ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಿರುಕು : ತನಿಖಾ ತಂಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

ಹೊಸದುರ್ಗ: ಚೆರುವತ್ತೂರು ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ರಸ್ತೆಯಲ್ಲಿ ಬಿರುಕು ಪತ್ತೆಯಾದ ಘಟನೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನೇಮಕ ಮಾಡಿದ ಆರ್‌ಡಿಒ ನೇತೃತ್ವದಲ್ಲಿರುವ ತನಿಖಾ ತಂಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಮಳೆಗಾಲದಲ್ಲಿ ದುರಂತ ಹೊರತುಪಡಿಸಲು ಕಠಿಣ ಕ್ರಮಗಳಿಗೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶ ನೀಡಿದ್ದಾರೆ. ಮುಂದಿನ ಕ್ರಮಗಳಿಗಾಗಿ ವರದಿ ಯನ್ನು ಸರಕಾರಕ್ಕೆ ಸಲ್ಲಿಸಲಾಗು ವುದು. ಹೆದ್ದಾರಿ ಪ್ರಾಧಿಕಾರದೊಂದಿಗೆ ಸೇರಿಕೊಂಡು ಮುಂದಿನ ನಿರ್ಮಾಣ ಚಟುವಟಿಕೆಗಳನ್ನು ನಿರೀಕ್ಷಿಸುವುದಕ್ಕೆ ಕಾಞಂಗಾಡ್ ಆರ್‌ಡಿಒರಿಗೆ ಜಿಲ್ಲಾಧಿಕಾರಿ ಹೊಣೆ ನೀಡಿದರು.

ನಿರ್ಮಾಣದಲ್ಲಿನ ಲೋಪದೋಷಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ತಜ್ಞರು ಪರಿಶೀಲಿಸಿ ಮಳೆಗಾಲಕ್ಕೆ ಮುಂಚಿತವಾಗಿ ಕ್ರಮ ಸ್ವೀಕರಿಸಬೇಕು, ಬಳಿಕ ನಿರ್ಮಾಣದಲ್ಲಿ ಲೋಪವುಂಟಾಗದಿರಲು ಜಾಗ್ರತೆ ಪಾಲಿಸಬೇಕೆಂದು ನಿರ್ದೇಶಿಸಲಾಗಿದೆ.

You cannot copy contents of this page