ಕೊಲ್ಲಂಗಾನ ಚರ್ಚ್‌ನ ಧರ್ಮಗುರು ಮಂಗಳೂರಿಗೆ ವರ್ಗಾವಣೆ
ಕಾಸರಗೋಡು: ಕೊಲ್ಲಂಗಾನ ಸಂತ ಥೋಮಸರ ದೇವಾಲಯದ ಧರ್ಮಗುರುಗಳಾಗಿ ಕಳೆದ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಫಾ| ರಿತೇಶ್ ರೋಡ್ರಿಗಸ್ ಮಂಗಳೂರಿನ ಕಾಸ್ಟಿಯಾ ದೇವಾಲಯದ ಜವಾಬ್ದಾರಿ ವಹಿಸಲು ನಾಳೆ ತೆರಳಲಿದ್ದಾರೆ. ಕೊಲ್ಲಂ ಗಾನ ಸಂತ ಥೋಮಸರ ದೇವಾಲಯದಲ್ಲಿ 7 ವರ್ಷಗಳ ಕಾಲಸೇವೆ ಸಲ್ಲಿಸಿದ ವಂ| ಫಾ| ಡೇನಿಯಲ್ ಡಿ’ಸೋಜಾರವರು ಸಿದ್ಧಕಟ್ಟೆ ಧರ್ಮಕೇಂದ್ರಕ್ಕೆ ವರ್ಗಾವಣೆಗೊಂಡಾಗ ಅವರ ಸ್ಥಾನದಲ್ಲಿ ವಂ| ರಿತೇಶ್ ರೋಡ್ರಿಗಸ್ ನೇಮಕಗೊಂಡಿದ್ದರು. ಕೊಲ್ಲಂಗಾನ ಚರ್ಚ್‌ನ ೨೫ನೇ ವಾರ್ಷಿಕಾಚರಣೆ ಇವರ ನೇತೃತ್ವದಲ್ಲಿ ನಡೆದಿದ್ದು, ಬೆಳ್ಳಿಹಬ್ಬ ಚಟುವಟಿಕೆಗಳು ಒಂದು ವರ್ಷವಿಡೀ …