ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಮಂಜೇಶ್ವರ: ಕುಂಡುಕೊಳಕೆ ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ.

ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18)ನ ಮೃತದೇಹವನ್ನು ಮೀನು ಕಾರ್ಮಿಕರು ಪತ್ತೆಹಚ್ಚಿ ದಡಕ್ಕೆ ತಲುಪಿಸಿದ್ದಾರೆ. ಮೊನ್ನೆ ಸಂಜೆ ಕುಂಡು ಕೊಳಕೆ ಬೀಚ್‌ಗೆ ಸಂಬಂಧಿಕರೊಂದಿಗೆ ಬಂದಿದ್ದ ಮೊಹ್ಮದ್ ಸೈನುಲ್ ಆಬಿದ್ ಸಮುದ್ರ ಕಿನಾರೆಯಲ್ಲಿ ನಿಂತಿದ್ದ ವೇಳೆ ಬಲವಾದ ಅಲೆಯಲ್ಲಿ ಸಿಲುಕಿ ನಾಪತ್ತೆ ಯಾಗಿದ್ದನು. ಮಂಜೇಶ್ವರ ಪೊಲೀಸ್, ಅಗ್ನಿಶಾಮಕದಳ ಹಾಗೂ ಕರಾವಳಿ ಪೊಲೀಸರು ತಕ್ಷಣ ಶೋಧ ನಡೆಸಿ ದರೂ  ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ನಿನ್ನೆ ಶೋಧ ಪುನರಾರಂಭಿ ಸಲಾಗಿತ್ತು. ಈ ಮಧ್ಯೆ ಮಂಜೇಶ್ವರ ಕಡಪ್ಪುರ ನಿವಾಸಿಗಳೂ ಮೀನು ಕಾರ್ಮಿಕರಾದ ಬಶೀರ್, ಶರೀಫ್, ಖಲೀಲ್, ಅಸೀಸ್ ಎಂಬವರು ನಿನ್ನೆ ಸಂಜೆ ಸಮುದ್ರದಲ್ಲಿ ಶೋಧ ನಡೆಸುತ್ತಿದ್ದ ವೇಳೆ ಕುಂಡುಕೊಳಕೆಯಿಂದ ಸುಮಾರು ೨ ಕಿಲೋ ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ದಡಕ್ಕೆ ತಲುಪಿಸಿದ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಉದ್ಯಾವರ ಮಸೀದಿ ಪರಿಸರ ದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ತಂದೆ, ತಾಯಿ ರಸೀನ, ಓರ್ವ ಸಹೋದರ, ಮೂವರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page