ಕಾಲ್ಚೆಂಡಾಟ ಮಧ್ಯೆ ವಿವಾದ: 11ರ ಬಾಲಕ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕೋಟ್ಟಯಂ: 11ರ ಹರೆಯದ ಬಾಲಕನನ್ನು ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈರಾಟ್‌ಪೇಟ ಕಿಡನಾಡ್ ಪೇಟೆಯಲ್ಲಿ ವಾಸಿಸುವ ಸುಭಾಷ್‌ರ ಪುತ್ರ ಆಮೋಸ್ ಮೃತಪಟ್ಟ ಬಾಲಕ. ಕಾಲ್ಚೆಂಡಾಟದ ಮಧ್ಯೆ ಸಹೋದರನೊಂದಿಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ.  ನಿನ್ನೆ ಸಂಜೆ ಆಟದ ಮಧ್ಯೆ ತರ್ಕವುಂಟಾಗಿತ್ತು. ಶಾಲೆಯಿಂದ ಬಂದ ಬಳಿಕ ಮೈದಾನದಲ್ಲಿ ಕಾಲ್ಚೆಂಡಾಟ ಆಡುತ್ತಿದ್ದ ಮಧ್ಯೆ ಸಹೋದರನೊಂದಿಗೆ ಜಗಳವುಂಟಾಗಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕ ಮನೆಗೆ ಮರಳಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಆಮೋಸ್ ತಿಡನಾಡ್ ಸರಕಾರಿ ಶಾಲೆಯ ೬ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

You cannot copy contents of this page