ಅನಧಿಕೃತವಾಗಿ ವಾಸಿಸುತ್ತಿದ್ದ ಬಾಂಗ್ಲಾ ಯುವತಿಯರು ಸಹಿತ ೮ ಮಂದಿ ಸೆರೆ :ವೇಶ್ಯಾವಾಟಿಕೆ ದಂಧೆಯವರೆಂದು ಶಂಕೆ

ತಿರುವನಂತಪುರ: ಅನಧಿಕೃತ ವಾಗಿ ವಾಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾ ಯುವತಿಯರ ಸಹಿತ ೮ ಮಂದಿಯನ್ನು ಕಳಕೂಟಂ ಕಾರ್ಯ ವಟ್ಟಂ ಮೇನಲ್ಲೂರ್‌ನ ದ್ವಿಮಹಡಿ ಮನೆಯಿಂದ ಕಳಕೂಟಂ ಪೊಲೀ ಸರು ಬಂಧಿಸಿದ್ದಾರೆ. ಬಾಂಗ್ಲಾ ನಿವಾಸಿ ಗಳಾದ ಸುಮಿ, ಇದ್ಕಾನೂನ್, ಕೊಲ್ಲಂ ನಿವಾಸಿ ಪುಷ್ಪಾ, ಕಾಟಕ್ಕಡದ ಸುದೀಪ್, ಕರ್ನಾಟಕದ ಡ್ಯಾನಿಯೇಲ್, ವರ್ಕಲ ನಿವಾಸಿ ನೌಫಿಯ, ಬೆಂಗಳೂರಿನ ಮಧುಮತಿ, ಪಶ್ಚಿಮ ಬಂಗಾಳದ ಮೌಸಮಿ ಬಸ್ವಾಳ್ ಎಂಬಿವರನ್ನು ವಶಕ್ಕೆ ಪಡೆಯಲಾಗಿದೆ. ಈ ತಂಡ ವೇಶ್ಯಾವಾಟಿಕೆ ದಂಧೆ ನಡೆಸುವವ ರಾಗಿದ್ದಾರೆಂದು ಶಂಕಿಸಲಾಗಿದೆ. ಬಾಡಿಗೆ ಮನೆಯಿಂದ ಎರಡು ಕಾರುಗಳು, ಹಲವಾರು ಮೊಬೈಲ್ ಫೋನ್ ಗಳನ್ನು ವಶಪಡಿಸಲಾಗಿದೆ. ಆಯುರ್ವೇದ ವೈದ್ಯರು ಎಂದು ತಿಳಿಸಿ ೩೫,೦೦೦ ರೂ. ಬಾಡಿಗೆಗೆ ಈ ದ್ವಿಮಹಡಿ ಮನೆಯನ್ನು ಇವರು ಪಡೆದುಕೊಂಡಿದ್ದರು.

ಇತ್ತೀಚೆಗೆ ಇಬ್ಬರು ಬಾಂಗ್ಲಾ ಪ್ರಜೆಗಳಾದ ಯುವತಿಯರನ್ನು ಕಳಕೂಟದಲ್ಲಿ ಬಂಧಿಸಲಾಗಿತ್ತು. ಅನ ಧಿಕೃತವಾಗಿ ವಾಸ ಮಾಡುತ್ತಿರುವ ಅನ್ಯದೇಶದವರನ್ನು ಹಾಗೂ ಉಗ್ರಗಾಮಿಗಳನ್ನು ಸೆರೆ ಹಿಡಿಯಲು ನೇಮಕಗೊಂಡಿರುವ ಆಂಟಿ  ಟೆರರಿಸ್ಟ್ ಸ್ಕ್ವಾಡ್ ಇವರನ್ನು ಸೆರೆ ಹಿಡಿದಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page