ಆಟೋ ಚಾಲಕ ಪಂಚಾಯತ್ ಕಚೇರಿಯ ಮೆಟ್ಟಿಲಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಆಟೋ ಚಾಲಕರೊಬ್ಬರು ಪಂಚಾಯತ್ ಕಚೇರಿಯ ಮೇಲಿನ ಮಹಡಿಗೆ ತೆರಳುವ ಮೆಟ್ಟಿಲಿನಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆ ನಡೆದಿದೆ.

ತಾಮರಶ್ಶೇರಿ ನಿವಾಸಿ ಮುರಳೀ ಧರನ್ (56) ಮೃತಪಟ್ಟ ವ್ಯಕ್ತಿ. ಪಂಚಾಯತ್ ಕಚೇರಿಯ ಸಮೀಪದಲ್ಲೇ ಇರುವ ಆಟೋ ಸ್ಟ್ಯಾಂಡ್‌ನಲ್ಲಿ ಮುರಳೀಧರನ್‌ರ ರಿಕ್ಷಾ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಟೋ ರಿಕ್ಷಾದ ಸಾಲ ಮರುಪಾವತಿ ಮೊಟಕು ಗೊಂಡ ಹಿನ್ನೆಲೆಯಲ್ಲಿ ಮುರಳೀಧರನ್ ಭಾರೀ ಚಿಂತೆಯಲ್ಲಿದ್ದರೆಂದು ಸ್ನೇಹಿತರು ತಿಳಿಸಿದ್ದಾರೆ. ಸಾಲ ಮೊಟಕುಗೊಂಡಿ ರುವುದರಿಂದ  ಫಿನಾನ್ಸ್‌ನ ನೌಕರರು ಮುರಳೀಧರನ್‌ರನ್ನು ಹುಡುಕಿಕೊಂಡು ಇತ್ತೀಚೆಗೆ ಆಟೋ ಸ್ಟ್ಯಾಂಡ್‌ಗೆ ತಲುಪಿದ್ದರು.  ಹಣ ಶೀಘ್ರ ಪಾವತಿಸು ವುದಾಗಿ ತಿಳಿಸಿದ್ದರೂ  ನೌಕರರು ಮುರಳೀಧರನ್‌ರಿಗೆ ಬೆದರಿಕೆಯೊಡ್ಡಿರು ವುದಾಗಿ ಸ್ನೇಹಿತರು ಆರೋಪಿಸಿದ್ದಾರೆ. ಅದರ ಬೆನ್ನಲ್ಲೆ ಮುರಳೀಧರನ್ ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

You cannot copy contents of this page