ಮನೆಯಲ್ಲಿ ಬಚ್ಚಿಡಲಾಗಿದ್ದ 2526 ಪ್ಯಾಕೆಟ್ ತಂಬಾಕು ಉತ್ಪನ್ನ ಪತ್ತೆ

ಕಾಸರಗೋಡು: ಮನೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 2526 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಗಳನ್ನು ವಿದ್ಯಾನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಮಧೂರು ಸಮೀಪದ ಕೋಟೆ ಕಣಿ ಕುಕ್ಕಂಬಾಡಿನ ಮನೆಯೊಂ ದರಿಂದ ಈ ಮಾಲು ಪತ್ತೆಹಚ್ಚಲಾ ಗಿದೆ. ವಿದ್ಯಾನಗರ ಎಸ್‌ಐ ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಪಟ್ಲ ತನ್ನಿಕೋಡ್ ಹೌಸ್‌ನ ಮೊಹಮ್ಮದ್ ಶೆರೀಫ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೀದಿನಾಯಿ ಹಾವಳಿಯಿಂದ ತತ್ತರಿಸಿದ ಜನತೆ: ಮಂಜೇಶ್ವರ ಪಂ.ಗೆ ಪ್ರತಿಭಟನಾ ಮಾರ್ಚ್

ಮಂಜೇಶ್ವರ: ಬೀದಿ ನಾಯಿಗಳ ದಾಳಿಯಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಜೇ ಶ್ವರದ ಜನತೆ ಗುರುವಾರ ಪಂಚಾ ಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಮಸ್ಯೆಯ ಬಗ್ಗೆ ವರ್ಷಗಳ ಹಿಂದೆಯೇ ಹಲವಾರು ಬಾರಿ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಇದ್ದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಪರಿಸರದಿಂದ ಆರಂಭವಾದ ಪ್ರತಿ ಭಟನಾ ಮೆರವಣಿಗೆ, ಘೋಷಣೆ ಗಳೊಂದಿಗೆ ಕಚೇರಿ ಕಡೆಗೆ ಸಾಗಿತು. ನಂತರ …

ಕೆಲಸದ ಮಧ್ಯೆ ಕುಸಿದು ಬಿದ್ದು ತಲೆಹೊರೆ ಕಾರ್ಮಿಕ ಮೃತ್ಯು

ಕಾಸರಗೋಡು: ನಗರದ ಎಸ್‌ಟಿಯು ಕಾರ್ಯಕರ್ತ, ತಲೆಹೊರೆ ಕಾರ್ಮಿಕ ಕೆಲಸದ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಕೇಳುಗುಡ್ಡೆ ಸೀದಿ ಕಂಪೌಂಡ್‌ನ ದಿ| ಸಿ.ಬಿ. ಅಬ್ದುಲ್ಲ- ಆಚಿಬಿ ದಂಪತಿ ಪುತ್ರ ಸಿ.ಎ. ಹನೀಫ್ (52) ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಕೆಲಸದ ಮಧ್ಯೆ ಇವರು ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ವೇರ್ ಹೌಸ್‌ನಲ್ಲಿ ತಲೆಹೊರೆ ಕಾರ್ಮಿಕನಾಗಿದ್ದರು. ಮೃತರು ಪತ್ನಿ ಮುಮ್ತಾಜ್, ಮಕ್ಕಳಾದ ಸೈಯ್ಯಾಫ್ (ದುಬೈ), ಸಿರಾ, ಸಾಜುವಾ, ಸಹೋದರರಾದ …

ಕೇರಳ ಸರಕಾರದ ಜನವಿರೋಧಿ ನೀತಿ ವಿರುದ್ಧ ಬಿಎಂಎಸ್ ಹೋರಾಟ

ಕುಂಬಳೆ: ಕೇರಳ ಸರಕಾರದ ಜನವಿರೋಧಿ ನೀತಿ ವಿರುದ್ಧ ಸೆ.17ರ ಕಾರ್ಮಿಕ ದಿನಾಚರಣೆಯನ್ನು ಬಿಎಂಎಸ್ ರಾಜ್ಯದಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದ್ದು, ಇದರಂತೆ ಕುಂಬಳೆ ವಲಯಸಮಿತಿ ಸಭೆ ಪಾದಯಾತ್ರೆ ಹೋರಾಟ ನಡೆಸಲು ತೀರ್ಮಾನಿಸಿದೆ. ಇಲ್ಲಿನ ಜಯಮಾರುತಿ ವ್ಯಾಯಾಮಶಾಲೆಯ ವಠಾರದಲ್ಲಿ ನಡೆದ ಸಭೆಯಲ್ಲಿ ವಲಯಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಕೆ. ಬಂಬ್ರಾಣ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಕುಂಬಳೆ ಬಿಎಂಎಸ್ ಪಂ. ಸಮಿತಿ ಅಧ್ಯಕ್ಷ ಶಿವಾನಂದ ರಾವ್, ಐತ್ತಪ್ಪ ನಾರಾಯಣಮಂಗಲ ಮಾತನಾಡಿದರು.

ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೆ.ಪಿ. ವಲ್ಸರಾಜ್ ಆಯ್ಕೆ

ಉಪ್ಪಳ: ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೆ.ಪಿ. ವಲ್ಸರಾಜ್ ಆಯ್ಕೆಯಾಗಿದ್ದಾರೆ. ಯುವಮೋರ್ಚ ಮಂಗಲ್ಪಾಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿಯಾಗಿ 1992 ರಲ್ಲಿ ಅಧಿಕಾರ ವಹಿಸಿದ್ದರು. ಬಳಿಕ ಯುವಮೋರ್ಚ ಮಂಗಲ್ಪಾಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ, ಮಂಜೇಶ್ವರ ಮಂಡಲ ಅಧ್ಯಕ್ಷ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಂಡಲ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ ಎಂಬೀ ಪದವಿಗಳನ್ನು ವಹಿಸಿದ್ದರು. ಪ್ರಸ್ತುತ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.

ಕೇರಳ ಶಾಲಾ ಒಲಿಂಪಿಕ್ಸ್: ಅತೀ ಹೆಚ್ಚು ಅಂಕ ಗಳಿಸುವ ಜಿಲ್ಲೆಗೆ ಚಿನ್ನದ ಕಪ್

ತಿರುವನಂತಪುರ: ಕೇರಳ ಶಾಲಾ ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಜಿಲ್ಲೆಗೆ ಈ ವರ್ಷದಿಂದ ಮುಖ್ಯಮಂತ್ರಿಯ ಚಿನ್ನದ ಕಪ್ ಬಹುಮಾನವಾಗಿ ನೀಡಲಾಗುವುದು. ಶಾಲಾ ಒಲಿಂಪಿಕ್ಸ್ ಸಂಘಾಟಕ ಸಮಿತಿ ರೂಪೀಕರಣ ಸಭೆಯನ್ನು ತಿರುವನಂ ತಪುರದಲ್ಲಿ ಉದ್ಘಾಟಿಸಿ ಶಿಕ್ಷಣ ಸಚಿವ ಶಿವನ್ ಕುಟ್ಟಿ ಈ ವಿಷಯ ತಿಳಿಸಿದ್ದಾರೆ. ರಾಜ್ಯ ಶಾಲಾ ಕ್ರೀಡಾಕೂಟ ಈ ವರ್ಷ ಅಕ್ಟೋಬರ್ 22ರಿಂದ 28ರ ವರೆಗೆ ತಿರುವನಂತಪುರದಲ್ಲಿ ನಡೆಯ ಲಿದೆ. ಕಳೆದ ವರ್ಷ ಕೊಚ್ಚಿಯಲ್ಲಿ ಒಲಿಂಪಿಕ್ಸ್ ಮಾದರಿಯಲ್ಲಿ ನಡೆದ ರಾಜ್ಯ ಶಾಲಾ ಕ್ರೀಡಾ ಕೂಟದಲ್ಲಿ  24,000 …

ಪೀರುಮೇಡ್ ಶಾಸಕ ಕುಸಿದು ಬಿದ್ದು ಮೃತ್ಯು

ತಿರುವನಂತಪುರ: ಪೀರುಮೇಡ್ ಶಾಸಕ ವಾಯೂ ರ್ ಸೋಮನ್ (72) ನಿಧನ ಹೊಂದಿದರು. ಟಿ.ಪಿ.ನಗರದಲ್ಲಿ ಕಂದಾಯ ಇಲಾಖೆಯ ಇಡುಕ್ಕಿ ಜಿಲ್ಲಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಹಿಂತಿರುಗುವ ಮಧ್ಯೆ ಇವರಿಗೆ ಹೃದಯಾಘಾತ ವುಂಟಾಗಿದೆ. ಬಳಿಕ ಕಂದಾಯ ಸಚಿವರ ವಾಹನದಲ್ಲಿ ಕೂಡಲೇ ಶಾಸ್ತಾಮಂಗಲದ ಆಸ್ಪತ್ರೆಗೆ ತಲುಪಿ ಸಲಾಗಿದೆ. ಇಡುಕ್ಕಿ ಪೀರುಮೇಡ್ ನಿಂದ ಆಯ್ಕೆಗೊಂಡ ಸಿಪಿಐ ಶಾಸಕ ರಾಗಿದ್ದಾರೆ ವಾಯೂರ್ ಸೋಮನ್. ವೇರ್‌ಹೌಸಿಂಗ್ ಕಾರ್ಪ ರೇಶನ್‌ನ ಅಧ್ಯಕ್ಷ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಮೊದಲಾದ ಹುದ್ದೆಗಳನ್ನು ವಹಿಸಿದ್ದರು. ಮೃತರು ಪತ್ನಿ ಬಿಂದು, ಮಕ್ಕಳಾದ ನ್ಯಾಯವಾದಿ …

ಅಡೂರಿನ ಡಾ. ಕೆ.ಎನ್. ಅಡಿಗರಿಗೆ ಪ್ರಶಸ್ತಿ ಪ್ರದಾನ

ಕಾಸರಗೋಡು: ಅಡೂರು ಕೋಟೆಗದ್ದೆಯ ಡಾ. ಕೆ.ಎನ್ ಅಡಿಗ ಅವರಿಗೆ ಈಚೆಗೆ ಬೆಂಗಳೂರಿನಲ್ಲಿ ಕರುನಾಡ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಹೈಡ್ ಪಾರ್ಕ್ ಅಪಾರ್ಟ್ ಸಭಾಂಗಣದಲ್ಲಿ ಚಿತ್ರ ಸಂತೆ ತಂಡವು ಆಯೋಜಿಸಿದ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು, ಖ್ಯಾತ ಸಂಗೀತ ನಿರ್ದೇಶಕ ಕೆ ಎನ್ ರಮೇಶ್, ಚಲನಚಿತ್ರ ನಟಿ ಭೂಮಿಕಾ ಎ. ಕೆ, ಚಲನಚಿತ್ರ ನಿರ್ದೇಶಕ ಅಲ್ಲೂರಿ ಸೀತಾರಾಮ …

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ ನಾಳೆ ಬೆಳಗ್ಗೆ 10 ಗಂಟೆಗೆ ಬೀರಂತ ಬೈಲಿನಲ್ಲಿರುವ ‘ಕನ್ನಡ ಅಧ್ಯಾಪಕ ಭವನ’ದಲ್ಲಿ ನಡೆಯುವುದು. ಜಿಲ್ಲಾ ವಿದ್ಯಾಧಿಕಾರಿ ಸವಿತ ಪಿ. ಉದ್ಘಾಟಿಸುವರು. ಕಾಸರಗೋಡು ಉಪ ಜಿಲ್ಲಾ ಅಧ್ಯಕ್ಷೆ ಯಶೋದ ಕೆ.ಎ. ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್, ಬೇಕಲ ಜಿಎಫ್ ಶಾಲೆಯ ಪ್ರಾಂಶುಪಾಲ ಅರವಿಂದ.ಕೆ, ಕಾಸರಗೋಡು ಉಪ ಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬರ್ನಾಡ್, ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ …

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಿಂದ ರಕ್ತದಾನ ಅಭಿಯಾನ 24ರಂದು

ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಭಾರತಾಂಬಾ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ಬ್ಲಡ್‌ಬ್ಯಾಂಕ್‌ನ ಸಹಯೋಗದೊಂದಿಗೆ ರಾಜಯೋಗಿನಿ ದಾದಿ ಪ್ರಕಾಶಮಣಿಜಿ ಅವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನದಂಗವಾಗಿ ಬೃಹತ್ ರಕ್ತದಾನ ಅಭಿಯಾನ ಈ ತಿಂಗಳ 24ರಂದು ಬೆಳಿಗ್ಗೆ 9ರಿಂದ ನಡೆಯಲಿದೆ. ಅಣಂಗೂರು ಭಾರತಾಂಬಾ ಸೇವಾ ಪ್ರತಿಷ್ಠಾನ ಕಾರ್ಯಾಲಯದಲ್ಲಿ ಜರಗುವ ರಕ್ತದಾನ ಅಭಿಯಾನದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಸಹಕರಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.