ಬದಿಯಡ್ಕ: ಕೇರಳ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್‌ರನ್ನು ಆಯ್ಕೆ ಮಾಡಿರುವುದಕ್ಕೆ ಹರ್ಷ ಸೂಚಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಮೆರವಣಿಗೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ನೇತಾರರಾದ ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಶ್ರೀನಾಥ್ ಬದಿಯಡ್ಕ, ರಾಮ ಪಟ್ಟಾಜೆ, ನಾರಾಯಣ ಭಂಡಾರಿ, ಲೋಹಿತಾಕ್ಷ ಪಟ್ಟಾಜೆ, ಕುಮಾರನ್ ನಾಯರ್, ರಜನಿ, ರವಿ ಕುಂಟಾಲುಮೂಲೆ, ಕೃಷ್ಣ ಕುಮಾರ್ ಪಿ, ಗಿರೀಶ್, ನಿಜೀಶ್ ಪಟ್ಟಾಜೆ, ಉದಯ ಕುಂಟಾಲುಮೂಲೆ, ಸತೀಶ್ ಪೆರುಮುಂಡ, ಖಮರುದ್ದೀನ್, ವಿನ್ಸೆಂಟ್ ವಿದ್ಯಾಗಿರಿ, ಶಾಫಿ ಗೋಳಿ ಯಡ್ಕ, ಸುಂದರ, ಶಾಫಿ ಗೋಳಿಯಡಿ, ಅಪ್ಪು ನಾಯ್ಕ, ಶರತ್, ಶ್ರೀಜಿತ್, ಶ್ರೇಯಸ್, ಪಂಚಾಯತ್ ಸದಸ್ಯರಾದ ಗಂಗಾಧರ ಗೋಳಿಯಡ್ಕ, ಅಶ್ವತಿ, ಲೀಲಾವತಿ ಮೊದಲಾದವರು ಭಾಗವಹಿಸಿದರು.
ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಹರ್ಷಾಚರಣೆ ನಡೆಸಲಾಯಿತು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಕೆ. ಖಾಲಿದ್, ಯುಡಿಎಫ್ ಜಿಲ್ಲಾ ಕಾರ್ಯದರ್ಶಿ ಎ. ಗೋವಿಂದನ್ ನಾಯರ್, ಕೆ.ವಿ. ಶಶಿಧರನ್, ಅರ್ಜುನನ್ ತಾಯಲಂಗಾಡಿ, ಕಮಲಾಕ್ಷ ಸುವರ್ಣ, ಸಿ.ಜೆ. ಟೋನಿ ಭಾಗವಹಿಸಿದರು.






