ಕುಂಬಳೆ: ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ ಪೆರ್ಣೆ ಜನಾರ್ದನ ಆಚಾರ್ಯ (71) ನಿಧನ ಹೊಂದಿದರು. ಇವರು ಬಡಗಿ ವೃತ್ತಿ ನಡೆಸುತ್ತಿದ್ದರು. ಇತ್ತೀಚೆಗೆ ಹೃದಯಾಘಾತವುಂಟಾದ ಇವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ.
ಮೃತರು ಪತ್ನಿ ಲಲಿತ, ಮಕ್ಕಳಾದ ಚಿತ್ರಲೇಖ, ವಿಜಯಲಕ್ಷ್ಮಿ, ಗಣೇಶ, ಮೋಹನ, ಭವ್ಯಶ್ರೀ, ಅಳಿಯ-ಸೊಸೆಯಂದಿರಾದ ಅಶೋಕ್ ಆಚಾರ್ಯ ಮೀಪುಗುರಿ, ಪುರೋಹಿತ ಕುಡಾಲ್ ದೇವಿಪ್ರಸಾದ್ ಶರ್ಮ ಮಂಜೇಶ್ವರ, ಮಹೇಶ್ ಆಚಾರ್ಯ ಪುತ್ತೂರು, ಅನಿತ, ದಿವ್ಯಶ್ರೀ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೀತಾಂಗೋಳಿ ಸಂತಾಪ ಸೂಚಿಸಿದೆ.