ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈಬಾರಿ ಎಲ್ಡಿಎಫ್ನ ಮತಗಳು ಭಾರೀ ಪ್ರಮಾಣದಲ್ಲಿ ಯುಡಿಎಫ್ ಪರ ಸೋರಿಕೆಯುಂಟಾಗಿದೆಯೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ.
ಈ ಚುನಾವಣೆಯಲ್ಲಿ ಎಲ್ಡಿಎಫ್ಗೆ 20,000ದಷ್ಟು ಮತಗಳು ನಷ್ಟಗೊಂಡಿವೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮತೀಯ ಧ್ರುವೀಕರಣ ನಡೆದಿದೆ. ಮುಸ್ಲಿಂ ಲೀಗ್ ಮತ್ತು ಮತೀಯ ಮೂಲಭೂತವಾದಿ ಸಂಘಟನೆಗಳು ಮತೀಯ ಧ್ರುವೀಕರಣಕ್ಕೆ ಯತ್ನಿಸಿವೆ.ಮತೀಯ ಚಿಂತನೆ ಹೊಂದಿರುವ ಎಲ್ಲಾ ಮತೀಯ ಸಂಘಟನೆಗಳು ಆರಂಭದಿಂದಲೇ ಬಿಜೆಪಿಯನ್ನು ಪರಾಜಯಗೊಳಿಸಲು ಯತ್ನಿಸಿದ್ದವು. ಆದಾಗ್ಯೂ ಬಿಜೆಪಿಯ ಅಡಿಪಾಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಹೆಚ್ಚಿವೆ. ಬಿಜೆಪಿ ಮತಗಳಿಕೆಯಲ್ಲಿ ಭಾರೀ ಏರಿಕೆ ಉಂಟಾಗಿದ. ಇದನ್ನು ಪರಿಶೀಲಿಸಿದಾಗ ಜಿಲ್ಲೆಯಲ್ಲಿ ಬಿಜೆಪಿ ಉತ್ತಮ ಮುನ್ನಡೆ ಸಾಧಿಸಿದೆಯೆಂದು ಸುರೇಂದ್ರನ್ ಹೇಳಿದ್ದಾರೆ.
ಕೇರಳದಲ್ಲಿ ತೃತೀಯ ರಾಜಕೀಯ ಪರ್ಯಾಯ ಆಗ್ರಹಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆಯೆಂಬುವುದಕ್ಕೆ ಕೇರಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎಗೆ ಉಂಟಾದ ಗೆಲುವು ಉದಾಹರಣೆಯಾಗಿದೆ. ಕೇರಳ ಬಿಜೆಪಿಗೆ ಎಂದೂ ಏರಲು ಸಾಧ್ಯವಾಗದ ಒಂದು ಬೆಟ್ಟವಾಗಿದೆ. ಆದ್ದರಿಂದ ಇಲ್ಲಿ ಬಿಜೆಪಿ ಎಂದೂ ಖಾತೆ ತೆರೆಯದೆಂದು ಸದಾ ಹೇಳುತ್ತಾ ಬಂದಿದ್ದ ಎಡರಂಗ ಮತ್ತು ಐಕ್ಯರಂಗದ ವಾದಗಳನ್ನೆಲ್ಲಾ ಈ ಚುನಾವಣೆಯಲ್ಲ್ಲೂ ವಿಫಲಗೊಳಿಸಿ ದೆಯೆಂದು ಸುರೇಂದ್ರನ್ ಹೇಳಿದ್ದಾರೆ.






