ಕುಂಬಳೆ: ಕಿದೂರು ಶ್ರೀ ಮಹಾದೇವ ಕ್ಷೇತ್ರ ಸಮೀಪದ ಹಿತ್ತಿಲಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕುಂಬಳೆ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ. ಅವರ ಕೈಯಿಂದ 2 ಕೋಳಿಗಳನ್ನು ಹಾಗೂ ೧೦೩೦ ರೂಪಾಯಿ ವಶಪಡಿಸಲಾಗಿದೆ. ಬೇಳ ಚೌಕಾರಿನ ಅಕ್ಷಯ್ (34), ಕಿದೂರು ಶಾಲೆ ಬಳಿಯ ಜನಾರ್ದನ (35), ಮೀಯಪದವು ಅಡ್ಕತ್ತಗುರಿ ಯ ಗಂಗಾಧರ ಮೂಲ್ಯ (63) ಎಂಬಿವರನ್ನು ಕುಂಬಳೆ ಎಸ್ಐ ಕೆ.ಪಿ. ಗಣೇಶನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ೩೦ರಷ್ಟು ಮಂದಿ ಕೋಳಿ ಅಂಕ ಸ್ಥಳದಲ್ಲಿದ್ದ ರೆಂದೂ ಇತರರು ಓಡಿ ಪರಾರಿಯಾ ಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸೆರೆಗೀಡಾದವರನ್ನು ನೋಟೀಸು ನೀಡಿ ಬಿಡಲಾಗಿದೆ. ಹಣ ಹಾಗೂ ಕೋಳಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ತಿಳಿಸಲಾಗಿದೆ.






