ಪುತ್ತಿಗೆ ಪಂಚಾಯತ್‌ನಲ್ಲಿ ಎಡರಂಗ ಬೆಂಬಲಿತ ಅವಳಿ ಮತಗಳು ವ್ಯಾಪಕವೆಂದು ದೂರು: ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್

ಕುಂಬಳೆ: ಪುತ್ತಿಗೆ ಪಂಚಾಯತ್ ನಲ್ಲಿ ಈ ಮೊದಲು ವಾಸಿಸಿದ್ದವರು ಬಳಿಕ ವಿವಾಹವಾಗಿ ಹೋದವರಿಗೆ ವ್ಯಾಪಕ ವಾಗಿ ಅವಳಿ ಮತಗಳಿರುವುದಾಗಿ ದೂರ ಲಾಗಿದೆ. ಈ ರೀತಿಯ ಅವಳಿ ಮತ ಗಳನ್ನು ಹೊರತುಪಡಿಸಲು ಲಿಖಿತವಾಗಿ ದೂರು ನೀಡಿದ್ದರೂ ಸಿಪಿಎಂ ಬೆಂಬಲಿತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್ ಪುತ್ತಿಗೆ ಪಂಚಾಯತ್ ಸಮಿತಿ ಪದಾಧಿ ಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಊರಿನ ಲ್ಲಿಲ್ಲದ ಮತದಾರರನ್ನು ಯಾದಿಯಿಂದ ತೆರವುಗೊಳಿಸಲು ಪಂಚಾಯತ್ಗೆ ಅರ್ಜಿ ನೀಡಲಾಗಿತ್ತು.ಇವರು ಹಿಯ ರಿಂಗ್ಗೆ ಹಾಜರಾಗುವುದರ ಬದಲಾಗಿ ಸಿಪಿಎಂ ಕಾರ್ಯಕರ್ತರು ದಾಖ ಗಳನ್ನು ನೀಡಿದ್ದಾರೆ. ಇದರ ಆಧಾರದಲ್ಲಿ ಯಾದಿಯಲ್ಲಿ ಇವರ ಹೆಸರನ್ನು ಉಳಿಸಿಕೊಳ್ಳಲಾಗಿದೆ ಯೆಂದು ಲೀಗ್ ಪದಾಧಿಕಾರಿಗಳು ಆರೋಪಿಸಿದ್ದಾರೆ. ಮೂರನೇ ವಾರ್ಡ್ ದೇರಡ್ಕದ ಪಾರ್ಟ್ ನಂಬರ್ 1ರ ಕ್ರಮಸಂಖ್ಯೆ 805ರಲ್ಲಿ ನ ವ್ಯಕ್ತಿಗೆ ಅವಳಿ ಮತವಿದೆ. ಹಿಯರಿಂಗ್ಗೆ ಹಾಜರಾಗಿದ್ದರೂ ದಾಖಲೆಗಳನ್ನು ನೀಡಿರಲಿಲ್ಲ. ಆಕ್ಷೇಪ ಹೊರಿಸಿದ ವ್ಯಕ್ತಿ ಪುರಾವೆ ಸಹಿತ ದೂರು ನೀಡಿದ್ದರೂ ಅವಳಿ ಮತವನ್ನು ಉಳಿಸಿಕೊಳ್ಳಲಾಗಿದೆ. ವಾರ್ಡ್ ಸಂಖ್ಯೆ 6 ಉರ್ಮಿ ಕ್ರಮಸಂಖ್ಯೆ 113, 116, 115, 40, 82, 83 ಇವರಿಗೆ ಬದಿಯಡ್ಕ ಪಂಚಾಯತ್ನ 4ನೇ ವಾರ್ಡ್ನಲ್ಲಿ ಕ್ರಮಸಂಖ್ಯೆ 146, 149,150, 159,276,259ರಲ್ಲಿ ಹೆಸರಿದೆ. ಇವರು ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಮಾಡದವರಾ ಗಿದ್ದಾರೆ. ಸರಿಯಾದ ಪುರಾವೆಗಳನ್ನು ನೀಡಿದ್ದರೂ ಪಂಚಾಯತ್ನ ಕೆಲವು ಅಧಿಕಾರಿಗಳ ನೇತೃತ್ವದಲ್ಲಿ ಈ ರೀತಿಯ ಅವ್ಯವಹಾg ಗಳು ನಡೆದಿದೆ ಯೆಂದು ಲೀಗ್ ಆರೋ ಪಿಸಿದೆ. ಪುತ್ತಿಗೆ ಪಂಚಾಯತ್ನಲ್ಲಿ ಯುಡಿಎಫ್ಗೆ ಗೆಲುವು ಸಾಧ್ಯತೆ ಇರುವ ವಾರ್ಡ್ಗಳಲ್ಲಿ ವ್ಯಾಪಕ ಅವಳಿ ಮತ ಕಂಡುಬರುತ್ತಿದ್ದು, ಈ ವಿಷಯವನ್ನು ಚುನಾವಣೆಯಲ್ಲಿ ಪ್ರಚಾರ ವಿಷಯವಾಗಿ ಸುವುದಾಗಿ ಪದಾಧಿಕಾರಿಗಳು ತಿಳಿಸಿ ದ್ದಾರೆ. ಈ ಬಗ್ಗೆ ನಡೆದ ಸುದ್ದಿಗೋಷ್ಠಿ ಯಲ್ಲಿ ಹಾದಿ ತಂಙಳ್, ಅಬ್ದುಲ್ಲ ಕಂಡ ತ್ತಿಲ್, ಇ.ಕೆ.ಮುಹಮ್ಮದ್ ಕುಂuಟಿಜeಜಿiಟಿeಜ, ಇಲ್ಯಾಸ್ ಹುದವಿ, ರಫೀಕ್ ಕಣ್ಣೂರು, ಅಬ್ದುಲ್ಲ ಕೆ.ಎಂ ಭಾಗವಹಿಸಿದರು.

RELATED NEWS

You cannot copy contents of this page