ಆಪರೇಶನ್ ತೂಫಾನ್ : 400 ಕಿಲೋ ನಿಷೇಧಿತ ತಂಬಾಕು ಉತ್ಪನ್ನ ವಶ;ಗಾಳಿಮುಖ ನಿವಾಸಿ ಕಸ್ಟಡಿಗೆ

ಕಾಸರಗೋಡು: ಮಾದಕದ್ರವ್ಯದ ವಿರುದ್ಧ ಪೊಲೀಸ್ ಇಲಾಖೆ ಆರಂಭಿ ಸಿರುವ ಆಪರೇಷನ್ ತೂಫಾನ್ ಕಾರ್ಯಾಚರಣೆಯಂತೆ  ಕಲ್ಲಿಕೋಟೆ ಪಂದಿರಾಂಕಾವಿನಲ್ಲಿ  ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧಿಸಲ್ಪಟ್ಟ ೪೦೦ಕಿಲೋ ತಂಬಾಕು ಉತ್ಪನ್ನವನ್ನು   ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಕಾಸರಗೋಡು ಗಾಳಿಮುಖ ನಿವಾಸಿ ಅಬ್ದುಲ್ ಸಾಕೀರ್ (28) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ವಶಪಡಿಸಲಾದ ತಂಬಾಕು ಉತ್ಪನ್ನಗಳಿಗೆ ಹೆಚ್ಚುಕಡಿಮೆ 10 ಲಕ್ಷ ರೂ. ಮೌಲ್ಯವಿದೆ. 16 ಗೋಣಿ ಚೀಲಗಳಲ್ಲಾಗಿ ಇದನ್ನು ಸ್ವಿಫ್ಟ್ ಕಾರಿನಲ್ಲಿ ಬಚ್ಚಿಡಲಾಗಿತ್ತು. ಇದರಲ್ಲಿ ೫೦೦೦ಕ್ಕಿಂತಲೂ ಹೆಚ್ಚು ತಂಬಾಕು ಉತ್ಪನ್ನ   ಪ್ಯಾಕೆಟ್‌ಗಳು ಒಳಗೊಂಡಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಸಿಟಿ ಪೊಲೀಸ್ ಕಮಿಷನರ್‌ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪಂದಿರಾಂಕಾವು ಪೊಲೀಸರು ಮತ್ತು ಡಾನ್ಸಾಪ್ ತಂಡದವರು ನಿನ್ನೆ ಪಂದಿರಾಂ ಕಾವು ಟೋಲ್ ಪ್ಲಾಸಾ ಬಳಿಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಮಾಲನ್ನು ಮೈಸೂರಿನಿಂದ ಕಾರಿನಲ್ಲಿ ಎರ್ನಾಕುಳಂಗೆ ಸಾಗಿಸಲಾಗುತ್ತಿತ್ತು. ಆರೋಪಿ ಇದೇ ರೀತಿ ಹಲವು ಬಾರಿ ಇಂತಹ ಮಾಲು ಸಾಗಿಸಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page