ಕಾಸರಗೋಡು: ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ಬಾಲಕ ಸೂರ್ಯಾಘಾತಕ್ಕೊಳಗಾಗಿ ಸುಟ್ಟು ಗಾಯಗೊಂಡ ಘಟನೆ ನಡೆದಿದೆ.
ಹೊಸದುರ್ಗ ಇಟ್ಟುಮ್ಮಲ್‌ನ ರಹ್ಮಾನ್ ಪಾತ್ತೂರು-ಜುವೈರಿಯಾ ದಂಪತಿ ಪುತ್ರ ಮೊಹಮ್ಮದ್ ಜುಬೈರ್ (13) ಸೂರ್ಯಾಘಾತ ಕ್ಕೊಳಗಾದ ಬಾಲಕ. ಈತ ಸ್ನೇಹಿತ ರೊಂದಿಗೆ ಸುಡು ಬಿಸಿಲಲ್ಲಿ ಫುಟ್ಬಾಲ್‌ಆಟವಾಡುತ್ತಿದ್ದ ವೇಳೆ ತಾಪಾಘಾತಕ್ಕೊಳಗಾಗಿದ್ದು ಆತನನ್ನು ಅಜಾನೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ತಾಪಮಾನ ಮಟ್ಟ ಗರಿಷ್ಠ ಮಟ್ಟಕ್ಕೇರಿದ್ದು, ಇದರಿಂದ ಕಾಸರಗೋಡು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಾಪಮಾನ ಮಟ್ಟ ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ಏರುವ ಸಾಧ್ಯತೆ ಇದ್ದು ಆ ಹಿನ್ನೆಲೆಯಲ್ಲಿ ಜನರು ಗರಿಷ್ಠ ಜಾಗ್ರತೆ ಪಾಲಿಸಬೇಕೆಂದು ಹವಾಮಾನ ಇಲಾಖೆ ಕಠಿಣ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಹಗಲಿನ ವೇಳೆ ತಾಪಮಾನ ಮಟ್ಟ 37 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತಾಪಮಾನ ಮಟ್ಟ ಹೆಚ್ಚುತ್ತಿರುವುದು ಜನರಲ್ಲಿ ಭಾರೀ ಆರೋಗ್ಯ ಸಮಸ್ಯೆಗೆ ದಾರಿಮಾಡಿಕೊಡಲಿದೆ. ಆದ್ದರಿಂದ ಬೆಳಿಗ್ಗೆ ೧೧ ಗಂಟೆಯಿಂದ ಅಪರಾಹ್ನ ೩ ಗಂಟೆ ತನಕ ಬಿಸಿಲಲ್ಲಿ ದುಡಿಯುವುದು, ನಡೆಯುವುದನ್ನು ಹೊರತುಪಡಿಸಬೇಕು. ಪದೇ ಪದೇ ಶುದ್ಧನೀರು ಕುಡಿಯಬೇಕು. ಹಗಲಿನ ವೇಳೆ ಮದ್ಯಪಾನ, ಚಹಾ, ಕಾಫಿ ಹಾಗೂ ತಂಪು ಪಾನೀಯ ಸೇವಿಸು ವುದನ್ನು ಹೊರತುಪಡಿಸಬೇಕು. ನಸು ಬಣ್ಣದ ಹತ್ತಿ ಬಟ್ಟೆ ಧರಿಸಬೇಕು. ಮನೆಯಿಂದ ಹೊರಗಿಳಿಯುವ ವೇಳೆ ಚಪ್ಪಲಿ ಧರಿಸಬೇಕು. ತಲೆಗೆ ಟೋಪಿ ಅಥವಾ ಕೊಡೆ ಉಪಯೋಗಿ ಸಬೇಕು. ಹಣ್ಣು ಹಂಪಲು ಮತ್ತು ತರಕಾರಿಗ ಳನ್ನೇ ಹೆಚ್ಚಾಗಿ ಸೇವಿಸ ಬೇಕು. ಒಆರ್‌ಎಸ್ ಪಾನೀಯ, ಮಜ್ಜಿಗೆ ನೀರು ಕುಡಿಯಬೇಕು.
ತಾಪಮಾನಮಟ್ಟ ಏರಿಕೆಯಿಂದ ಬೆಂಕಿ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಾತ್ರವಲ್ಲ ಕಾಳ್ಗಿಚ್ಚಿಗೂ ದಾರಿಮಾಡಿಕೊಡುವ ಸಾಧ್ಯತೆ ಇದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಕುಡಿಯುವ ನೀರನ್ನು ಖಾತರಿಪಡಿಸಬೇಕು. ತರಗತಿ ಕೊಠಡಿಯೊಳಗೆ ಗಾಳಿ ಪ್ರವೇಶಿಸು ವಂತೆ ಮಾಡುವ ಸೌಕರ್ಯ ಏರ್ಪಡಿಸಬೇಕು. ವಿದ್ಯಾರ್ಥಿಗಳ ವಿಷಯದಲ್ಲಿ ಅಧ್ಯಾಪಕರು, ಹೆತ್ತವರು, ಶಾಲಾ ಶಿಕ್ಷಕ-ಶಿಕ್ಷಕಿ ಸಂಘದವರು ಗರಿಷ್ಠ ಜಾಗ್ರತೆ ಪಾಲಿಸಬೇಕು. ಅಂಗನವಾಡಿ ಮಕ್ಕಳ ಮೇಲೆ ಅತೀ ಹೆಚ್ಚಿನ ಗಮನಹರಿಸಬೇಕೆಂದು ರಾಜ್ಯ ಆರೋಗ್ಯ ಇಲಾಖೆ ನಿರ್ದೇಶ ನೀಡಿದೆ.







