ಸಂಘ ಪರಿವಾರದ ಹಿರಿಯ ಕಾರ್ಯಕರ್ತ ನಿಧನ

ಕುಂಬಳೆ: ಕಾನ ಪೊಟ್ನೋಟ ನಿವಾಸಿ, ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಸುಬ್ರಹ್ಮಣ್ಯ ಭಟ್ (87) ಶನಿವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಜನಸಂಘದ ಕಾಲದಿಂದಲೇ ಸಂಘ ಪರಿವಾರದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು. ಮೃತರು ಪತ್ನಿ ಲಕ್ಷಿ ಭಟ್, ಮಕ್ಕಳಾದ ಹರಿಪ್ರಸಾದ್, ಶಾಂತ, ರಾಜಶ್ರೀ, ಸೊಸೆ ದೀಪ, ಅಳಿಯಂದಿ ರಾದ ಸುರೇಶ್ ಭಟ್, ಗೋವಿಂದ ರಾಜ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು, ವಿವಿಧ ರಾಜಕೀಯ ನೇತಾರರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page