ಕಾಡು ಹಂದಿ ಸ್ಕೂಟಿಗೆ ಢಿಕ್ಕಿ ಹೊಡೆದು ನರ್ಸಿಂಗ್  ವಿದ್ಯಾರ್ಥಿನಿ ಸಹಿತ ಇಬ್ಬರಿಗೆ  ಗಾಯ

ಬೋವಿಕಾನ: ಇಲ್ಲಿಗೆ ಸಮೀಪದ ಮಂಜಕ್ಕಲ್ ಎಂಬಲ್ಲಿ ಕಾಡುಹಂದಿ ಸ್ಕೂಟಿಗೆ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ಕರಿವೇಡಗಂ ತಂಗೆತಡ್ಕದ ಸಿ.ಎಂ. ಜಿತಿನ ಹಾಗೂ ವಾಹನ ಚಲಾಯಿಸುತ್ತಿದ್ದ ಆಲತ್ತುಂಕಡವ್‌ನ ಪಿ. ಅಮಲ್‌ರಾಜ್ ಗಾಯಗೊಂಡವರು.

ನಿನ್ನೆ ಬೆಳಿಗ್ಗೆ ಮಂಜಕ್ಕಲ್‌ನಲ್ಲಿ ಕಾಡು ಹಂದಿ ಆಕ್ರಮಿಸಿದೆ. ಮನೆಯಿಂದ ಕಾಸರಗೋಡಿಗೆ ಆಗಮಿಸುತ್ತಿದ್ದಾಗ ರಸ್ತೆ ಅಡ್ಡ ದಾಟುತ್ತಿದ್ದ ಕಾಡು ಹಂದಿ ಸ್ಕೂಟಿಗೆ ಢಿಕ್ಕಿ ಹೊಡೆದಿದ್ದು, ಸವಾರರು ದೂರಕ್ಕೆಸೆಯಲ್ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎದೆಗೆ ಗಾಯಗೊಂಡ ಜಿತಿನಳನ್ನು ಕಾಸರಗೋಡು ಆಸ್ಪತ್ರೆಗೂ, ಬಳಿಕ ಮಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿದೆ. ಅಮಲ್‌ರಾಜ್‌ನನ್ನು ಚೆರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಮಂಜಕ್ಕಲ್ ಭಾಗದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

You cannot copy contents of this page