ದೇರಂಬಳ ಕಾಲು ಸೇತುವೆ ಕುಸಿದು ವರ್ಷ ಹಲವು ಕಳೆದರೂ ನಿರ್ಮಾಣಕ್ಕೆ ಕ್ರಮವಿಲ್ಲ: ಅಧಿಕಾರಿಗಳು ಕಣ್ಣು ತೆರೆಯದಿದ್ದರೆ ಅಪಾಯ ಸಾಧ್ಯತೆ ಇನ್ನೂ ಇದೆ
ಉಪ್ಪಳ: ದೇರಂಬಳದಲ್ಲಿ ಸೇತುವೆ ಕುಸಿದು ಬಿದ್ದು ಹಲವು ವರ್ಷ ಕಳೆದರೂ ಮರು ನಿರ್ಮಿಸದಿರುವುದರಿಂದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಊರವರು ನಿರ್ಮಿಸಿದ ಕಂಗಿನ ಸೇತುವೆಯಿಂದ ಸಂಚಾರ ಭೀತಿಗೆ ಕಾರಣವಾಗುತ್ತಿದೆ. ಮೀಂಜ ಹಾಗೂ ಮಂಗಲ್ಪಾಡಿ ಪಂಚಾಯತ್ ಸಂಗಮಿಸುವ ದೇರಂಬಳದಲ್ಲಿ ೨೦೦೩ರಲ್ಲಿ ಜಿಲ್ಲಾ ಪಂಚಾಯತ್‌ನಿAದ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಹಲವು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ಕುಸಿದು ಬಿದ್ದಿದೆ. ಈ ವೇಳೆ ಜನರ ಸಂಚಾರ ಇಲ್ಲದಿರುವುದರಿಂದ ಭಾರೀ ದುರಂತ ತಪ್ಪಿಹೋಗಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಸಂಕ ಮರು ನಿರ್ಮಾಣಕ್ಕೆ ಒತ್ತಾಯಿಸಿದ್ದರೂ …