ಯುವಕನ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ ದೂರಿನಂತೆ ಇಬ್ಬರ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲು

ಬದಿಯಡ್ಕ: ಬಸ್‌ಗೇರುತ್ತಿದ್ದ ಯುವಕನಿಗೆ ಹಿಂದಿನಿಂದ ಬಂದು ಕಬ್ಬಿಣದ ಲಿವರ್‌ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿ ಸಿರುವುದಾಗಿ  ಆರೋಪಿಸಿ ನೀಡಲಾದ ದೂರಿನಂತೆ  ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬೇಳ ಪೂವಾಳೆತ್ತಡ್ಕ ಹೌಸ್‌ನ ರಾಜೇಶ್ ಪಿ (41) ನೀಡಿದ  ದೂರಿನಂತೆ ನೀರ್ಚಾಲು ನಿವಾಸಿಗಳಾದ  ಇಸಾಕ್ ಮತ್ತು ಫಾರೂಕ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಜನವರಿ 14ರಂದು 7 ಗಂಟೆಗೆ ನೀರ್ಚಾಲು ಬಸ್ ನಿಲ್ದಾಣದಿಂದ ಕುಂಬಳೆಗೆ ಹೋಗಲೆಂದು  ಬಸ್‌ಗೇರುತ್ತಿದ್ದ ವೇಳೆ ಆರೋಪಿಗಳು ಹಿಂದಿನಿಂದ …

ಕುಂಬಳೆ ಬೆಡಿ ಇಂದು: ನಾಳೆ ಅವಭೃತ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ  ವಾರ್ಷಿಕ ಮಹೋತ್ಸವದಂಗವಾಗಿ  ವಿಶೇಷ ಬೆಡಿ ಪ್ರದರ್ಶನ ಇಂದು ನಡೆಯಲಿದೆ. ಕುಂಬಳೆ ಬೆಡಿ ಎಂದೇ ಪ್ರಸಿದ್ಧವಾದ ಈ ಕಾರ್ಯಕ್ರಮ ಇಂದು ರಾತ್ರಿ 9.45ರಿಂದ ನಡೆಯಲಿದೆ. ಬೆಳಿಗ್ಗೆ ಉತ್ಸವ ಶ್ರೀಬಲಿ,  ತುಲಾಭಾರ ಸೇವೆ, ಮಧ್ಯಾಹ್ನ  ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ 4.30ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದಿಂದ ನೃತ್ಯ ಸಂಭ್ರಮ, 6ರಿಂದ ಚೆಂಡೆಮೇಳ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ಪೂಜೆ, ಶ್ರೀ ಭೂತಬಲಿ ಉತ್ಸವ,  ವಿಶೇಷ …

ಶಾಲೆಗೆಂದು ಹೊರ ಹೋದ ಬಾಲಕಿ ಹಿಂತಿರುಗಲಿಲ್ಲ: ಗೆಳೆಯ ದೌರ್ಜನ್ಯಗೈದು ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮಲಪ್ಪುರಂ: ಕರುವಾರಕುಂಡ್‌ನಿಂದ ನಾಪತ್ತೆಯಾದ ೧೪ರ ಹರೆಯದ ಬುಡಕಟ್ಟು ಜನಾಂಗದ ಬಾಲಕಿ ವಾಣಿಯಂಬಲಂ ತೊಡಿಕಪ್ಪುಳಂ ಪುಳ್ಳಿಪಾಡತ್ ಎಂಬಲ್ಲಿ ಪೊದೆಗಳೆಡೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಘಟನೆಯಲ್ಲಿ ನಿಗೂಢತೆ ಇದೆ ಎನ್ನಲಾಗಿದೆ. ಕರುವಾರಕುಂಡ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ಘಟನೆಯಲ್ಲಿ ಇದೇ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯನ್ನು ನಿನ್ನೆ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬಾಲಕಿಯ ಕೊಲೆಗೆ ಪ್ರೇಮ ವೈಫಲ್ಯ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಪೊದೆಗಳೆಡೆಯಲ್ಲಿ ಬಾಲಕಿಯ ಬಟ್ಟೆಬರೆಯನ್ನು ಉಪಯೋಗಿಸಿ ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ …

ಪತ್ನಿಗೆ ವೀಡಿಯೋ ಕರೆ ಮಾಡಿದ ಬಳಿಕ ಯುವಕ ನೇಣು ಬಿಗಿದು ಆತ್ಮಹತ್ಯೆ

ಕುಂಬಳೆ: ಪತ್ನಿಗೆ ವೀಡಿಯೋ ಕಾಲ್ ಮಾಡಿದ ಬಳಿಕ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕರ್ನಾಟಕ ಶಿವಮೊಗ್ಗ ನಿವಾಸಿ ಹಾಗೂ  ಪುತ್ತಿಗೆ ಪಂ. ಕಚೇರಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ರಿಸ್ವಾನ್ ಅಲಿ (32) ಮೃತಪಟ್ಟ ಯುವಕ. ಮರ ಕಡಿಯುವ ಕಾರ್ಮಿಕನಾಗಿದ್ದಾರೆ. ನಿನ್ನೆ ರಾತ್ರಿ ಪತ್ನಿ ಶಮೀಮಾ ಬಾನುರಿಗೆ ವೀಡಿಯೋ ಕಾಲ್ ಮಾಡಿದ ಬಳಿಕ ಆತ್ಮಹತ್ಯೆಗೈಯ್ಯುವುದಾಗಿ ತಿಳಿಸಿದ್ದನೆನ್ನಲಾಗಿದೆ. ಬಳಿಕ ಪತ್ನಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಉಂಟಾಗಿರಲಿಲ್ಲ. ಮಾಹಿತಿ ತಿಳಿದು ಪರಿಚಯದವರು ತಲುಪಿದಾಗ ರಿಸ್ವಾನ್ ಅಲಿಯನ್ನು ನೇಣು …

ಪೋಕ್ಸೋ ಕೇಸು: ಆಟೋ ಚಾಲಕ ಸಹಿತ ಇಬ್ಬರ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 14ರ ಬಾಲಕಿಯನ್ನು ದುರುದ್ದೇಶಪೂರ್ವಕ ಮನೆಗೆ ಕರೆದು ಬರಮಾಡಿಕೊಂಡಿರು ವುದಾಗಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣದಲ್ಲಿ ಕೀಯೂರಿನ ರೋಶಿದ್ (19)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಈ ಮೊದಲು ಕೂಡಾ ಪೋಕ್ಸೋ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಟೋಚಾಲಕನಾದ ಅಬೂಬಕ್ಕರ್ (50) ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಈತ ಉರುಡೂರು ಚೇಡಿಮೂಲೆ ನಿವಾಸಿಯಾಗಿದ್ದು, 13ರ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ಆದೂರು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.

ಮೊಗ್ರಾಲ್ ನಿವಾಸಿ ಕೊಲ್ಲಿಯಲ್ಲಿ ನಿಧನ

ಮೊಗ್ರಾಲ್: ಮೊಗ್ರಾಲ್ ಕಡಪ್ಪುರ ನಿವಾಸಿ ಮುಜೀಬ್ ರಹ್ಮಾನ್ (46) ಕೊಲ್ಲಿಯಲ್ಲಿ ಮೃತಪಟ್ಟ ಬಗ್ಗೆ ಊರಿಗೆ ಮಾಹಿತಿ ಲಭಿಸಿದೆ. ಯುಎಇ ಅಜ್ಮಾನ್‌ನ ವಾಸಸ್ಥಳದಲ್ಲಿ  ಕುಸಿದು ಬಿದ್ದ ಇವರು ಕಳೆದೆರಡು ವಾರಗಳಿಂದ ಅಲ್ಲಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಮಧ್ಯಾಹ್ನ ಮೃತ ಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ಪಿ.ಎಂ. ಅಬ್ದುಲ್ಲ- ನಫೀಸ ದಂಪತಿ ಪುತ್ರನಾಗಿದ್ದು, ಪತ್ನಿ ಶಹನಾಸ್, ಮಕ್ಕಳಾದ ನಫೀಸತ್ ಮಿರ್ಶಿಬ, ನಿಶಾನ ಫಾತಿಮ, ಮುಹಮ್ಮದ್ ಮುಹಾದ್, ಸಹೋದರಿ ಕುಂಞಿಬೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಆರಿಕ್ಕಾಡಿ ಟೋಲ್ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳಿಸಲು ಕ್ರಿಯಾ ಸಮಿತಿ ತೀರ್ಮಾನ: 19ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಂಗಮ

ಕುಂಬಳೆ: ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಿಸುವುದರ ವಿರುದ್ಧ ಕ್ರಿಯಾ ಸಮಿತಿಯ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ನಿನ್ನೆ ಸಂಜೆ ಕುಂಬಳೆಯಲ್ಲಿ ಜರಗಿದ ಸರ್ವಪಕ್ಷ ಕ್ರಿಯಾ ಸಮಿತಿಯ ಸಭೆಯಲ್ಲಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಈ ತಿಂಗಳ 19ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜನಪ್ರತಿನಿಧಿಗಳ ಪ್ರತಿಭಟನಾ ಸಂಗಮ ನಡೆಯಲಿದೆ. ಮಂಜೇಶ್ವರ- ಕಾಸರಗೋಡು ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸದಸ್ಯರು, ಕಾಸರಗೋಡು ನಗರಸಭೆಯ ಕೌನ್ಸಿಲರ್‌ಗಳು ಭಾಗವಹಿಸುವರು. ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ …

ವಿಧಾನಸಭೆ ಚುನಾವಣೆ: ವಿ.ಡಿ. ಸತೀಶನ್ ನೇತೃತ್ವದಲ್ಲಿ ‘ನವಯುಗ ಯಾತ್ರೆ’ ಫೆ.6ರಿಂದ; ಕುಂಬಳೆಯಿಂದ ಚಾಲನೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಪೂರ್ವಭಾವಿ ಪ್ರಚಾರದಂಗವಾಗಿ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್‌ರ ನೇತೃತ್ವದಲ್ಲಿ ಯಾತ್ರೆ ನಡೆಸಲು ಯುಡಿಎಫ್ ತೀರ್ಮಾನಿಸಿದೆ. ಇದಕ್ಕೆ ‘ನವಯುಗ ಯಾತ್ರೆ’ ಎಂಬ ಹೆಸರಿಡಲಾಗಿದೆ. ಫೆಬ್ರವರಿ ೬ರಂದು ಕುಂಬಳೆಯಿಂದ ಪ್ರಯಾಣ ಆರಂಭಿಸಲಿದ್ದು, ಮಾರ್ಚ್ 6ರಂದು ತಿರುವನಂತಪುರದಲ್ಲಿ ಸಮಾಪ್ತಿಹೊಂದಲಿದೆ. ‘ಕೇರಳವನ್ನು ಮರುಗಳಿಸಲಾಗುವುದು’  ಎಂಬುದು ಈ ಯಾತ್ರೆಯ ಘೋಷಣೆಯಾಗಿದೆ. ಫೆ. 6ರಂದು ಕುಂಬಳೆಯಲ್ಲಿ ನಡೆಯಲಿರುವ ಯುಡಿಎಫ್‌ನ ಬೃಹತ್ ಕಾರ್ಯಕ್ರಮದಲ್ಲಿ ಯಾತ್ರೆ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ ಯುಡಿಎಫ್‌ನ ಎಲ್ಲಾ ಘಟಕ ಪಕ್ಷಗಳ ನೇತಾರರು ಭಾಗವಹಿಸುವರು. ಬಳಿಕ ಯಾತ್ರೆ ಕಾಸರಗೋಡು ಮೂಲಕವಾಗಿ …

ಕೆಂಪುಕಲ್ಲು ಉತ್ಪಾದಕ ಮಾಲಕರಿಂದ ಜ.19ರಂದು ಕಲೆಕ್ಟ್ರೇಟ್ ಮಾರ್ಚ್

ಕಾಸರಗೋಡು: ಲೈಸನ್ಸ್ ಮಂಜೂರು ಮಾಡುವ ವಿಷಯದಲ್ಲಿ ಉಂಟಾಗುತ್ತಿರುವ ಕಾಲವಿಳಂಬ, ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ಕೆಂಪುಕಲ್ಲು ಉತ್ಪಾದನಾ ವಲಯ ಭಾರೀ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದೂ, ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಸರಕಾರ ಹೇಳುತ್ತಿದ್ದರೂ, ವಿವಿಧ ಇಲಾಖೆಗಳ ಹಠಮಾರಿತನ ನಿಲುವಿನಿಂದಾಗಿ ಇದಕ್ಕೆ ಈ ತನಕ ಪರಿಹಾರ ಕಂಡುಕೊಳ್ಳದೆ ಇರುವ ನಿಲುವನ್ನು ಪ್ರತಿಭಟಿಸಿ ಜನವರಿ 19ರಂದು ಕಾಸರಗೋಡು ಕಲೆಕ್ಟ್ರೇಟ್‌ಗೆ ಮಾರ್ಚ್ ನಡೆಸಲಾಗುವುದೆಂದು ಕೆಂಪುಕಲ್ಲು ಉತ್ಪಾದಕ ಮಾಲಕರ ಕಲ್ಯಾಣ ಸಂಘದ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ …

ಕುಂಬ್ಡಾಜೆ: ವೃದ್ದೆ ಸಾವಿಗೀಡಾಗಿರುವುದು ಉಸಿರುಗಟ್ಟಿ ಎಂಬ ಸೂಚನೆ; ಕೃತ್ಯ ನಡೆಸಿದವರು ಯಾರು? ತನಿಖೆ ತೀವ್ರಗೊಳಿಸಿದ ಬದಿಯಡ್ಕ ಪೊಲೀಸ್

ಬದಿಯಡ್ಕ: ಕುಂಬ್ಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ದೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಇದು ಕೊಲೆ ಕೃತ್ಯವಾಗಿದೆ ಎಂಬ ಅನುಮಾನದ ಮೇರೆಗೆ ಪೊಲೀಸ್ ತನಿಖೆ ಮುಂದುವರಿಯುತ್ತಿದೆ. ಇಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂಬ ಬಗ್ಗೆ  ಮಾಹಿತಿ ಲಭಿಸಬಹುದೆಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ. ಮವ್ವಾರು ಅಜಿಲದ ದಿ| ವೆಂಕಪ್ಪ ಶೆಟ್ಟಿಯವರ ಪತ್ನಿ ಪುಷ್ಪಲತಾ ವಿ. ಶೆಟ್ಟಿ (72) …