ಬೃಹತ್ ಪ್ರಮಾಣದ ವಾಶ್, ಮದ್ಯ ವಶ: ಓರ್ವನ ವಿರುದ್ಧ ಕೇಸು ದಾಖಲು

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಲೆಂದು ಸಿದ್ಧಪಡಿಸಿಡಲಾಗಿದ್ದ 260 ಲೀಟರ್ ಹುಳಿರಸ ಮತ್ತು 10 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಮಾಲೋಂ ಗ್ರಾಮದ ಎಡಕಾನ ನಿವಾಸಿ ಸಿನೋಜ್ ಎಂ.ಬಿ. ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಾಲೋಂ ಎಡಕಾನದಲ್ಲಿ ಈ ಅಬಕಾರಿ ಕಾರ್ಯಾಚರಣೆ ನಡೆದಿದೆ. ಬ್ಯಾರಲ್‌ಗಳು ಮತ್ತು ಕ್ಯಾನ್‌ಗಳಲ್ಲಾಗಿ ಹುಳಿರಸ ಮತ್ತು ಶರಾಬನ್ನು ತುಂಬಿಸಿಡ ಲಾಗಿತ್ತು. ಕಳ್ಳಭಟ್ಟಿ ಸಾರಾಯಿ ತಯಾರಿಸಲು ಉಪಯೋಗಿಸುದ್ದ ಉಪಕರಣಗಳನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಎಡಕ್ಕಾನದಲ್ಲಿ ಶೆಡ್ ನಿರ್ಮಿಸಿ ಅಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸ ಲಾಗುತ್ತಿತ್ತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಲಾದ ಮಾಲು ಗಳನ್ನು ನಂತರ ನೀಲೇಶ್ವರ ರೇಂಜ್ ಅಬಕಾರಿ ಕಚೇರಿಗೆ ಸ್ಥಳಾಂತರಿಸಲಾ ಯಿತು. ಪ್ರಿವೆಂಟಿವ್ ಆಫೀಸರ್‌ಗಳಾದ ಸೋನು ಸೆಬಾಸ್ಟಿನ್, ಶಿಜಿತ್ ವಿ.ವಿ, ಅತುಲ್ ಟಿ.ವಿ, ಸಿವಿಲ್ ಎಕ್ಸೈಸ್ ಆಫೀಸರ್ ಧನ್ಯ ಟಿ.ವಿ. ಎಂಬವರು ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

You cannot copy contents of this page