ಮುಂದುವರಿದ ಕಾಳಧನ ಬೇಟೆ ಕುಂಬಳೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 61.5 ಲಕ್ಷ ರೂ.ವಶ: ಓರ್ವ ಸೆರೆ

ಕಾಸರಗೋಡು: ಕಾಸರ ಗೋಡಿಗೆ  ಕಾಳಧನ ಸಾಗಾಟ ತೀವ್ರಗೊಂಡಿದೆ. ನಿನ್ನೆ ಎರಡು ಬಾರಿಯಾಗಿ ಕಾಸರಗೋಡು ಹಾಗೂ ಕುಂಬಳೆಯಿಂದ ಒಟ್ಟು 72.9 ಲಕ್ಷ ರೂಪಾಯಿಯನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಕಾರಿನಲ್ಲಿ ಸಾಗಿಸುತ್ತಿದ್ದ  61.5 ಲಕ್ಷ ರೂಪಾಯಿಗಳನ್ನು ಕುಂ ಬಳೆಯಿಂದ ವಶಪಡಿಸಲಾಗಿದೆ.   ಈ ಸಂಬಂಧ  ಓರ್ವನನ್ನು ಬಂಧಿಸ ಲಾಗಿದೆ. ಕಾಸರಗೋಡು ತಳಂ ಗರೆಯ ಮಡನ್ನೂರ್ ಹೌಸ್‌ನ ಶಬೀರ್ ಎಂಬಾತ ಬಂಧಿತ ವ್ಯಕ್ತಿ ಯೆಂದು ಪೊಲೀಸರು ತಿಳಿಸಿದ್ದಾರೆ.  ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್  ಹಾಗೂ ಕುಂಬಳೆ ಪೊಲೀಸರು ಆರಿಕ್ಕಾಡಿ ಟೋಲ್ ಬೂತ್ ಸಮೀಪ ನಡೆಸಿದ ವಾಹನ ತಪಾಸಣೆ ವೇಳೆ ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಪಡಿಸಲಾಗಿದೆ. ಕಾರಿನ  ಹ್ಯಾಂಡ್ ಬ್ರೇಕ್‌ನ ಭಾಗದಲ್ಲಿ   ಹಣವನ್ನು ಬಚ್ಚಿಡಲಾಗಿದ್ದು. ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬರುತ್ತಿದ್ದ ಕಾರಿನಿಂದ ಹಣವನ್ನು ವಶಪಡಿಸಲಾಗಿದೆ.

ನಿನ್ನೆ ಮುಂಜಾನೆ ಕಾ ಸರಗೋಡು ತಾಲೂಕು ಕಚೇರಿ ಸಮೀಪ ಟ್ರಾಫಿಕ್ ಸರ್ಕಲ್ ಬಳಿಯಿಂದ ೧೧.೪೦ ಲಕ್ಷ ರೂಪಾ ಯಿಗಳನ್ನು ವಶಪಡಿಸಲಾಗಿತ್ತು.

You cannot copy contents of this page