ಕೆವಿವಿಇಎಸ್  ರಾಜ್ಯಾಧ್ಯಕ್ಷರಾಗಿ ರಾಜು ಅಪ್ಸರ,  ಪ್ರಧಾನ ಕಾರ್ಯದರ್ಶಿಯಾಗಿ ಎಸ್. ದೇವರಾಜನ್ ಆಯ್ಕೆ

ತಿರುವನಂತಪುರ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಅಧ್ಯಕ್ಷರಾಗಿ ರಾಜು ಅಪ್ಸರ, ಪ್ರಧಾನ ಕಾರ್ಯದರ್ಶಿ ಯಾಗಿ  ಎಸ್. ದೇವರಾಜನ್‌ರನ್ನು ಆಯ್ಕೆ ಮಾಡಲಾಗಿದೆ.  ರಾಜ್ಯ ಕೋಶಾಧಿಕಾರಿಯಾಗಿ ಪಿ.ಸಿ.ಜೇಕಬ್‌ರನ್ನು ಅರಿಸಲಾಗಿದೆ. ತಿರುವನಂತಪುರದಲ್ಲಿ ನಡೆದ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳಾಗಿ ಪಿ.ಕೆ. ಬಾಪು ಹಾಜಿ (ಕಾರ್ಯಾಧ್ಯಕ್ಷ), ಎ.ಜೆ.ಶಾಜಹಾನ್, ಸಿ. ಧನೇಶ್‌ಚಂದ್ರನ್, ಜೋಜಿನ್ ಟಿ.ಜೋಯ್, ಸಣ್ಣಿ ಪೈಂಬಿಳ್ಳಿಲ್, ದೇವಸ್ಯ ಮೇಚೇರಿ, ಪಿ. ಕುಂಞಾವು ಹಾಜಿ, ಕೆ.ವಿ. ಅಬ್ದುಲ್ ಹಮೀದ್, ಬಾಬು ಕೋಟಯಿಲ್ (ಉಪಾಧ್ಯ ಕ್ಷರು), ಎಂ.ಕೆ. ತೋಮಸ್ ಕುಟ್ಟಿ, ಕೆ.ಅಹಮ್ಮದ್ ಶರೀಫ್, ವೈ. ವಿಜಯನ್, ವಿ. ಸಬಿಲ್‌ರಾಜ್, ಸಲೀಂ ರಾಮನಾಟುಕರ, ಜಿಮ್ಮಿ ಚಕ್ಕಿಯತ್ (ಕಾರ್ಯದರ್ಶಿಗಳು) ಎಂಬಿವರು ಆಯ್ಕೆಗೊಂಡಿದ್ದಾರೆ.

You cannot copy contents of this page