ಮಂಗಲ್ಪಾಡಿ: ಪ್ರತಾಪನಗರದಲ್ಲಿ ನಡೆಯುತ್ತಿರುವ 42ನೇ ವರ್ಷದ ಶ್ರೀಗೌರಿ ಗಣೇಶೋತ್ಸವದ ಶೋಭಾಯಾತ್ರೆ ನಾಳೆ ನಡೆಯಲಿದೆ. ಬೆಳಿಗ್ಗೆ ಪೂಜೆ, 108 ಕಾಯಿಗಳ ಗಣಯಾಗ, ಭಜನೆ, ಅಶ್ವತ್ಥಪೂಜೆ, ಮಹಾಪೂಜೆ, ಮಧ್ಯಾಹ್ನ 1.30ರಿಂದ ಉತ್ತರ ಪೂಜೆ, ಸಮಾರೋಪ ಸಮಾರಂಭ, ಶೋಭಾಯಾತ್ರೆ ಆರಂಭ ಬಳಿಕ ಸಂಜೆ ಶಿವಾಜಿ ನಗರದ ಸಿಂಧೂ ಸಾಗರದಲ್ಲಿ ಜಲಸ್ತಂಭನೆ ನಡೆಯಲಿದೆ.

ಬೈಕ್‌ನಲ್ಲಿ ಮಾದಕದ್ರವ್ಯ ಸಾಗಾಟ: ಯುವಕ ಸೆರೆ

ಮಂಜೇಶ್ವರ: ಬೈಕ್‌ನಲ್ಲಿ ಮಾದಕದ್ರವ್ಯ ಸಾಗಿಸಿದ ಆರೋಪ ದಂತೆ ಅಬಕಾರಿ ತಂಡ ಓರ್ವನನ್ನು ಬಂಧಿಸಿದೆ. ಕುಂಜತ್ತೂರು ಪದವು ನಿವಾಸಿ ಯಾಸಿನ್ ಇಮ್ರಾಜ್ ಕೆ.ಎಂ. (36) ಬಂಧಿತ ಯುವಕ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶೋಬ್‌ರ ನೇತೃತ್ವದ ತಂಡ ಕುಂಜತ್ತೂರಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಮಾದಕದ್ರವ್ಯವಾದ 4 ಗ್ರಾಂ ಮೆಥಾಫಿಟಮಿನ್ ಸಾಗಿಸಿದ ಆರೋಪ ದಂತೆ ಯಾಸಿನ್ ಇಮ್ರಾಜ್‌ನನ್ನು ಸೆರೆ ಹಿಡಿದು ಆತನ ವಿರುದ್ಧ ಎನ್‌ಡಿಪಿಎಸ್ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ …

ತಿಮರೋಡಿ ನಿವಾಸಕ್ಕೆ ಚಿನ್ನಯ್ಯನನ್ನು ಕರೆದುಕೊಂಡು ಬಂದ ಎಸ್.ಐ.ಟಿ.: ಧರ್ಮಸ್ಥಳ ಪ್ರಕರಣದಲ್ಲಿ ಕುತೂಹಲ

ಉಜಿರೆ: ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಮತ್ತು ಶವಗಳನ್ನು ಹೂತಿರುವ ಆರೋಪ ಮಾಡಿ ಬಂಧನಕ್ಕೊಳಗಾಗಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳಿಗ್ಗೆ ಉಜಿರೆಯ ಹೋರಾಟಗಾರ ತಿಮರೋಡಿಯವರ ಮನೆಗೆ ಕರೆತಂದು ಪರಿಶೀಲನೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ತಿಮರೋಡಿಯವರ ಮನೆಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಉಜಿರೆ ಕಡೆಗೆ ಆಗಮಿಸಿದ ಎಸ್‌ಐಟಿ ಅಧಿಕಾರಿಗಳ ತಂಡ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಕರೆತಂದಿತ್ತು. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಅಧಿಕಾರಿಗಳು …

ಯುವತಿ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವು

ಕಾಸರಗೋಡು: ಯುವತಿ ಯೋರ್ವೆ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡ್ಲು ಮೀಪುಗುರಿ ನಿವಾಸಿ ಉದಯ ಎಂಬವರ ಪುತ್ರಿ ಸಜಿನಾ (18) ಮೃತಪಟ್ಟ ಯುವತಿಯಾಗಿದ್ದಾಳೆ. ನಿನ್ನೆ   ಈಕೆ ಮನೆಯಲ್ಲಿದ್ದಳು. ಕಾಸರಗೋ ಡಿನ ವ್ಯಾಪಾರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ತಾಯಿ ಸುಜಾತ ಸಂಜೆ ೬.೪೦ರ ವೇಳೆ ಮನೆಗೆ ಮರಳಿ ಬಂದಾಗ ಸಜಿನಾ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತಳು ತಂದೆ, ತಾಯಿ, ಸಹೋದರಿಯರಾದ ಉಷಾ, ನಿಷಾ, …

ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ ಅವಳಿ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ 9 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯ ಬೆಂಡೋಲೆಯನ್ನು ಕದ್ದ ಪ್ರಕರಣದ ಆರೋಪಿ ಮೂಲತಃ ಕರ್ನಾಟಕ ಕೊಡಗು ನಾಪೊಕ್ಲು ಪರಂಬೋಳಿ ಕುಂಜಿಲ ನಿವಾಸಿ ಹಾಗೂ  ಈಗ ಹೊಸದುರ್ಗ ಪೂಂಜಾವಿ ಬದ್ರಿಯಾ ಮಂಜಿಲ್‌ನಲ್ಲಿ ವಾಸಿಸುವ ಪಿ.ಎ. ಸಲೀಂ ಅಲಿಯಾಸ್ ಸಲ್ಮಾನ್(37)ಎಂಬಾತನಿಗೆ ಹೊಸದುರ್ಗ ವಿಶೇಷ ಕ್ಷಿಪ್ರ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್  ವಿವಿಧ ಸೆಕ್ಷನ್‌ಗಳ ಪ್ರಕಾರ ಅವಳಿ ಜೀವಾವಧಿ ಶಿಕ್ಷೆ , 2,71,000 ಜುಲ್ಮಾನೆ  ವಿಧಿಸಿ ತೀರ್ಪು …

ಮನೆಯೊಳಗೆ ಪ್ರಾಚ್ಯವಸ್ತು ಸಂಗ್ರಹ: ತಜ್ಞರಿಂದ ಪರಿಶೀಲನೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚುಗಡೆಗೊಳಿಸಿದ  ಮನೆ ಹಾಗೂ ಅಂಗಡಿಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳ ಕುರಿತು  ಪರಿಶೀಲನೆ ನಡೆಸಲು  ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ತಲುಪಿದ್ದಾರೆ.  ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ತೃಶೂರ್ ವಲಯ ಕಚೇರಿಯ ಪ್ರಾಚ್ಯ ವಸ್ತು ತಜ್ಞರಾದ ಮೂರು ಮಂದಿ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ.  ಶಟರ್ ಮುಚ್ಚಿದ ಅಂಗಡಿಯಿಂದ ಈ ಹಿಂದೆ ಪತ್ತೆಹಚ್ಚಿ ಬೇಕಲ  ಪೊಲೀಸ್ ಠಾಣೆಯಲ್ಲಿ ಭದ್ರವಾಗಿರಿಸಿದ ಖಡ್ಗಗಳು ಹಾಗೂ ಬಂದೂಕುಗಳನ್ನು ಮೊದಲು ಪರಿಶೀಲನೆ ನಡೆಸಲಾಯಿತು.  ಅನಂತರ ಮನೆ …