ಪೊಲೀಸರ ಮೇಲೆ ಹಲ್ಲೆಗೈದು ಮಾದಕವಸ್ತು ಪ್ರಕರಣದ ಆರೋಪಿ ಪರಾರಿ: ಉಪೇಕ್ಷಿಸಿದ ಸ್ಕೂಟರ್‌ನಲ್ಲಿ ಎಂಡಿಎಂಎ ಪತ್ತೆ
ಉಪ್ಪಳ: ಮಾದಕವಸ್ತು ಪ್ರಕರಣದ ಆರೋಪಿಯೋರ್ವ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾನೆ. ಪರಾರಿ ವೇಳೆ ಆರೋಪಿ ಉಪೇಕ್ಷಿಸಿದ ಸ್ಕೂಟರ್ ನಲ್ಲಿ 1.32 ಗ್ರಾಂ ಎಂಡಿಎಂಎ ಪತ್ತೆಯಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಈ ಘಟನೆ ನಡೆದಿದೆ. ಮೂಸೋಡಿ ನಿವಾಸಿ ಮಜೀದ್ ಎಂಬಾತ ಪೊಲೀ ಸರಿಗೆ ಹಲ್ಲೆಗೈದು ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:-ಮಜೀದ್ ಈ ಹಿಂದೆ ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. …