ಕುಂಬಳೆ: ಕುಂಬಳೆ ಪ್ರೆಸ್ ಫಾರಂ ಡಿಜಿಟಲೈಸೇಶನ್ನಂಗವಾಗಿ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಂ ಪೇಜ್ಗಳ ಉದ್ಘಾಟ ನೆಯನ್ನು ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಬ್ಲೋಕ್ ಪಂಚಾ ಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಎಂಬಿವರು ಸೇರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ರಿಗೆ ಲೇಖಕ ಕೆ.ಎಂ. ಅಬ್ಬಾಸ್ ಹಾಗೂ ಕಾಸರ ಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಅವರಿಗೆ ಶಾಸಕ ಎಕೆಎಂ ಅಶ್ರಫ್ ಪಾರಿತೋಷಕ ನೀಡಿ ಗೌರ ವಿಸಿದರು. ಕಾರ್ಯಕ್ರಮದ ಪೂರ್ವ ಭಾವಿಯಾಗಿ ಶಾಸಕ ಎಕೆಎಂ ಅಶ್ರಫ್ ಮಾಧ್ಯಮ ಕಾರ್ಯಕರ್ತ ರೊಂದಿಗೆ ಸಂವಾದ ನಡೆಸಿದರು.
ಪ್ರೆಸ್ ಫಾರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್ ಸ್ವಾಗತಿಸಿದರು. ಕುಂಬಳೆ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಅಬ್ದುಲ್ ಲತೀಫ್ ಉಳ್ವಾರು, ಪುರುಷೋತ್ತಮ ಭಟ್, ರಶೀದ್ ಬಂದ್ಯೋಡು, ಅಬ್ದುಲ್ ಲತೀಫ್ ಉಪ್ಪಳ, ಧನ್ರಾಜ್ ಐಲ, ಕೆ.ಎಂ.ಎ ಸತ್ತಾರ್, ತಾಹಿರ್ ಉಪ್ಪಳ, ಸೈನುದ್ದೀನ್ ಅಡ್ಕ ಉಪಸ್ಥಿತರಿದ್ದರು.






