ಬದಿಯಡ್ಕ: ಸೇವಾ ಭಾರತಿ ಬದಿಯಡ್ಕ ಇದರ ಆಶ್ರಯದಲ್ಲಿ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ರಕ್ತದಾನ ಶಿಬಿರ ಜರಗಿತು. ಸೇವಾ ಭಾರತಿ ಅಧ್ಯಕ್ಷ ಸದಾಶಿವ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಜೊತೆ ಕಾರ್ಯದರ್ಶಿ ಗುರುಪ್ರಸಾದ್ ರೈ ಸ್ವಾಗತಿಸಿದರು. ಸೀತಾರಾಮ ಗುರುಸ್ವಾಮಿ, ಉದಯ ಭಟ್ ಕೋರಿಕ್ಕಾರು, ಮುದ್ದುಮಂದಿರದ ವ್ಯವಸ್ಥಾಪಕಿ ಶ್ಯಾಮಲಾ ಎಸ್.ಎನ್.ಭಟ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾಂತಾ ಕುಮಾರಿ, ಬ್ಲಡ್ ಬ್ಯಾಂಕ್‌ನ ಡಾ| ಸೌಮ್ಯ, ಉಷಾ ಪಳ್ಳತ್ತಡ್ಕ, ಸೇವಾ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ಮಾತನಾಡಿದರು. ಕೋಶಾಧಿಕಾರಿ ನರೇಂದ್ರ ಬಿ.ಎನ್. ವಂದಿಸಿದರು.






