ಚೆಂಗಳ ಪಂ. ಕೃಷಿಕರ ದಿನಾಚರಣೆ ಪ್ರಹಸನ- ಬಿಜೆಪಿ ಆರೋಪ
ಚೆರ್ಕಳ: ಚೆಂಗಳ ಪಂಚಾಯತ್‌ನ ಕೃಷಿಕರ ದಿನಾಚರಣೆ ಆಡಳಿತ ಪಕ್ಷದ ಕಾರ್ಯಕ್ರಮವಾಗಿ ಬದಲಾಗಿದೆ ಎಂದು ಪಂಚಾಯತ್ ಬಿಜೆಪಿ ಅಧ್ಯಕ್ಷ ಪ್ರಭಾಕರ ಎಡನೀರು ಆರೋಪಿಸಿದ್ದಾರೆ. ಕೃಷಿಕರ ದಿನಾಚರಣೆ ಪಂಚಾಯತ್ ನೇತೃತ್ವದಲ್ಲಿ ನಡೆಯಬೇಕಾಗಿದ್ದು, ಆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರನ್ನು ಆಹ್ವಾನಿಸಬೇಕಾಗಿತ್ತು. ಆದರೆ ಬಿಜೆಪಿ ಪ್ರತಿನಿಧಿಗಳಿಗೆ ಯಾವುದೇ ಆಹ್ವಾನ ನೀಡಿಲ್ಲ. ಪಂಚಾಯತ್‌ನ ಆಡಳಿತ ಮಂಡಳಿಯ ಈ ಕ್ರಮ ಖಂಡನೀಯವಾಗಿದೆ ಎಂದು ಪ್ರಭಾಕರ ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವನ್ನು ಸ್ವಂತ ಪಕ್ಷದ್ದೆಂಬ ರೀತಿಯಲ್ಲಿ ನಡೆಸುವ ಮುಸ್ಲೀಂಲೀಗ್ ಆಡಳಿತ ಸಮಿತಿಯ ನಿಲುವು ಅಪಹಾಸ್ಯಕರವಾಗಿದೆ. ಇಂತಹ ನೀತಿಯನ್ನು ಆಡಳಿತ …