ಮೊಂಬತ್ತಿ, ಚಿಮಿಣಿ ದೀಪದ ಬೆಳಕಿನಲ್ಲಿ ಅಧ್ಯಯನ, ಬದುಕು: ವಿದ್ಯುತ್ ಕ್ರಾಂತಿಯ ಊರಿನಲ್ಲಿ ಈ ದುರವಸ್ಥೆ

ಕಾಸರಗೋಡು: ೨೬ ವರ್ಷ ದಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಬದುಕುತ್ತಿದ್ದ ಮೂರು ಕುಟುಂಬಗಳ ದುರವಸ್ಥೆ ಕೆಲವೇ ದಿನಗಳಲ್ಲಿ ಬದಲಾಗಲಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಮಂಡಲಕ್ಕೊಳಪಟ್ಟ ಕುಂಬಳೆ ಪಂಚಾಯತ್‌ನ ಕುಂಟಂಗೇರಡ್ಕ ಶಾಂತಿನಗರ ಎಸ್.ಸಿ ಉನ್ನತಿಯ ಅಭಿಮಾನ್‌ರ ಮನೆಗೆ ವಿದ್ಯುತ್ ಸಂಪರ್ಕ ಲಭಿಸಲಿದೆ. ಅಭಿಮಾನ್ ಹಾಗೂ ಪತ್ನಿ ಪಾರ್ವತಿ ಮತ್ತು  ಮಕ್ಕಳಾದ  ಕುಂಬಳೆ ಜಿಎಸ್‌ಬಿಎಸ್ ಶಾಲೆಯ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರ ಮುಖದಲ್ಲಿ ಚಿಮಿಣಿ ದೀಪದ ಬದಲಿಗೆ ಇನ್ನು ವಿದ್ಯುತ್ ಬಲ್ಬ್ ಮಿನುಗಲಿದೆ. ನಮಗೂ ವಿದ್ಯುತ್ ಲಭಿಸಲಿದೆ ಎಂಬ ಆನಂದ ಈಗ ಅವರ ಮುಖದಲ್ಲಿ ಪ್ರಕಾಶಿಸತೊಡಗಿದೆ.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ  ಈ ವಲಯದ ಬಿಜೆಪಿ ಚುನಾವಣೆ ಹೊಣೆಯಿದ್ದ ಕುಂಬಳೆ ಮಂಡಲ ಅಧ್ಯಕ್ಷ ವಿಕ್ರಮ್ ಪೈ ಗೃಹ ಸಂದರ್ಶನದಂಗವಾಗಿ ಕಾರ್ಯಕರ್ತರ ಜೊತೆ ಅಭಿಮಾನ್‌ರ ಮನೆಗೆ ತಲುಪಿದಾಗ ಮೂರು ಸೆಂಟ್ಸ್‌ನ ಒಂದು ಕೊಠಡಿಯಲ್ಲಿ ಚಿಮಿಣಿ  ದೀಪದ ಬೆಳಕಿನ ಸುತ್ತ ಕುಳಿತು  ಕಲಿಯುತ್ತಿರುವ ಮೂವರು ಮಕ್ಕಳ ಚಿತ್ರ ಮನಸ್ಸಿಗೆ ನಾಟಿತು. ಈ ಬಗ್ಗೆ ಕೇಳಿದಾಗ ಅವರ ಸಂಕಷ್ಟ ಜೀವನದ ಬಗ್ಗೆ ವಿವರಿಸಿದ್ದಾರೆ. ಕರ್ನಾಟಕ ನಿವಾಸಿಗಳಾದ ಹಕ್ಕಿ ಹಿಡಿಯುವ ವಿಭಾಗಕ್ಕೊಳಪಟ್ಟವರಾಗಿ ದ್ದಾರೆ ಅಭಿಮಾನ್ ಹಾಗೂ ಪತ್ನಿ. ಕರ್ನಾಟಕದಿಂದ ಕುಂಬಳೆಗೆ ತಲುಪಿದ ಇವರು ಊರಿನಲ್ಲಿ ಹಲವಾರು ಕೆಲಸಗಳನ್ನು ನಿರ್ವಹಿಸಿ ಬದುಕುತ್ತಿದ್ದರು. ಈ ಮಧ್ಯೆ ಕುಂಟಂಗೇರಡ್ಕದಲ್ಲಿ ಎಸ್.ಸಿ- ಎಸ್.ಟಿ ಉನ್ನತಿ ಕಾರ್ಯಾಚರಿಸುತ್ತಿರುವ ಬಗ್ಗೆ ತಿಳಿದು ಇದರ ಬಳಿಯಲ್ಲೇ ಪ್ಲಾಸ್ಟಿಕ್ ಹಾಗೂ ರಟ್ಟುಗಳನ್ನು ಉಪಯೋಗಿಸಿ ಮೇಲ್ಛಾ ವಣಿ ಸಿದ್ಧಪಡಿಸಿ ನಿರ್ಮಿಸಿದ ಮನೆಯಲ್ಲಿ ವಾಸ ಆರಂಭಿಸಿದರು. 20ಕ್ಕೂ ಅಧಿಕ ವರ್ಷ ಇವರು ತಿಂದುಂಡು ಜೀವಿಸಿ ರುವುದು ಈ ಗುಡಿಸಲಿನಲ್ಲಾಗಿದೆ.

ಈ ಮಧ್ಯೆ ಮಕ್ಕಳ ಕಲಿಕೆ ಹಾಗೂ ಬದುಕು ಅದೇ ಗುಡಿಸಲಿನ ಚಿಮಿಣಿ ದೀಪದ ಬೆಳಕಿನಲ್ಲಾಗಿತ್ತು. ಕೆಲವು ವರ್ಷದ ಹಿಂದೆ ಪ್ಲಾಸ್ಟಿಕ್ ಮೇಲ್ಛಾ ವಣಿಯನ್ನು ತೆಗೆದು ಗರಿಷ್ಠ ಮೂರು ಸೆಂಟ್ಸ್ ಸ್ಥಳದಲ್ಲಿ ಅವರು ಒಂದು ಶೀಟ್ ಹಾಕಿದ ಏಕ ಕೊಠಡಿ ಮನೆ ನಿರ್ಮಿಸಿದರು. ಈ ಮನೆ ಅವರಿಗೆ ಸ್ವರ್ಗ ಸಮಾನವಾಗಿತ್ತಾದರೂ ಅದರಲ್ಲಿ ಬೆಳಕಿಗಾಗಿ ಚಿಮಿಣಿ ದೀಪವನ್ನು ಆಶ್ರಯಿಸಿರುವುದು ನೋವುಂಟು ಮಾಡಿತ್ತು. ಈ ಮಧ್ಯೆ ವಿದ್ಯುತ್ ಸಂಪ ರ್ಕಕ್ಕಾಗಿ ಹಲವಾರು ಬಾಗಿಲುಗಳನ್ನು ತಟ್ಟಿದರು. ಆದರೆ ಎಲ್ಲಿಂದಲೂ ಅನು ಕೂಲಕರವಾದ ಪ್ರತಿಕ್ರಿಯೆ ಉಂಟಾ ಗಲಿಲ್ಲ. ಅಭಿಮಾನ್ ಹಾಗ ಪತ್ನಿ ಪಾರ್ವತಿ ಈ ವಿಷಯವನ್ನು ಹೇಳು ವಾಗ ಅವರ ಮುಖದಲ್ಲಿ ಹಾಗೂ ಮಾತಿ ನಲ್ಲಿ ನೋವು ತುಂಬಿ ತುಳುಕುತ್ತಿರುವು ದನ್ನು ಕಂಡಿರುವು ದಾಗಿ ವಿಕ್ರಮ್ ಪೈ ತಿಳಿಸಿದ್ದಾರೆ.

ಏನಿದ್ದರೂ ಚಿಮಿಣಿ ದೀಪದ ಬೆಳಕಿನಲ್ಲಿ ಈ ಕಾಲದಲ್ಲೂ ಮಕ್ಕಳು ಕಲಿಯುವುದು ಸೂಕ್ತವಲ್ಲವೆಂದು ವಿಕ್ರಮ್ ಪೈ ತಿಳಿಸಿದ್ದಾರೆ. ಎಲ್ಲರಿಗೂ ಮನೆ, ಎಲ್ಲಾ ಮನೆಗೂ ವಿದ್ಯುತ್- ಕುಡಿಯುವ ನೀರು ಎಂದೆಲ್ಲ ಹೇಳಿ ಜನರೆಲ್ಲ  ಹರ್ಷಚಿತ್ತರಾಗುತ್ತಿರುವ ನಮ್ಮ ನಾಡಿನಲ್ಲಿ ಈ ಹೇಳಿಕೆಗಳೆಲ್ಲ್ಲಾ ಬಡವರನ್ನು ವಂಚಿಸಲೋ ಎಂಬ ಆತಂಕ ಮೂಡಿ ಬರುತ್ತಿದೆ. ಚುನಾವಣೆ ಚಟುವಟಿಕೆಯ ಮಧ್ಯೆಯೇ ಅವರು ವಿದ್ಯುತ್ ಅಧಿಕಾರಿಗಳನ್ನು ಸಮೀಪಿಸಿ ದರು. ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾದ ಮೂಲಭೂತ ಷರತ್ತುಗಳನ್ನು ಅವರು ವಿವರಿಸಿದರು. ಕಟ್ಟಡ ನೆಲೆಗೊಂಡ ಸ್ಥಳಕ್ಕೆ ಇವರ  ಹೆಸರಿನಲ್ಲಿ ದಾಖಲೆ ಇಲ್ಲ. ಇತರ ಹಲವು ಷರತ್ತುಗಳನ್ನು ಲಿಖಿತವಾಗಿ ನೆರವೇರಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಹಾಗಾದರೆ ಪಕ್ಷ ಅವರಿಗೆ ಸೋಲಾರ್ ಲೈಟ್ ಏರ್ಪಡಿ ಸುವುದಾಗಿ ಪೈ ಪ್ರತಿಕ್ರಿಯಿಸಿದ್ದರು. ಅದು ಸವಾಲಾಗಿ ಪರಿಣಮಿಸಬಹುದೆಂದು ಶಂಕಿಸಿದ ಅಧಿಕಾರಿಗಳು ವಿದ್ಯುತ್ತೀ ಕರಣಕ್ಕೆ ವಯರಿಂಗ್ ಮಾಡಿಕೊಟ್ಟರೆ ಇತರ ವ್ಯವಸ್ಥೆಗಳನ್ನು ಏರ್ಪಡಿಸುವು ದಕ್ಕೆ ಒಪ್ಪಿಕೊಂಡರು. ಅದರಂತೆ ವಯರಿಂಗ್ ಪೂರ್ತಿಗೊಳಿಸಲಾ ಯಿತು. ಕೆಲವೇ ದಿನಗಳೊಳಗೆ ಈ ಗುಡಿಸಲಿನಲ್ಲಿ ವಿದ್ಯುತ್ ಬಲ್ಬ್ ಬೆಳಗಲಿದೆ. ಈ ಮನೆಗೆ ಹೊಂದಿ ಕೊಂಡು  ಇದೇ ವಿಭಾಗಕ್ಕೊಳಪಟ್ಟ ಇತರ ಎರಡು ಕುಟುಂಬಗಳಿವೆ. ಅವರಿಗೂ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ.

ಆದರೂ  ಅಲ್ಲಿರುವುದು ಶಾಲೆಗೆ ಹೋಗದ ಸಣ್ಣ ಮಕ್ಕಳಾಗಿದ್ದಾರೆ. ಹೀಗಿದ್ದರೂ ಅವರಿಗೂ ವಿದ್ಯುತ್ ಸಂಪರ್ಕ ಲಭ್ಯವಾಗುವಂತೆ ಮಾಡಲು ಯತ್ನ ಮುಂದುವರಿಸುತ್ತಿ ರುವುದಾಗಿ ಪೈ ತಿಳಿಸಿದ್ದಾರೆ.

You cannot copy contents of this page