ಮಂಜೇಶ್ವರ: ಮತದಾನಕ್ಕಿನ್ನು ಕೇವಲ ಏಳೇ ದಿನಗಳು ಬಾಕಿ ಇರು ವಂತೆ ಮಂಜೇಶ್ವರ ವಿಧಾನಸಭಾ ಮಂಡ ಲದ ಪ್ರಮುಖ ಮೂವರು ಅಭ್ಯರ್ಥಿ ಗಳು ಪ್ರಚಾರದ ತುತ್ತತುದಿಯಲ್ಲಿ ಪರ್ಯಟನೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಮಂಗ ಲ್ಪಾಡಿ ಪಂಚಾಯತ್ನ ಬೇಕೂರು ಸಹಿತ ವಿವಿಧೆಡೆ ಕಾರ್ಯಕರ್ತರು ಎರಡನೇ ಹಂತದ ಮನೆ ಸಂಪರ್ಕ ನಡೆಸಿದರು. ಅಭ್ಯರ್ಥಿ ಕೆ. ಸುರೇಂದ್ರನ್ ನಿನ್ನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸಿದ್ದು, ಮಧ್ಯಾಹ್ನ ಕುಂಬಳೆ ಬಳಿಯ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಸಾಮೂಹಿಕ ವಿವಾಹ ಸಮಾ ರಂಭದಲ್ಲಿ ಭಾಗವಹಿಸಿದರು. ಇಂದು ಮೀಂಜ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸುವರು. ಬೆಳಿಗ್ಗೆ ಗಾಂಧಿನಗರದಿಂದ ಆರಂಭಿಸಿದ ಸಂಚಾರ ಮಜೀರ್ಪಳ್ಳ, ಕೋಳ್ಯೂರು ಸಹಿತ ವಿವಿಧೆಡೆಗಳಲ್ಲಿ ನಡೆದ ಕುಟುಂಬ ಸಂಗಮದಲ್ಲಿ ಭಾಗವಹಿಸಿದರು. ರಾತ್ರಿ ಕೂಟತ್ತಜೆಯಲ್ಲಿ ನಡೆಯುವ ದೈವಕೋಲಕ್ಕೂ ಭೇಟಿ ನೀಡುವರು.

ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಪರ್ಯಟನೆ ನಡೆಸಿದರು. ಬೆಳಿಗ್ಗೆ ಮುಸೋಡಿ ಅದಿಕದಿಂದ ಆರಂಭಗೊಂಡ ಪರ್ಯಟನೆ ಮಣಿಮುಂಡ, ಉಪ್ಪಳ ಗೇಟ್ ಸಹಿತ ಸಂಚರಿಸಿ ಉಪ್ಪಳ ಪೇಟೆಯಲ್ಲಿ ರಾತ್ರಿ ಸಮಾಪ್ತಿಗೊಂಡಿತು. ಯುಡಿಎಫ್ ಕಾರ್ಯಕರ್ತರು, ನೇತಾರರು ಭಾಗವಹಿಸಿದರು.

ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರ ಮೂರನೇ ಹಂತದ ಪರ್ಯಟನೆ ಆರಂಭಗೊಂಡಿತು. ಸಿಪಿಎಂ ಮಂಡಲ ಸಮಿತಿ ಸಭೆ ನಿನ್ನೆ ಆರಿಕ್ಕಾಡಿಯಲ್ಲಿ ಜರಗಿತು. ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿಸಿ ದರು. ರಘುದೇವನ್, ಸುಬೈರ್ ಕುಂಬಳೆ, ಕೆ.ಪಿ. ಸತೀಶ್ಚಂದ್ರನ್, ಬೇಬಿ ಬಾಲಕೃಷ್ಣ, ಶಾಲು ಮ್ಯಾಥ್ಯು ಭಾಗವಹಿಸಿದರು. ನಿನ್ನೆ ಎರಡನೇ ಹಂತದ ಪರ್ಯಟನೆ ಪೆರ್ಲ ವಾಣಿನಗರದಿಂದ ಆರಂಭಗೊಂಡು ಪೆರ್ಮುದೆಯಲ್ಲಿ ಮುಕ್ತಾಯಗೊಂಡಿತು. ಇಂದುಅಪರಾಹ್ನ ೩ ಗಂಟೆಗೆ ಕಡಂಬಾರ್ ಮಸೀದಿ ಪರಿಸರದಿಂದ ಆರಂಭಗೊಳ್ಳುವ ಪರ್ಯಟನೆ ಸಂಜೆ ಪೊಯ್ಯೆಯಲ್ಲಿ ಕೊನೆಗೊಳ್ಳಲಿದೆ.






