ಬದಿಯಡ್ಕ: ಜನವರಿ 19ರಿಂದ 26ರವರೆಗೆ ನಡೆಯಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ನವೀಕರಣ, ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಯಾಗಿ ಉಪಸಮಿತಿ ಹಾಗೂ ಸರ್ವ ಸಮಿತಿಗಳ ಮಹಾಸಭೆ ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಿದ್ಧತೆಗಳು, ವಿವಿಧ ಸಮಿತಿಗಳ ಕಾರ್ಯಯೋಜನೆಗಳು ಹಾಗೂ ವಹಿಸಲಾಗಿರುವ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಲಾಂಛನ ಅನಾ ವರಣಗೊಳಿಸಲಾಯಿತು. ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಾಕಾರಿ ಕೆ. ಮಾಧವ ಹೇರಳ, ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ರಕ್ಷಾಕಾರಿ ಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನದ ಶಶಿಧರ ಭಟ್ ಆನೆಮಜಲು, ಮಹಿಳಾ ಸಮಿತಿ ಅಧ್ಯಕ್ಷೆ ಶಾರದಾ ಭಟ್, ಖಜಾಂಚಿ ಈಶ್ವರ ಭಟ್ ಕಿಳಿಂಗಾರು, ಪ್ರಧಾನ ಕಾರ್ಯದರ್ಶಿ ವಾಮನ ಆಚಾರ್ಯ, ಉಪಾಧ್ಯಕ್ಷ ಡಾ. ಶ್ರೀನಿದಿs ಸರಳಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ್ ಭಟ್ ಕುಂಜರಕಾನ, ಖಜಾಂಚಿ ವಾಸುದೇವ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರ್ಮಾ ಸೇರಿದಂತೆ ವಿವಿಧ ಸಮಿತಿಗಳ ಪದಾದಿsಕಾರಿಗಳು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವದ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು. ವಾಮನ ಆಚಾರ್ಯ ಸ್ವಾಗತಿಸಿ, ಕೆ.ಎಂ ಶರ್ಮಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈಶ್ವರ ಭಟ್ ಕಿಳಿಂಗಾರು ವಂದಿಸಿದರು.







