ಕಾಸರಗೋಡು: ಅಬೋಟ್ ಫಾರ್ಮಾಸ್ಯೂಟಿಕಲ್ ಕಂಪೆನಿಯಲ್ಲಿ ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ತಿರುವನಂತಪುರ ನಿವಾಸಿ ಮಿಥುನ್‌ರ ಸಾವಿಗೆ ಸಂಬಂಧಿಸಿ ಸಮಗ್ರ ಹಾಗೂ ನಿಷ್ಪಕ್ಷವಾದ ತನಿಖೆ ನಡೆಸಬೇಕೆಂದು ಬಿಎಂಎಸ್‌ಆರ್‌ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಉಪೇಂ ದ್ರನ್ ಕೆ. ಆಗ್ರಹಿಸಿದರು. ಮಿಥುನ್‌ರ ಸಾವಿನ ಮುಂಚಿತ ಕೆಲಸದ ಸ್ಥಳದಲ್ಲಿ ಉಂಟಾದ ಮಾನಸಿಕ ಒತ್ತಡ ಸಂಬಂ ಧಿಸಿದ ಆರೋಪಗಳು ಮೂಡಿ ಬಂದಿತ್ತು. ಘಟನೆಯಲ್ಲಿ ಸತ್ಯಾಂಶವನ್ನು ಪತ್ತೆಹಚ್ಚಲು ಸಂಬಂಧಪಟ್ಟವರು ಸಮಗ್ರ ತನಿಖೆ ನಡೆಸಬೇಕೆಂದು ಕಾರ್ಮಿಕರ ಹಕ್ಕು ಸಂರಕ್ಷಿಸುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಮಿಥುನ್‌ರ ಕುಟುಂಬಕ್ಕೆ ನ್ಯಾಯ ಖಚಿತಪಡಿಸಲು ಪ್ರಾಮಾಣಿಕವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ಧರಣಿಯ ಮುಂಚಿತವಾಗಿ ಕಾಸರಗೋಡು ಸರಕಾರಿ ಕಾಲೇಜಿನಿಂದ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜೊತೆ ಕಾರ್ಯದರ್ಶಿ ಗಳಾದ ದಿನೇಶ್ ಪಿ, ಹರೀಶ್ ಸಿದ್ದಿಬ ಯಲ್, ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ ಎಂಬಿವರು ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮನೀಶ್ ಬಿ., ಜಿಲ್ಲಾ ಪದಾಧಿಕಾರಿಗಳಾದ ಅರುಣ್ ಬಿ, ರವಿ ಪ್ರಸಾದ್ ಎಸ್, ಭರತ್‌ರಾಜ್, ಯೋಗೀಶ್ ಕೆ, ಅನಿಲ್ ಕುಮಾರ್, ವಿಖಿಲ್‌ದಾಸ್, ನಿಖಿಲ್ ನಾರಾಯಣನ್ ನೇತೃತ್ವ ನೀಡಿದರು. ಶರತ್ ಕುಮಾರ್ ಕೆ.ಎಸ್, ತೇಜಸ್ ಕೆ, ಶ್ರೀನಾಥ್ ಪಾಯಿಚ್ಚಾಲ್ ಮಾತನಾಡಿದರು.




