ಉದ್ಯೋಗ ಭರವಸೆ ನೀಡಿ ಯುವತಿ, ಯುವಕರು ಸೇರಿ 15ರಷ್ಟು ಮಹಿಳೆಯರಿಗೆ ವಂಚನೆ: ಕಾಸರಗೋಡಿನಲ್ಲೂ ಉದ್ಯೋಗ ವಂಚನೆ ಮಾಫಿಯ ತಂಡ ಸಕ್ರಿಯ

ಹೊಸದುರ್ಗ: ಕಣ್ಣೂರಿನ ಮಿಲಿಟರಿ ಕ್ಯಾಂಟೀನ್‌ನಲ್ಲಿ ಉದ್ಯೋಗ ಭರವಸೆ ನೀಡಿ 1 ಡಜನ್‌ಗಿಂತಲೂ ಹೆಚ್ಚು ಮಹಿಳೆಯರಿಂದ ಸರಾಸರಿ 25,000  ರೂ.ನಂತೆ ಅಪಹರಿಸಿರುವುದಾಗಿ ದೂರಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಓರ್ವ ಉನ್ನತ ಪೊಲೀಸ್ ಅಧಿಕಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗಾಗಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್‌ನ ಖಾಸಗಿ ಸಂಸ್ಥೆಯೊಂದರ ನೌಕರೆ ಅದೇ ಸಂಸ್ಥೆಯ ಇತರ ನೌಕರರಾದ ೧೫ರಷ್ಟು ಮಹಿಳೆಯರನ್ನು  ಪ್ರೋತ್ಸಾಹಿಸಿ ಸಿನೋಜ್  ಎಂಬಾತನೊಂದಿಗೆ ಸೇರಿ ವಂಚನೆಗೆ ದಾರಿ ಮಾಡಿರುವುದಾಗಿ ತೃಕರಿಪುರ ಎಡಚ್ಚಾಕೈ ಮಾಚಿಕ್ಕಾಡ್ ಪರಿಸರ ನಿವಾಸಿಗಳಾದ ದೂರುದಾರರು ತಿಳಿಸಿದ್ದಾರೆ.

ತೃಕರಿಪುರ ಸಮೀಪ ಪ್ರದೇಶದಲ್ಲಿರುವವರಾಗಿದ್ದಾರೆ ಈ ವಂಚನೆಗೆ ಬಲಿಯಾದವರು. ನಡಕ್ಕಾವ್ ನಿವಾಸಿ ಶೈನಿ ಎಂಬ ಮಹಿಳೆ ಕೇಂದ್ರ ಸರಕಾರಿ ಸಂಸ್ಥೆಯಾದ ಕಣ್ಣೂರಿನ ಮಿಲಿಟರಿ ಕ್ಯಾಂಟೀನ್‌ನಲ್ಲಿ ಉದ್ಯೋಗ ಭರವಸೆ ನೀಡಿರುವುದಾಗಿಯೂ, ಅದರ ಪ್ರಮುಖ ವ್ಯಕ್ತಿ ಜಿತೇಶ್ ಎಂಬವರಾಗಿದ್ದಾರೆಂದು ಶೈನಿ ತಿಳಿಸಿರುವುದಾಗಿಯೂ ದೂರಿನಲ್ಲಿ ವಿವರಿಸಲಾಗಿದೆ.

ಇದರೆಡೆಯಲ್ಲಿ ಕಿಶೋರ್ ಎಂಬ ವ್ಯಕ್ತಿ ಮಧ್ಯಸ್ಥನಾಗಿದ್ದಾನೆಂದು ಹೇಳಲಾಗಿದೆ. ಸುರಕ್ಷಿತವಾದ ಕೆಲಸ ಲಭಿಸಬಹುದೆಂಬ ಭರವಸೆಯ ಆಧಾರದಲ್ಲಿ ಶೈನಿ ಕಿಶೋರ್ ಹಾಗೂ ಜಿತೇಶ್‌ನನ್ನು ಸಂಪರ್ಕಿಸಿ ರುವುದಾಗಿಯೂ ಅದರ ಪ್ರಾಥಮಿಕ ವೆಚ್ಚಗಳಿಗಾಗಿ ಸರಾಸರಿ 25,೦೦೦ ರೂ.ನಂತೆ ವಸೂಲು ಮಾಡಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಗೂಗಲ್‌ಪೇ ಮೂಲಕ ಜಿತೇಶ್‌ಗೆ ಹಣ ಕಳುಹಿಸಿಕೊಟ್ಟಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಆದರೆ ಕಿಶೋರ್ ಹಾಗೂ ಜಿತೇಶ್ ಎಲ್ಲಿ ಇರುವವರಾಗಿದ್ದಾರೆಂದು ಶೈನಿ ತಿಳಿಸಿರಲಿಲ್ಲವೆಂದು ದೂರಿನಲ್ಲಿ ಹೇಳಲಾಗಿದೆ. ಇದೇ ವೇಳೆ ಇವರ ದೂರವಾಣಿ ಸಂಖ್ಯೆ ನೀಡಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಹಣ ನೀಡಲಾಗಿತ್ತು. ಹಣ ಸ್ವೀಕರಿಸಿದ ಬಳಿಕ ಕೂಡಲೇ ಕೆಲಸಕ್ಕೆ ಸೇರುವುದಕ್ಕಿರುವ ಪತ್ರ ಲಭಿಸುವುದಾಗಿ ಅವರು ತಿಳಿಸಿದ್ದರು. ಇದುವರೆಗೆ ಕಾದು ನಿಂತರೂ ಯಾವುದೇ ಪತ್ರ ಲಭಿಸಲಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಚಂದೇರ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಈ ರೀತಿಯ ಪ್ರಕರಣಗಳು ತಮ್ಮ ವ್ಯಾಪ್ತಿಗೆ ಹೊರತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆನ್ನಲಾಗಿದೆ.

RELATED NEWS

You cannot copy contents of this page