ಮನೆಯಿಂದ ನಗ-ನಗದು ಕಳವು ಕೆಲಸದಾಳು ವಿರುದ್ಧ ಕೇಸು

ಕಾಸರಗೋಡು: ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳವಿಗೀಡಾಗಿದ್ದು ಈ ಸಂಬಂಧ ಮನೆಯ ಕೆಲಸದಾಳು ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ನೀಲೇಶ್ವರ ಪೇರೂಲ್ ಆಲಪ್ಪಾಡ್ ಹೌಸ್‌ನ ಚಿನು ಮರಿಯ ಎಂಬವರ ಮನೆಯಿಂದ 21 ಗ್ರಾಂ ಚಿನ್ನ ಹಾಗೂ 17 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ.

ಈ ಸಂಬಂಧ ನೀಲೇಶ್ವರ ನಿವಾಸಿಯಾದ ಸುಲೋಚನ ಎಂಬಾಕೆ ವಿರುದ್ಧ ಕೇಸು ದಾಖಲಿಸಲಾಗಿದೆ. 2022ರಿಂದ  2026ರ  ಎಪ್ರಿಲ್ ವರೆಗೆ ದೂರುದಾತೆಯ ತಂದೆ, ತಾಯಿ ವಾಸಿಸುವ ಮನೆಯಲ್ಲಿ ಸುಲೋಚನ ಕೆಲಸಕ್ಕಿದ್ದಳೆನ್ನಲಾಗಿದೆ. ಈ ಕಾಲಾವಧಿಯಲ್ಲಿ ಮನೆಯಿಂದ ನಗ-ನಗದು ಕಳವಿಗೀಡಾಗಿ ರುವುದಾಗಿ ದೂರಲಾಗಿದೆ.

You cannot copy contents of this page