ಪುಲ್ಲೂರು ಪೆರಿಯ ಪಂಚಾಯತ್‌ನಲ್ಲಿ ಸಿಪಿಎಂ, ಕಾಂಗ್ರೆಸ್‌ನಿಂದ ಆಡಳಿತ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಂiiತ್‌ನ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ವೇಳೆ  ಎಲ್‌ಡಿಎಫ್ ಸದಸ್ಯನ  ಮತ ಅಸಿಂಧುಗೊಂಡಿದೆ. ಇದರಿಂದ ಕಲ್ಯೋಟ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಎಂ.ಕೆ.ಬಾಬುರಾಜ್ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿ ದ್ದಾರೆ. ಅಧ್ಯಕ್ಷ ಸ್ಥಾನ ನಿನ್ನೆ ಬೆಳಿಗ್ಗೆ ನಡೆದ ಚೀಟಿ ಎತ್ತುವಿಕೆಯಲ್ಲಿ ಸಿಪಿಎಂಗೆ ಲಭಿಸಿತ್ತು.

19 ಮಂದಿ ಸದಸ್ಯರುಳ್ಳ ಪಂಚಾಯತ್ ಆಡಳಿತ ಸಮಿತಿಯಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್‌ಗೆ ತಲಾ 9 ಮಂದಿ ಸದಸ್ಯರು, ಬಿಜೆಪಿಗೆ ಓರ್ವ ಸದಸ್ಯರಿದ್ದಾರೆ. ನಿನ್ನೆ ಬೆಳಿಗ್ಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಅಭ್ಯರ್ಥಿಗಳಿಗೆ  ಸಮಾನ ಮತಗಳು ಲಭಿಸಿತ್ತು. ಇದರಿಂದ  ನಡೆದ ಚೀಟಿ ಎತ್ತುವಿಕೆಯಲ್ಲಿ ಸಿಪಿಎಂನ ಸಿ.ಕೆ.ಸಬಿತಾರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಮಧ್ಯಾಹ್ನ ನಡೆದ ಉಪಾಧ್ಯಕ್ಷ ಚುನಾವಣೆಯಲ್ಲಿ ಯುಡಿಎಫ್‌ಗೆ ೯ ಮತಗಳು ಲಭಿಸುವುದರೊಂದಿಗೆ ಬಾಬುರಾಜ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿ ದ್ದಾರೆ. ಎಲ್‌ಡಿಎಫ್‌ನ ತಟ್ಟುಮ್ಮಲ್ ವಾರ್ಡ್ ಸದಸ್ಯೆ ನಳಿನಿಯ ಮತ ಅಸಿಂಧುಗೊಂಡಿತ್ತು.

You cannot copy contents of this page