ವಿವಿಧೆಡೆಗಳಲ್ಲಿ ಬಿಎಂಎಸ್ ಸ್ಥಾಪನಾ ದಿನಾಚರಣೆ

ಕುಂಬಳೆ: ಕುಂಬಳೆಯ ವಿವಿಧ ಘಟಕಗಳಲ್ಲಿ ಬಿಎಂಎಸ್ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಜರಗಿತು. ನಾಯ್ಕಾಪು ಶಾಸ್ತಾ ಆಟೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಲೋಹಿತಾಕ್ಷ ಧ್ವಜಾ ರೋಹಣ ಗೈದರು. ಬಿಎಂಎಸ್ ನಿರ್ಮಾಣ ಸಮಿತಿ ಜಿಲ್ಲಾ ಕೋಶಾಧಿ ಕಾರಿ ಐತ್ತಪ್ಪ ನಾರಾಯಣಮಂಗಲ ಮಾಹಿತಿ ನೀಡಿದರು. ಸಾಮಾಜಿಕ ಮುಂದಾಳು ಮುರಳೀಧರ ಯಾದವ್ ಶುಭ ಹಾರೈಸಿದರು. ಭಾಸ್ಕರ ಎನ್. ಸ್ವಾಗತಿಸಿ, ಲಕ್ಷ್ಮಣ ಒ. ವಂದಿಸಿದರು. ಬಿಎಂಎಲ್ ಟೈಲರ್ ಸಮಿತಿ ಕುಂಬಳೆ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ನಾಗವೇಣಿ ದಿನೇಶ್ ಧ್ವಜಾರೋಹಣ …

ಬಿಎಂಎಸ್ ಮಂಜೇಶ್ವರ ವಲಯ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಬಿಎಂಎಸ್ ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ವಲಯ ಸಮ್ಮೇಳನ ಹೊಸಂಗಡಿ ಯೂನಿಟ್ ಸಭಾಂ ಗಣದಲ್ಲಿ ಜರಗಿತು. ವಲಯಾಧ್ಯಕ್ಷ ರವಿ ಎಂ.ಕೆ. ಕೋಳ್ಯೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿ ಮಾತನಾಡಿ, ನೀಟ್ ಪರೀಕ್ಷಾ ಪೇಪರ್ ಸೋರಿಕೆ ಹಾಗೂ ಅದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪರೀಕ್ಷಾ ಸೋರಿಕೆಯ ನೆಪದಲ್ಲಿ ಪಾರ್ಲಿಮೆಂಟ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ವಿಷಯವನ್ನು ಮುಂದಿಟ್ಟುಕೊAಡು …

ಕುಂಬಳೆಯಲ್ಲಿ ಮನೆಯವರನ್ನು ಕಟ್ಟಿಹಾಕಿ 42 ಪವನ್ ಚಿನ್ನಾಭರಣ, ಹಣ ದರೋಡೆಗೈದ ಆರೋಪಿ ಬಂಧನ

ಕುಂಬಳೆ: ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ 42 ಪವನ್ ಚಿನ್ನಾಭರಣ ಹಾಗೂ 25,000 ರೂಪಾಯಿಗಳನ್ನು ದರೋಡೆಗೈದ ಪ್ರಕರಣದ ಆರೋಪಿಗಳಲ್ಲೋರ್ವನನ್ನು ಬಂಧಿಸಲಾಗಿದೆ. ಕರ್ನಾಟಕದ ಸಾಂಬಿಯ ಅಸೀಸ್ ಯಾನೆ ಅಬ್ದುಲ್ ಅಸೀಸ್ (58) ಎಂಬಾತನನ್ನು ಇಂದು ಬೆಳಿಗ್ಗೆ ಪುತ್ತೂರಿನಿಂದ ಬಂಧಿಸಲಾಗಿದೆ. 2012 ಡಿಸೆಂಬರ್‌ನಲ್ಲಿ ನಡೆದ ಈ ದರೋಡೆ ಪ್ರಕರಣದ ಆರೋಪಿಯಾದ ಅಬ್ದುಲ್ ಅಸೀಸ್‌ನನ್ನು ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಮಧುಸೂದನನ್ ನಾಯರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲು ಸಾಧ್ಯವಾಗಿದೆ. ಮಂಗಳೂರಿನಲ್ಲಿ ಟ್ರಾನ್ಸ್‌ಪೋರ್ಟ್ ಆಪರೇಟರ್ ಆಗಿದ್ದ ಕುಂಬಳೆಯ ಅನಿಲ್ …

ಶಬರಿಮಲೆ ಚಿನ್ನ ಕಳವು: ಮುಜರಾಯಿ ಮಂಡಳಿ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಎಸ್‌ಐಟಿ ವಶಕ್ಕೆ

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್‌ರನ್ನು ವಿಶೇಷ ತನಿಖಾ ತಂಡ ಇಂದು ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಅವರನ್ನು  ತಿರುವನಂತಪುರದಲ್ಲಿರುವ ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ  ಅಧಿಕಾರಿಗಳು   ವಿಚಾರಣೆಗೊಳಪಡಿಸತೊಡಗಿದ್ದಾರೆ. ಶಬರಿಮಲೆ ದೇಗುಲದ ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳ  ಚಿನ್ನ ಲೇಪಿತ ಕವಚಗಳನ್ನು 2025ರಲ್ಲಿ ಕಾನೂನು ಉಲ್ಲಂಘಿಸಿ ಮರು  ಲೇಪನಗೊಳಿಸುವ ಹೆಸರಲ್ಲಿ ಅವುಗಳನ್ನು ಚೆನ್ನೈಗೆ ಸಾಗಿಸಿದ  ಪ್ರಕರಣದಲ್ಲಿ ಪಿ.ಎಸ್. ಪ್ರಶಾಂತ್ ಸೇರಿದಂತೆ ಏಳು ಮಂದಿಯ ಕೈವಾಡವಿದೆ …

ಯುವತಿ ಮದುವೆಗೆ ಅಡ್ಡಿ ಯುವಕನ ವಿರುದ್ಧ ಕೇಸು

ಮುಳ್ಳೇರಿಯ: ಮದುವೆಗೆ ಅಡ್ಡಿಪಡಿಸುತ್ತಿರುವುದಾಗಿ ಆರೋ ಪಿಸಿ ಯುವತಿ ನೀಡಿದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಮಿದ್‌ಲಾಜ್ ಎಂಬಾತನ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಿದ್‌ಲಾಜ್ ತನ್ನನ್ನು ಹಿಂಬಾಲಿಸಿ ಉಪಟಳ ನೀಡುತ್ತಿರು ವುದಾಗಿಯೂ ಯುವತಿ ಆರೋಪಿ ಸಿದ್ದಾಳೆ. ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ  ಯುವತಿ ಪೊಲೀ ಸರಿಗೆ ದೂರು ನೀಡಿದ್ದಾಳೆ ಮಿದ್‌ಲಾಜ್‌ನನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾ ಚರಣೆ ತೀವ್ರಗೊಳಿಸಿದ್ದಾರೆ.

ಫುಟ್ಬಾಲ್ ಆಟದ ಮಧ್ಯೆ ರೆಫರಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಫುಟ್ಬಾಲ್ ಆಟದ ಮಧ್ಯೆ ರೆಫರಿ ಕುಸಿದುಬಿದ್ದು  ಮೃತಪಟ್ಟ ಘಟನೆ ನಡೆದಿದೆ. ಉಳುವಾರು ಬದ್ರಿಯ ಮಂಜಿಲ್‌ನ ಅಬ್ದುಲ್ಲ-ಖದೀಜ ದಂಪತಿಯ ಪುತ್ರ ಹಸನ್ ಉಳುವಾರು (46) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 6 ಗಂಟೆ ವೇಳೆ ಫುಟ್ಬಾಲ್ ಆಟದ ಮಧ್ಯೆ  ಕುಸಿದು ಬಿದ್ದ ಇವರನ್ನು  ಕೂಡಲೇ ಕುಂಬಳೆಯ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಮುಸ್ಲಿಂ ಲೀಗ್ ಹಾಗೂ ಸಮಸ್ತದ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು  ಪತ್ನಿ ಸಮೀರ, ಪುತ್ರಿ ಖದೀಜ ಅನ್ಫಾ, ಸಹೋದರ-ಸಹೋ ದರಿಯರಾದ ಹುಸೈನ್, ಮುಹಮ್ಮದ್, …

ಪಾಕಿಸ್ತಾನ ಪೌರತ್ವ ಮರೆಮಾಚಿ ಭಾರತೀಯ ಪಾಸ್‌ಪೋರ್ಟ್ ಸಂಪಾದಿಸಿದ ಯುವತಿ ಸೆರೆ

ಕಾಸರಗೋಡು: ಪಾಕಿಸ್ತಾನದ ಪೌರತ್ವವನ್ನು ಮರೆಮಾಚಿ ಭಾರತೀಯ ಪಾಸ್‌ಪೋರ್ಟ್ ಪಡೆದ ಯುವತಿ ವಿರುದ್ಧ ಕಣ್ಣೂರು ಮೈಯಿಲ್ ಪೊಲೀಸರು ಪಾಸ್‌ಪೋರ್ಟ್ ಆಕ್ಟ್  ೨೨, ಇಂಟರ್ ನ್ಯಾಶನಲ್ ಫಾರಿನರ್ಸ್ ಆಕ್ಟ್ 2025 ಸೇರಿದಂತೆ ೭ರಷ್ಟು ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರು ಕನ್ನಾಡಿಪರಂಬು ಕೊಟ್ಟಿಚ್ಚಾಲಿಲ್ ನಿವಾಸಿ ಎಂ.ಕೆ. ಅಲೀನಾ (24) ಎಂಬಾಕೆಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.  ಕನ್ನಾಡಿಪರಂಬು ನಿವಾಸಿ ಅಬ್ದುಲ್ ಹಕೀಂ ಎಂಬವರು 1946ರಂದು ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗಿ  ಖಾಯಂ ಆಗಿ ಜೀವಿಸತೊಡಗಿದ್ದರು. ನಂತರ ಅಲ್ಲಿ ಹಸೀನಾ ಬೀಗಂ …

ಆರ್‌ಟಿಒ, ಪೊಲೀಸ್ ನೇತೃತ್ವದಲ್ಲಿ ನಡೆದ ಸಭೆಯಿಂದ ಹೊರ ನಡೆದ ಪಂ. ಜನಪ್ರತಿನಿಧಿಗಳು: ಕುಂಬಳೆಯಲ್ಲಿ ಪರಿಹಾರವಾಗದ ಬಸ್ ನಿಲುಗಡೆ ಸಮಸ್ಯೆ

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಗೆ ಸಂಬಂಧಿಸಿ ಹುಟ್ಟಿಕೊಂಡ ವಿವಾದ ಪರಿಹಾರ ವಾಗದೆ ಇನ್ನಷ್ಟು ಉಲ್ಭಣಾವಸ್ಥೆಗೆ ತಲುಪುತ್ತಿದೆ. ಸಮಸ್ಯೆ ಪರಿಹರಿಸಲು  ಆರ್‌ಟಿಒ, ಪೊಲೀಸರ ನೇತೃತ್ವದಲ್ಲಿ ನಿನ್ನೆ ನಡೆದ ಚರ್ಚೆ ಯಾವುದೇ ನಿರ್ಧಾರ  ಕೈಗೊಳ್ಳಲಾಗದೆ ಕೊನೆಗೊಂಡಿತು.  ಕುಂಬಳೆ ಪಂಚಾಯತ್ ಕಚೇರಿಯಲ್ಲಿ  ಎಎಸ್‌ಪಿ ಅಚ್ಯುತ್ ಅಶೋಕ್, ಕುಂಬಳೆ ಸಿಐ ಬೈಜು ಕೆ ಜೋಸ್, ಆರ್‌ಟಿಒ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಸಭೆಯಲ್ಲಿ ಪಂಚಾಯತ್ ಆಡಳಿತ ಪಕ್ಷದ ಜನಪ್ರತಿನಿಧಿಗಳು,  ಬ್ಲಾಕ್, ಜಿಲ್ಲಾ ಪಂಚಾಯತ್ ಸದಸ್ಯರು, ಬಸ್ ನೌಕರರು, ಬಸ್ ನೌಕರರ ಸಂಘಟನೆಗಳ …

ಉಪಯೋಗಶೂನ್ಯ ಕುಕ್ಕಾರು ಶಾಲಾ ಹಳೆ ಕಟ್ಟಡವನ್ನು ತೆರವುಗೊಳಿಸಲು ಒತ್ತಾಯ

ಉಪ್ಪಳ: ಮಂಗಲ್ಪಾಡಿ ಕುಕ್ಕಾರುನಲ್ಲಿರುವ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿರುವ ಹಳೇ ಕಟ್ಟಡವನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ಕಟ್ಟಡ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀ ಯರಿಗೆ ಅಪಾಯಕಾರಿಯಾಗಿದೆ. ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಹೈಯರ್ ಸೆಕಂಡರಿ ತರಗತಿಯನ್ನು ಮಂಗಲ್ಪಾಡಿ ಪ್ಲಸ್-ಟು ಬ್ಲೋಕ್ ಕಟ್ಟಡದ ಬಳಿಯಲ್ಲಿರುವ ಹೊಸಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈಗ ಇಲ್ಲಿ ಒಂದರಿAದ ನಾಲ್ಕನೇ ತರಗತಿ ತನಕ ಮಾತ್ರವಿದೆ. ಇದರ ಪರಿಸರದಲ್ಲಿರುವ ಹಳೆಯ ಕಟ್ಟಡಗಳು ಶೋಚನೀಯÁ ವಸ್ಥೆಯಿಂದ ಮುರಿದು ಬೀಳುತ್ತಿದೆ. ಕಾಡು ಪೊದೆಗಳು ತುಂಬಿ …

ರಾಹುಲ್‌ಗಾಂಧಿ ಬಂಧನ: ಪೈವಳಿಕೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪೈವಳಿಕೆ: ನವದೆಹಲಿಯಲ್ಲಿ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಮುಷ್ಕರ ನಿರತರಾದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರಕಾರ ಪೊಲೀಸ್‌ರನ್ನು ಉಪಯೋಗಿಸಿ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ್ ಮೊದಲಾದವರ ಬಂಧನವನ್ನು ಪ್ರತಿಭಟಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಜಾಥ ಹಾಗೂ ಧರಣಿ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ಸ್ಥಾಯೀ ಸಮಿತಿ ಅಧ್ಯಕ್ಷ …