ಬದಿಯಡ್ಕ ಶ್ರೀ ಗಣೇಶೋತ್ಸವ ವಿಗ್ರಹ ಶೋಭಾಯಾತ್ರೆಯೊಂದಿಗೆ ಸಮಾಪ್ತಿ

ಬದಿಯಡ್ಕ: ೫೫ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ 7ನೇ ವರ್ಷದ ಪ್ರತಿಷ್ಠಾದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿದ್ದು, ನಿನ್ನೆ ಶ್ರೀಗಣೇಶ ವಿಗ್ರಹ ಜಲಸ್ತಂಭನ ದೊಂದಿಗೆ ಸಮಾಪ್ತಿಗೊಂಡಿತು. ಸಹಸ್ರಾರು ಮಂದಿ ಪಾಲ್ಗೊಂಡರು. ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ ಇವರ ಪೌರೋಹಿತ್ಯದಲ್ಲಿ ಶ್ರೀಗಣೇಶ ವಿಗ್ರಹ ಪ್ರತಿಷ್ಠೆ, ಪೂಜಾದಿ ಕಾರ್ಯಗಳು ಜರಗಿತು. ಶಿವಾಜಿ ಗಲ್ಲಿ, ಯುವಶಕ್ತಿ, ಛತ್ರಪತಿ, ಓಂಕಾರ್, ಆರ್‌ಸಿಬಿ, ದಿsÃರಾಸ್, ಅಗ್ನಿ, ಶಕ್ತಿ ಕುಣಿತ ಭಜನೆಯ ತಂಡಗಳಿAದ ವಿವಿಧ ಸಾಂಸ್ಕೃತಿಕ ಕಲಾಕೃತಿಗಳು ಜರಗಿತು. ಮುತ್ತುಕೊಡೆ, ಸಿಂಗಾರಿಮೇಳ, ಚೆಂಡೆ ವಾದ್ಯಗಳು, ವಿವಿಧ ಕಲಾಕೃತಿಗಳು, ನೃತ್ಯ, ಭಜನೆಗಳು ಮೆರವಣಿಗೆಗೆ ಶೋಭೆಯನ್ನು ನೀಡಿತು. ರನ್ನಿಂಗ್ ಡಿ.ಜೆ., ಫಯರ್ ಡ್ಯಾನ್ಸ್ಗರ್ಲ್ಸ್, ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಭದ್ರಕಾಳಿ ಅಘೋರಿ ನೃತ್ಯ, ಮಿಕ್ಕಿಮೌಸ್ ಶೋ, ಲೇಸರ್ ಶೋ ವಿದ್ ಪಿ.ಎಸ್.ಎಲ್. ಸೌಂಡ್, ಸ್ತಬ್ದಚಿತ್ರ, ತಾಂಬೋಲA ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡಿತು. ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ವರದಾ ನದಿಯ ತಟದಲ್ಲಿ ಪೂಜೆ, ಪ್ರಾರ್ಥನೆ, ಧ್ವಜಾವತರಣ, ವಿಗ್ರಹ ಜಲಸ್ತಂಭನದೊAದಿಗೆ ಕಾರ್ಯಕ್ರಮಗಳು ಸಮಾಪ್ತಿಗೊಂಡಿತು.

You cannot copy contents of this page